ಕಾಡುಗೊಲ್ಲರಿಗೂ ಪರಿಷತ್‌ ಪ್ರಾತಿನಿಧ್ಯ ನೀಡಿ: ಸಿ.ಜಿ.ನಂದಿಹಳ್ಳಿ ಪಾತಪ್ಪ

| Published : May 28 2024, 01:05 AM IST

ಕಾಡುಗೊಲ್ಲರಿಗೂ ಪರಿಷತ್‌ ಪ್ರಾತಿನಿಧ್ಯ ನೀಡಿ: ಸಿ.ಜಿ.ನಂದಿಹಳ್ಳಿ ಪಾತಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯೂರು ಪಟ್ಟಣದ ವೇದಾವತಿ ನಗರದ ಶ್ರೀ ಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಸೋಮವಾರ ಕಾಡುಗೊಲ್ಲ ಸಮುದಾಯಕ್ಕೆ ಎಂಎಲ್‌ಸಿ ಸ್ಥಾನ ನೀಡಬೇಕೆಂದು ಸಮುದಾಯದ ಮುಖಂಡರ ಸಭೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ಚಿತ್ರದುರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಬುಡಕಟ್ಟು ಕಾಡುಗೊಲ್ಲ ಸಮುದಾಯಕ್ಕೆ ಎಂಎಲ್ ಸಿ ಸ್ಥಾನ ನೀಡಬೇಕು ಎಂದು ಮಾಜಿ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಸಿ.ಜಿ.ನಂದಿಹಳ್ಳಿ ಪಾತಪ್ಪ ಆಗ್ರಹಿಸಿದರು.

ವೇದಾವತಿ ನಗರದ ಶ್ರೀಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾಡುಗೊಲ್ಲ ಸಮುದಾಯದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿ, ಕಾಡುಗೊಲ್ಲರು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಇತರೆ ಸಮುದಾಯಗಳಂತೆ ಅಭಿವೃದ್ಧಿ ಹೊಂದಿ ಮುಂದೆ ಬರಲು ನಮಗೆ ರಾಜಕೀಯ ಪ್ರಾತಿ ನಿಧ್ಯತೆ ಅವಶ್ಯಕತೆ ಇದೆ. ಈ ಹಿಂದೆ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಕಾಡುಗೊಲ್ಲರಿಗೆ ಟಿಕೆಟ್ ನೀಡಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿಯಾಗಿರುವ ಸುರ್ಜೆವಾಲರವರು ಭರವಸೆ ಕೊಟ್ಟಿದ್ದರು. ಆದರೆ ಟಿಕೆಟ್ ನೀಡಲಿಲ್ಲ. ನಮ್ಮನ್ನು ಕೆವಲ ಮತ ಬ್ಯಾಂಕ್ ಗಾಗಿ ಬಳಸಿಕೊಳ್ಳುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ಎರಡು ಲಕ್ಷ ಹಣ ಕಟ್ಟಿ ಜಿಲ್ಲೆಯಲ್ಲಿ ಹತ್ತಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಒಬ್ಬರಿಗೂ ಟಿಕೆಟ್ ನೀಡಲಿಲ್ಲ. ಇದೀಗ ಎಂಎಲ್‌ಸಿ ಚುನಾವಣೆಗೆ ಈ ಸಣ್ಣ ಸಮುದಾಯವನ್ನು ಪರಿಗಣಿಸಿ ನಮಗೆ ನ್ಯಾಯ ಕೊಡಬೇಕು ಎಂದರು.

