ಸಾರಾಂಶ
ಕುರುಗೋಡು: ದುಡಿಯುವ ಕೈಗಳಿಗೆ ಆತ್ಮವಿಶ್ವಾಸ ಮೂಡಿಸಿ ಉತ್ಪಾದನಾ ಚಟುವಟಿಕೆಗಳಿಗೆ ತಲುಪಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳು ಸಹಕಾರಿಯಾಗಿವೆ ಎಂದು ಯೋಜನಾ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಹೇಳಿದರು.ತಾಲೂಕಿನ ಸಮೀಪದ ಹೊಸಗೆಣಿಕೆಹಾಳು ಗ್ರಾಮದಲ್ಲಿ ಜ್ಞಾನ ವಿಕಾಸ ಯೋಜನೆಯ ವಾತ್ಸಲ್ಯ ಮನೆಯನ್ನು ಫಲಾನುಭವಿಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.ರಾಜ್ಯದಲ್ಲಿ ೬೫೦ಕ್ಕೂ ಹೆಚ್ಚು ವಾಸ್ತಲ್ಯ ಮನೆಗಳ ನಿರ್ಮಾಣವನ್ನು ಉಚಿತವಾಗಿ ಮಾಡಿಕೊಡಲಾಗಿದೆ. ಈ ಫಲಾನುಭವಿಗಳಿಗೆ ಮುಖ್ಯವಾಗಿ ಜೀವನಕ್ಕೆ ಬೇಕಾಗುವ ವಾತ್ಸಲ್ಯ ಆಹಾರ ಮಿಕ್ಸ್ ವಿತರಣೆ, ತಿಂಗಳಿಗೆ ಒಂದು ಸಾವಿರ ಮಾಸಾಶನ, ಜನ ಮಂಗಳ ಕಾರ್ಯಕ್ರಮ, ಪಾತ್ರೆ ಕಿಟ್ಟು, ಬಟ್ಟೆಕಿಟ್ಟನ್ನು ನೀಡಿ ಅವರು ಸಹ ನಮ್ಮ ಕುಟುಂಬದವರ ಹಾಗೆ ನೋಡಿಕೊಳ್ಳುತ್ತಿದ್ದೇವೆ ಎಂದರು.
ಮುಖ್ಯವಾಗಿ ಸುಜ್ಞಾನ ನಿಧಿ ಶಿಷ್ಯ ವೇತನ, ಜ್ಞಾನ ದೀಪ ಶಿಕ್ಷಕರ ಒದಗಣೆ, ಹಾಲು ಉತ್ಪಾದಕರ ಕಟ್ಟಡ ರಚನೆಗೆ ಅನುದಾನ ವಿತರಣೆ ಐತಿಹಾಸಿಕ ದೇವಾಲಯಗಳ ಜೀರ್ಣೋದ್ಧಾರ ಮಾಡುವುದು ಸ್ವಉದ್ಯೋಗ ಮಾಡಲು ಉಚಿತ ತರಬೇತಿಗಳ ಯೋಜನೆ ಮಾಡುವುದು ಮತ್ತು ಇನ್ನಿತರ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಕುರಿತು ಸವಿಸ್ತಾರವಾಗಿ ಮಾಹಿತಿ ಮಾರ್ಗದರ್ಶನ ನೀಡಿದರು.ಶಾಸಕ ಜೆ.ಎನ್. ಗಣೇಶ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅನೇಕ ಸಮಾಜ ಮುಖಿ ಕಾರ್ಯಕ್ರಮಗಳ ಆಯೋಜನೆಯನ್ನು ಮಾಡುತ್ತಾ ಬಂದಿದೆ. ಅದರಲ್ಲಿ ವಿಶೇಷವಾಗಿ ಕೆರೆ ಹೂಳೆತ್ತುವುದು, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮತ್ತು ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗಳನ್ನು ಗುರುತಿಸಿ ಅವರ ಯೋಗ ಕ್ಷೇಮ ವಿಚಾರಿಸಿ ಅವರ ಜೀವನಕ್ಕೆ ದಾರಿದೀಪ ಮಾಡಿ ಮತ್ತು ಫಲಾನುಭವಿಗೆ ಮನೆ ಮಾಡಿಕೊಡಲಾಗುತ್ತಿದೆ ಎಂದರು.
ತಾಲೂಕು ಯೋಜನಾಧಿಕಾರಿ ಹಾಲಪ್ಪ, ಪುರಸಭೆ ಅಧ್ಯಕ್ಷ ಶೇಖಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ರಾಜ ಸಾಬ್, ಜಿಲ್ಲಾ ಜನ ವೇದಿಕೆ ಸದಸ್ಯರಾದ ಷಣ್ಮುಖಪ್ಪ, ಎ.ವಾಗೀಶ್, ಜ್ಞಾನವಿಕಾಸ ಸಮನ್ವಯಾಧಿಕಾರಿ ರೇಖಾ, ವಲಯದ ಮೇಲ್ವಿಚಾರಕ ಪ್ರಭು ಎಂ., ವಲಯದ ಸೇವಾ ಪ್ರತಿನಿಧಿಗಳಾದ ಹುಸೇನ್ ಬಿ., ಲಾವಣ್ಯ, ನಂದೀಶ ಹಾಗೂ ಸರ್ವ ಸದಸ್ಯರು ಇದ್ದರು.