ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಬಾಗಲಕೋಟ-ವಿಜಯಪುರ ಅವಳಿ ಜಿಲ್ಲೆಯ ಬಡ ಉದ್ಯೋಗಾಕಾಂಕ್ಷಿಗಳು ತಮ್ಮ ಜೀವನ ರೂಪಿಸಿಕೊಳ್ಳಲು ಆಗಸ್ಟ್ 14 ರಂದು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಮೇಳವನ್ನು ಸದುಪಯೋಗಪಡಿಸಿಕೊಳ್ಳುವಂತೆ ಲಾಜಿಕ್ ಕಂಪ್ಯೂಟರ್ ಸೆಂಟರ್ ನಿರ್ದೇಶಕ ಮಹೇಶ್ ಭಟ್ ಹೇಳಿದರು.ಎಂ.ಜಿ.ವ್ಹಿ.ಸಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗ ಕಾಲೇಜ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಜಿವ್ಹಿಸಿ ಟ್ರಸ್ಟ್‌ನ ಆಶ್ರಯದ ಅಡಿಯಲ್ಲಿ ಆ.14ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ. ಇವರೆಗೂ 400 ಕ್ಕೂ ಹೆಚ್ಚು ಆನ್‌ಲೈನ್ ಅರ್ಜಿ ಬಂದಿದ್ದು, ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಯಾವುದೇ ಪದವಿ, ಸ್ನಾತಕೋತ್ತರ ಪದವಿ, ಪಿಎಚ್.ಡಿ ಮುಗಿದು ಉದ್ಯೋಗ ಹುಡುಕುತ್ತಿರುವವರು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.ಈ ವೇಳೆ ಎಸ್.ಜಿವಿಸಿವಿಪಿ ಟ್ರಸ್ಟ್‌ನ ಕಾರ್ಯದರ್ಶಿ ಅಶೋಕ ತಡಸದ ಮಾತನಾಡಿ, ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗುವುದಿಲ್ಲ. ಎಲ್ಲರಿಗೂ ಉದ್ಯೋಗ ಕಲ್ಪಿಸುವ ಮಹತ್ವಾಕಾಂಕ್ಷೆಯಿಂದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು, ನಿರುದ್ಯೋಗಿ ಯುವ ಜನತೆ ಸದುಪಯೋಗಪಡಿಸಿಕೊಳ್ಳುವಂತೆ ಅವರು ಹೇಳಿದರು.ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪನಿಗಳು ಉದ್ಯೋಗಾಂಕಾಂಕ್ಷಿಗಳಿಗೆ ಸ್ಥಳದಲ್ಲೇ ನೇಮಕಾತಿ ಆದೇಶಗಳನ್ನು ನೀಡಲಾಗುತ್ತದೆ ಎಂದು ಎಂಜಿವಿಸಿ ಕಾಲೇಜು ಪ್ರಾಂಶುಪಾಲ ಎಸ್.ಎನ್ ಪೊಲೇಶಿ ಮಾಹಿತಿ ಹೇಳಿದರು. ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಲು ಇಚ್ಛಿಸಿದಲ್ಲಿ ಸ್ಕ್ಯಾನರ್ ಮೂಲಕ ರಿಜಿಸ್ಟರ್ ಆಗಬಹುದು. ಹೆಚ್ಚಿನ ಮಾಹಿತಿಗಾಗಿ 7829529043 ಸಂಪರ್ಕಿಸಿ.
ಈ ವೇಳೆ ಎಸ್.ಜಿವಿಸಿವಿಪಿ ಟ್ರಸ್ಟ್ ನ ಎ.ಬಿ ಕುಲಕರ್ಣಿ, ಟ್ರಸ್ಟ್‌ನ ಶಿವರಾಜ ತಡಸದ, ಪ್ರಾಧ್ಯಾಪಕರಾದ ಎಂ.ಐ ಬಿರಾದಾರ, ಎ.ಎ.ಮುಲ್ಲಾ, ಎಸ್.ಎಂ.ನಿಂಬಳಗುಂದಿ, ಎ.ಎಸ್.ಬಾಗಬಾನ್ ಇದ್ದರು.)
;Resize=(128,128))
;Resize=(128,128))