ತಾಲೂಕಿನಲ್ಲಿ ಕೆ.ಹೆಚ್.ರಂಗನಾಥ್ ರವರ ಕಾಲದಿಂದಲೂ ನಾವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿದ್ದೇವೆ. ನಮ್ಮಲ್ಲಿ ಹಲವಾರು ಮಂದಿ ಪಕ್ಷದ ಏಳಿಗೆಗಾಗಿ ದುಡಿದಿದ್ದಾರೆ. ಜಿಲ್ಲೆಯಲ್ಲಿ ಬಹುಸಂಖ್ಯಾತರಿರುವ ನಮಗೆ ಒಂದೇ ಒಂದು ಬೋರ್ಡ್ ಅಧ್ಯಕ್ಷರನ್ನೂ ಸಹ ನೇಮಕ ಮಾಡಲಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಿಂದ ಐದು ಜನ ಶಾಸಕರಾಗಲು ಜನಾಂಗದ ಪಾತ್ರ ಮಹತ್ವದ್ದಾಗಿದ್ದನ್ನು ಕೈ ಹೈಕಮಾಂಡ್ ಗಮನದಲ್ಲಿಟ್ಟುಕೊಳ್ಳಬೇಕು. ಸಾಮಾಜಿಕ ನ್ಯಾಯದಡಿಯಲ್ಲಿ ಎಂಎಲ್ ಸಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಮಾಜಿ ನಗರಸಭಾ ಸದಸ್ಯ ಶಿವಣ್ಣ ಮಾತನಾಡಿ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೆ ಕಾಡುಗೊಲ್ಲರಿಗೆ ಸ್ಥಾನಮಾನ ಕಲ್ಪಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಚುನಾವಣಾ ಪ್ರಚಾರದ ವೇಳೆ ಭರವಸೆ ನೀಡಿದ್ದರು. ಅವರ ಮಾತಿಗೆ ಬದ್ಧರಾಗಿ ಸಮುದಾಯ ಎರಡು ಚುನಾವಣೆಯಲ್ಲೂ ಹೆಚ್ಚು ಹೆಚ್ಚು ಮತಗಳನ್ನು ನೀಡುವ ಮೂಲಕ ಪಕ್ಷವನ್ನು ಕೈ ಹಿಡಿದಿದೆ.

ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ನಮ್ಮ ಮತಗಳನ್ನು ಪಡೆದು ಸಚಿವರಾಗಿ, ಶಾಸಕರಾಗಿರುವವರು ಧ್ವನಿ ಇಲ್ಲದ ಸಮುದಾಯಕ್ಕೆ ಧ್ವನಿಯಾಬೇಕು. ಇಲ್ಲದಿದ್ದರೆ ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆಗಳಲ್ಲಿ ನಮ್ಮ ಶಕ್ತಿ ಪ್ರದರ್ಶನ ತೋರಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಶಿವರಂಜಿನಿ, ಹಿರಿಯ ಮುಖಂಡ ಎ.ಜಿ. ತಿಮ್ಮಯ್ಯ, ನಗರಸಭೆ ಸದಸ್ಯ ಚಿತ್ರಜಿತ್ ಯಾದವ್ , ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಕರಿಯಣ್ಣ, ಸದಸ್ಯ ಹರೀಶ್, ತಿಪ್ಪೇಸ್ವಾಮಿ, ಆಲಮರದಹಟ್ಟಿ ರಂಗಯ್ಯ, ಬಬ್ಬೂರು ಹೇಮಂತ್ ಯಾದವ್ , ಪಾಂಡುರಂಗಪ್ಪ, ಬೀರೇನಹಳ್ಳಿ ಪಾಂಡು, ನಾಗರಾಜ್, ಭರತ್ ಕುಮಾರ್, ಫಣಿರಾಜ್, ದಿನೇಶ್ ಮುಂತಾದವರು ಉಪಸ್ಥಿತರಿದ್ದರು.

ಮಂಜುನಾಥ್ ಎಂಎಲ್‌ಸಿ ಆಗಲಿ: ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು ಒತ್ತಾಯ

ಹಿರಿಯೂರು: ರಾಜ್ಯಮಟ್ಟದ ನಾಯಕರಾಗುವ ಎಲ್ಲಾ ಅರ್ಹತೆಗಳೂ ಇರುವ ಜಿ.ಎಸ್.ಮಂಜುನಾಥ್ ರವರಿಗೆ ಎಂಎಲ್‌ಸಿ ಸ್ಥಾನ ನೀಡಬೇಕು ಎಂದು ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು ಒತ್ತಾಯಿಸಿದರು.

