ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಗುಣಾತ್ಮಕ ಶಿಕ್ಷಣ ನೀಡಿ

| Published : Sep 21 2024, 02:00 AM IST

ಸಾರಾಂಶ

ಖಾಸಗಿ ವಿದ್ಯಾಸಂಸ್ಥೆಗಳೂ ಸಹ ಶೈಕ್ಷಣಿಕ ಪ್ರಗತಿಗೆ ಸಾಕಷ್ಟು ಪರಿಶ್ರಮವಹಿಸುತ್ತಿವೆ. ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಗುಣಾತ್ಮಕ ಶಿಕ್ಷಣ ನೀಡಿ, ಅವರ ಭವಿಷ್ಯದ ಬದುಕನ್ನು ಉಜ್ವಲಗೊಳಿಸುವಂತಹ ಶಿಕ್ಷಣವನ್ನು ಶಿಕ್ಷಕರು ನೀಡಬೇಕಿದೆ ಎಂದು ಕೇರಳ ರಾಜ್ಯ ವಯನಾಡು ಜಿಲ್ಲಾಧಿಕಾರಿ ಆರ್.ಮೇಘಶ್ರೀ ತಿಳಿಸಿದರು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ಖಾಸಗಿ ವಿದ್ಯಾಸಂಸ್ಥೆಗಳೂ ಸಹ ಶೈಕ್ಷಣಿಕ ಪ್ರಗತಿಗೆ ಸಾಕಷ್ಟು ಪರಿಶ್ರಮವಹಿಸುತ್ತಿವೆ. ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಗುಣಾತ್ಮಕ ಶಿಕ್ಷಣ ನೀಡಿ, ಅವರ ಭವಿಷ್ಯದ ಬದುಕನ್ನು ಉಜ್ವಲಗೊಳಿಸುವಂತಹ ಶಿಕ್ಷಣವನ್ನು ಶಿಕ್ಷಕರು ನೀಡಬೇಕಿದೆ ಎಂದು ಕೇರಳ ರಾಜ್ಯ ವಯನಾಡು ಜಿಲ್ಲಾಧಿಕಾರಿ ಆರ್.ಮೇಘಶ್ರೀ ತಿಳಿಸಿದರು.

ಅವರು, ಖಾಸಗಿ ಕಾರ್ಯಕ್ರಮ ನಿಮಿತ್ತ ತಮ್ಮ ಹುಟ್ಟೂರು ದೊಡ್ಡೇರಿಗೆ ಆಗಮಿಸಿದ ಸಂದರ್ಭದಲ್ಲಿ ಪ್ರಗತಿ ವಿದ್ಯಾಲಯ ಆಡಳಿತ ಮಂಡಳಿ ಮನವಿ ಮೇರೆಗೆ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಯಾವುದೇ ಸಂದರ್ಭದಲ್ಲೂ ವಿದ್ಯಾರ್ಥಿಗಳ ಕಲಿಕೆಗೆ ಧಕ್ಕೆಯಾಗದಂತೆ, ಎಲ್ಲಾ ಹಂತದಲ್ಲೂ ಶಿಕ್ಷಕರು, ಆಡಳಿತ ಮಂಡಳಿ ಮುಂಜಾಗ್ರತೆ ವಹಿಸಬೇಕು. ನಗರಂಗೆರೆಯಂತಹ ಗ್ರಾಮದಲ್ಲಿ ಭವ್ಯವಾದ ಶಾಲಾ ಕಟ್ಟಡ ನಿರ್ಮಿಸಿ, ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡುವ ಶಾಲಾ ಆಡಳಿತ ಮಂಡಳಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಶಿಕ್ಷಕರು ನೀಡುವ ಬೋಧನೆಯನ್ನು ಅರ್ಥೈಸಿಕೊಳ್ಳುವಲ್ಲಿ ಹಿಂದೆ ಬೀಳಬಾರದು. ಯಾವುದೇ ವಿಚಾರದಲ್ಲಿ ಸಂದೇಹ ಉಂಟಾದಲ್ಲಿ ಕೂಡಲೇ ಶಿಕ್ಷಕರನ್ನು ಸಂಪರ್ಕಿಸಬೇಕು. ಶಿಕ್ಷಣದಲ್ಲಿ ಪ್ರಗತಿಯನ್ನು ಸಾಧಿಸಬೇಕೆಂಬ ಸಂಕಲ್ಪವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದರು.

ಪ್ರಗತಿ ವಿದ್ಯಾಲಯದ ಪ್ರಾಂಶುಪಾಲೆ ಡಾ. ಚಿತ್ರಸುಬ್ರಮಣ್ಯಂ ಮಾತನಾಡಿ, ನಮ್ಮ ವಿದ್ಯಾಸಂಸ್ಥೆಗೆ ನಮ್ಮ ತಾಲೂಕಿನವರಾದ ಕೇರಳ ಜಿಲ್ಲಾಧಿಕಾರಿಗಳು ಆಗಮಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಅವರು ನಿಮ್ಮಂತೆಯೇ ಶಾಲೆಯಲ್ಲಿ ಕಲಿತು ಉತ್ತಮ ಭವಿಷ್ಯವನ್ನು ರೂಪಿಸಿಕೊಂಡವರು ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೂ ಸಹ ಅವರ ಮಾರ್ಗದರ್ಶನ ದೊರೆಯಲಿ ಎಂದು ಅವರನ್ನು ಆಮಂತ್ರಿಸಿದ್ದೆವು. ಅವರು ಆಗಮಿಸಿ ಶಾಲಾ ಮಕ್ಕಳಿಗೆ ಉತ್ತಮ ಸಲಹೆ, ಸೂಚನೆ ನೀಡಿದ್ದಾರೆ. ಆಡಳಿತ ಮಂಡಳಿ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ. ಮೇಘಶ್ರೀ ತಂದೆ ರುದ್ರಮುನಿಯಪ್ಪ, ಪತಿ ವಿಕ್ರಂಸಿಂಹ, ಪ್ರಗತಿ ವಿದ್ಯಾಲಯದ ನಿರ್ದೇಶಕ ಕೆ. ರಮೇಶ್‌ಬಾಬು, ಶ್ರೀನಿವಾಸ್, ಆಡಳಿತಾಧಿಕಾರಿ ವೈಷ್ಣವಿ ಧಗೆ, ಕೋ ಆಡಿನೇಟರ್ ಮಾಲೀ ನಿಜಾನ್, ವಿ. ವಾಣಿ, ಎಂ. ನಾಗೇಶ್, ವೈ. ಕಾವ್ಯ ಮುಂತಾದವರು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಕೆ. ಆರ್ಚನ ಸ್ವಾಗತಿಸಿ ವಂದಿಸಿದರು.