ಕಲೆ, ಸಂಸ್ಕೃತಿ ಬೆಳವಣಿಗೆಗೆ ಆದ್ಯತೆ ನೀಡಿ: ಸಿದ್ದರಾಮಸ್ವಾಮಿ

| Published : Aug 11 2024, 01:31 AM IST

ಕಲೆ, ಸಂಸ್ಕೃತಿ ಬೆಳವಣಿಗೆಗೆ ಆದ್ಯತೆ ನೀಡಿ: ಸಿದ್ದರಾಮಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಗಂಗಾವತಿ ನಗರದ ಕನ್ನಡ ಜಾಗೃತಿ ಸಮಿತಿಯಲ್ಲಿ ಜರುಗಿದ ಅರಳಹಳ್ಳಿ ಶ್ರೀ ರಾಜರಾಜೇಶ್ವರಿ ಬೃಹನ್ಮಠದ ರಾಜರಾಜೇಶ್ವರಿ ಜಾನಪದ ಕಲಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಗಂಗಾವತಿ: ಕಲೆ, ಸಂಸ್ಕೃತಿ ಬೆಳವಣಿಗೆಗೆ ಎಲ್ಲರೂ ಆದ್ಯತೆ ನೀಡಬೇಕು ಎಂದು ಜಿಪಂ ಮಾಜಿ ಸದಸ್ಯ ಎಚ್.ಎಂ. ಸಿದ್ದರಾಮಸ್ವಾಮಿ ಹೇಳಿದರು.

ನಗರದ ಕನ್ನಡ ಜಾಗೃತಿ ಸಮಿತಿಯಲ್ಲಿ ಜರುಗಿದ ಅರಳಹಳ್ಳಿ ಶ್ರೀ ರಾಜರಾಜೇಶ್ವರಿ ಬೃಹನ್ಮಠದ ರಾಜರಾಜೇಶ್ವರಿ ಜಾನಪದ ಕಲಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗಂಗಾವತಿ ತಾಲೂಕು ಕಲೆ, ಸಾಹಿತ್ಯದ ತವರೂರು ಎನಿಸಿಕೊಂಡಿದೆ. ಸಂಘಕ್ಕೆ ಆಯ್ಕೆಯಾಗಿರುವ ಪದಾಧಿಕಾರಿಗಳು ಪ್ರತಿ ತಿಂಗಳು ಸಂಗೀತ, ಸಾಹಿತ್ಯ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆ ನಡೆಸಬೇಕು ಎಂದರು.

ಸಮಾರಂಭದ ಸಾನ್ನಿಧ್ಯವನ್ನು ಗಡ್ಡಿ ಮಠದ ಶ್ರೀ ಸಂಗಮೇಶ್ವರ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ಫೂರ್ತಿ ಆಯುರ್ವೇದಿಕ್ ಕಾಲೇಜಿನ ಡಾ. ಬಸವರಾಜ ಸವಡಿ, ಮುಖ್ಯ ಅತಿಥಿಗಳಾಗಿ ಚನ್ನಬಸವ ಮಹಿಳಾ ಕಾಲೇಜಿನ ಉಪನ್ಯಾಸಕ ಡಾ. ಅರ್ಚನಾ ಹಿರೇಮಠ, ಹಿರೇಜಂತಕಲ್ಲಿನ ಎಸ್.ಬಿ. ಹಿರೇಮಠ ಕಣ್ಣೂರು, ಸದಾನಂದ ಶೇಟ್, ರಜಿಯಾಬೇಗಂ, ಶರಣಬಸವ ದೇವರು ಇತರರು ಪಾಲ್ಗೊಂಡಿದ್ದರು.

ಪದಾಧಿಕಾರಿಗಳು: ಸಂಘದ ನೂತನ ಅಧ್ಯಕ್ಷರಾಗಿ ಶರಣಬಸವ ಆರ್.ಬಿ., ಉಪಾಧ್ಯಕ್ಷರಾಗಿ ಡಾ. ಬಸವರಾಜ ಸವಡಿ, ಕಾರ್ಯದರ್ಶಿಗಳಾಗಿ ರೇವಣಸಿದ್ದಯ್ಯ ತಾತನವರು, ಸಹಕಾರ್ಯದರ್ಶಿಗಳಾಗಿ ಕಳಕನಗೌಡ ಕಲ್ಲೂರು, ಖಜಾಂಚಿಗಳಾಗಿ ಡಾ. ಅಮರೇಶ ಪಾಟೀಲ್, ಸದಸ್ಯರಾಗಿ ಡಾ. ಶಿವಕುಮಾರ ಮಾಲಿಪಾಟೀಲ್, ಡಾ. ಎಚ್. ಮಲ್ಲನಗೌಡ, ಡಾ. ಅರ್ಚನಾ ಹಿರೇಮಠ, ಆನಂದ ಕೆಲೋಜಿ, ಪ್ರಭಾಕರ ಚಿನ್ನುಪಾಟಿ, ಶ್ರುತಿ, ವೀರೇಶ ಮ್ಯಾಗೇರಿ, ಡಾ. ಹನುಮಂತಪ್ಪ ಹೆಗಡೆ, ಡಾ. ಐಶ್ವರ್ಯ ಬೃಹನ್ಮಠ, ಅರಳಹಳ್ಳಿ ಗ್ರಾಮದವರಾದ ದೊಡ್ಡಣ್ಣ ಕರಿಶೆಟ್ಟಿ, ಸಿದ್ದನಗೌಡ, ಕನಕಪ್ಪ, ಹನುಮೇಶ, ಯಮನೂರಪ್ಪ, ಕಾನೂನು ಸಲಹೆಗಾರರಾಗಿ ಡಾ. ಷಣ್ಮುಖಸ್ವಾಮಿ ಕಡ್ಡಿಪುಡಿ ವಕೀಲರು ಆಯ್ಕೆಯಾದರು.