ನಗರದ ರೋಟರಿ ಸಭಾಂಗಣದಲ್ಲಿ ಸೋಮವಾರ ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ರವರಿಗೆ ಎಂ.ಎಲ್.ಸಿ ಸ್ಥಾನ ನೀಡ ಬೇಕೆಂದು ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ ಮಾತನಾಡಿ, ಜಿ.ಎಸ್.ಮಂಜುನಾಥ್ ರವರು ಎಲ್ಲಾ ಜನಾಂಗದ ನಾಯಕರು. ಅವರ ಪಕ್ಷನಿಷ್ಠೆಗೆ ಪ್ರತಿಫಲ ಸಿಗಬೇಕಿದೆ ಎಂದರು.ನಗರಸಭೆ ಸದಸ್ಯ ಅಜಯ್ ಕುಮಾರ್ ಮಾತನಾಡಿ, ಸಚಿವರ ಗೆಲುವುಗಳಲ್ಲಿ ಜಿಎಸ್ ಬೆನ್ನೆಲುಬಾಗಿ ನಿಂತಿದ್ದಾರೆ. ಇದೀಗ ಖುದ್ದು ಸಚಿವರೇ ಮುಂದೆ ನಿಂತು ಮಂಜಣ್ಣನವರಿಗೆ ಎಂಎಲ್ಸಿ ಸ್ಥಾನ ಕೊಡಿಸುವ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ನಾಗೇಂದ್ರ ನಾಯ್ಕ, ಪಿ.ಎಸ್.ಪಾತಯ್ಯ, ಡಾ.ಸುಜಾತಾ, ಸಣ್ಣಪ್ಪ, ಪಿ.ಡಿ.ಕೋಟೆ ತಿಮ್ಮಣ್ಣ, ಕಲ್ಲಟ್ಟಿ ತಿಪ್ಪೇಸ್ವಾಮಿ, ಚಿಗಳಿಕಟ್ಟೆ ಕಾಂತರಾಜ್, ಎಸ್ ಆರ್ ತಿಪ್ಪೇಸ್ವಾಮಿ,ಅಂಜಿನಪ್ಪ ಮಾತನಾಡಿದರು. ಕಾಂಗ್ರೆಸ್ ಎಸ್‌ಸಿ ಸೆಲ್ ಅಧ್ಯಕ್ಷ ಜಿ.ಎಲ್. ಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಈ ಸಂದರ್ಭದಲ್ಲಿ ಮುಖಂಡರಾದ ಕಲ್ಲಟ್ಟಿ ಹರೀಶ್, ಕಿರಣ್ ಪಟ್ರೆಹಳ್ಳಿ, ತಾಪo ಮಾಜಿ ಅಧ್ಯಕ್ಷ ಚಂದ್ರಪ್ಪ, ದಯಾನಂದ್, ಜೀವೇಶ್,ಪುಟ್ಟೇಗೌಡ, ವಿ ಶಿವಕುಮಾರ್,ರಂಗಸ್ವಾಮಿ, ಘಾಟ್ ಮಂಜುನಾಥ್, ವಿ ಅರುಣ್ ಕುಮಾರ್, ವಿ ಗಿರೀಶ್, ಟೌನ್ ಶಿವು,ಕೇಶವಮೂರ್ತಿ, ಬುರುಜಿನರೊಪ್ಪ ರಘು, ಖಂಡೇನಹಳ್ಳಿ ಶಿವಕುಮಾರ್, ರಘು ನಾಯ್ಕ, ಪ್ರಕಾಶ್, ತಿಪ್ಪೇಸ್ವಾಮಿ, ನಾಗರಾಜ್, ರಘು, ಸುರೇಶ್, ಮಹಲಿಂಗಪ್ಪ, ಕೃಷ್ಣಮೂರ್ತಿ,ಕರ್ಣಕುಮಾರ್,ರವಿ, ಗೌರೀಶ್, ಪ್ರದೀಪ್, ಜ್ಞಾನೇಶ್,ಮುಂತಾದವರು ಹಾಜರಿದ್ದರು.

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಮಾತನಾಡಿ, ಶಾಸಕ, ಸಂಸದ ಸ್ಥಾನಗಳು ಜಿ.ಎಸ್.ಮಂಜುನಾಥ್ ರವರಿಗೆ ತಪ್ಪಿದ್ದು, ಈಗಲಾದರೂ ಪಕ್ಷದ ಪ್ರಮುಖ ನಾಯಕರು ಅವರಿಗೆ ಎಂಎಲ್‌ಸಿ ಸ್ಥಾನ ನೀಡಬೇಕು. ಎಲ್ಲಾ ವರ್ಗದ, ಎಲ್ಲಾ ಜನಾಂಗದ ನಾಯಕರಾಗಿರುವ ಅವರ ಶ್ರಮವನ್ನು ಪಕ್ಷ ಗುರುತಿಸಿ ಎಂಎಲ್‌ಸಿ ಸ್ಥಾನ ನೀಡಿ ಅವರ ಸೇವೆಯನ್ನು ಪಕ್ಷ ಇನ್ನಷ್ಟು ಪಡೆಯುವಂತಾಗಲಿ ಎಂದು ಒತ್ತಾಯಿಸಿದರು.