ಸಾರಾಂಶ
ಇಲ್ಲಿಗೆ ಸಮೀಪದ ಕೊಮಾರನಹಳ್ಳಿ ರಂಗನಾಥಸ್ವಾಮಿ ಕೆರೆ ಆವರಣದಲ್ಲಿ ಹರಳಹಳ್ಳಿ ಆಂಜನೇಯಸ್ವಾಮಿ ಕಾರ್ಣೀಕೋತ್ಸವವು ಅಪಾರ ಭಕ್ತರ ಸಮ್ಮುಖ ಅದ್ಧೂರಿಯಾಗಿ ಸಂಪನ್ನಗೊಂಡಿತು. "ಮುತ್ತಿನ ರಾಶಿಗೆ ಸರ್ಪ ಸುತ್ತಿತಲೇ, ಸರ್ಪಕ್ಕೆ ಹದ್ದು ಹಾಲು ಉಣಿಸಿತಲೇ, ಅನ್ನ ನೀರು ಸಂತೃಷ್ಠಿ " ಎಂದು ಕಾರ್ಣೀಕ ನುಡಿಯಲಾಗಿದೆ.
ಮಲೇಬೆನ್ನೂರು: ಇಲ್ಲಿಗೆ ಸಮೀಪದ ಕೊಮಾರನಹಳ್ಳಿ ರಂಗನಾಥಸ್ವಾಮಿ ಕೆರೆ ಆವರಣದಲ್ಲಿ ಹರಳಹಳ್ಳಿ ಆಂಜನೇಯಸ್ವಾಮಿ ಕಾರ್ಣೀಕೋತ್ಸವವು ಅಪಾರ ಭಕ್ತರ ಸಮ್ಮುಖ ಅದ್ಧೂರಿಯಾಗಿ ಸಂಪನ್ನಗೊಂಡಿತು. "ಮುತ್ತಿನ ರಾಶಿಗೆ ಸರ್ಪ ಸುತ್ತಿತಲೇ, ಸರ್ಪಕ್ಕೆ ಹದ್ದು ಹಾಲು ಉಣಿಸಿತಲೇ, ಅನ್ನ ನೀರು ಸಂತೃಷ್ಠಿ " ಎಂದು ಕಾರ್ಣೀಕ ನುಡಿಯಲಾಗಿದೆ.
ಸುತ್ತ ಹರಳಹಳ್ಳಿ, ಮಲೇಬೆನ್ನೂರು, ಹಾಲಿವಾಣ, ಎರೆಹಳ್ಳಿ, ಕೊಪ್ಪ, ತಿಮ್ಲಾಪುರ, ದಿಬ್ಬದಹಳ್ಳಿ ಗ್ರಾಮಗಳ ಸಹಸ್ರಾರು ಭಕ್ತರು ಭಾಗವಹಿಸಿದ್ದರು. ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.ದೇವರಬೆಳಕೆರೆ ಶ್ರೀ ಮೈಲಾರಲಿಂಗೇಶ್ವರ ಕಾರ್ಣೀಕವು ಶುಕ್ರವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖ ಜರುಗಿದ್ದು, "ಕಂಬಳಿ ಬೀಸಿತಲೇ, ರಾಶಿ ತುಂಬಿತಲೇ ಪರಾಕ್ " ಎಂದು ದೈವಾಣಿ ತಿಳಿಸಿದೆ. ಸಮೀಪದ ಕುಂಬಳೂರಿನ ಹನುಮಂತ ದೇವರ ಕಾರ್ಣೀಕದಲ್ಲಿ "ಬಂಗಾರದ ಜಿಂಕೆ ಜಿಗಿದು ಹಾರೀತು, ದೇವೇಂದ್ರನ ಐರಾವತ ಭೂಮಿಗೆ ಇಳಿದೀತು, ಕರೆ ಮಾರಿ ಊರೂರು ತಿರುಗ್ಯಾಳು ಸಂಪು.. " ಎಂಬ ದೈವವಾನಿ ನುಡಿಯಲಾಗಿದೆ.
ಇನ್ನು ನಂದಿಗುಡಿಯಲ್ಲಿ ಕೊಕ್ಕನೂರು ಗ್ರಾಮದ ಆಂಜನೇಯಸ್ವಾಮಿ ಕಾರ್ಣೀಕದಲ್ಲಿ "ಬಂಗಾರದ ಮಣ್ಣಿನಲ್ಲಿ ಬೆಳ್ಳಿಲಿಂಗ ಮೂಡಿತು, ಆ ಲಿಂಗದ ಮೇಲೆ ಕಾಳಿಂಗ ಸರ್ಪ ಕುಂತೀತು, ಆ ಸರ್ಪಕ್ಕೆ ಗರುಡ ಕುಕ್ಕಿತಲೇ ಎಚ್ಚರ.. " ಎಂದೂ ದೈವವಾಣಿಯಾಗಿದೆ.