ಸಾರಾಂಶ
ವೇದಮೂರ್ತಿ ಪುತ್ತೂರ ಶ್ರೀಶ ತಂತ್ರಗಳ ನೇತೃತ್ವದಲ್ಲಿ ಭಕ್ತಾಧಿಗಳ ಸೇವೆಯಂಗವಾಗಿ ನಾಲ್ಕು ಚಂಡಿಕಾಯಾಗಗಳನ್ನು ನಡೆಸಿ ಪೂರ್ಣಾಹುತಿ ನೀಡಲಾಯಿತು. ಈ ದಿನ ದೇವಿಯನ್ನು ಹಳದಿ ಮತ್ತು ಕೆಂಪು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಇಡೀ ದೇವಾಲಯದಲ್ಲಿ ಹೂವಿನ ಅಲಂಕಾರ ಮಾಡಲಾಗಿತ್ತು.
ಕೃಷ್ಣಮೂರ್ತಿ ಆಚಾರ್ಯ - ಅಮೃತಾ ಕೃಷ್ಣಮೂರ್ತಿ ದಂಪತಿಯಿಂದ ಚಂಡಿಕಾಯಾಗಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಕನ್ನರ್ಪಾಡಿಯ ಶ್ರೀ ಜಯದುರ್ಗಾಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಮಹೋತ್ಸವವು ವೈಭವದಿಂದ ನಡೆಯುತ್ತಿದ್ದು, ಗುರುವಾರ ದೇವಳದ ವ್ಯವಸ್ಥಾಪನಾ ಸಮಿತಿಯ ಹಿಂದಿನ ಅಧ್ಯಕ್ಷ, ಸಮಾಜ ಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯ ಮತ್ತು ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ ದಂಪತಿಯಿಂದ ಚಂಡಿಕಾಯಾಗ ನೆರವೇರಿತು.
ವೇದಮೂರ್ತಿ ಪುತ್ತೂರ ಶ್ರೀಶ ತಂತ್ರಗಳ ನೇತೃತ್ವದಲ್ಲಿ ಭಕ್ತಾಧಿಗಳ ಸೇವೆಯಂಗವಾಗಿ ನಾಲ್ಕು ಚಂಡಿಕಾಯಾಗಗಳನ್ನು ನಡೆಸಿ ಪೂರ್ಣಾಹುತಿ ನೀಡಲಾಯಿತು. ಈ ದಿನ ದೇವಿಯನ್ನು ಹಳದಿ ಮತ್ತು ಕೆಂಪು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಇಡೀ ದೇವಾಲಯದಲ್ಲಿ ಹೂವಿನ ಅಲಂಕಾರ ಮಾಡಲಾಗಿತ್ತು.ಈ ಪ್ರಯುಕ್ತ ಸಾವಿರಾರು ಮಂದಿ ಭಕ್ತರು ಮಧ್ಯಾಹ್ನ ಸರದಿಯಲ್ಲಿ ನಿಂತು ಅನ್ನಪ್ರಸಾದವನ್ನು ಸ್ವೀಕರಿಸಿದರು. ಎಲ್ಲೆಲ್ಲಿಯೂ ಸ್ವಯಂಸೇವಕರ ಶಿಸ್ತು ಎದ್ದು ಕಾಣುತಿತ್ತು. ಕೃಷ್ಣಮೂರ್ತಿ ಆಚಾರ್ಯ ದಂಪತಿ, ಪ್ರತಿಯೊಬ್ಬ ಮಹಿಳೆಯರಿಗೆ ರವಿಕೆ ಕಣ, ಬಳೆ ಮತ್ತು ಫಲಪ್ರಸಾದವನ್ನು ವಿತರಿಸಿದರು.ದೇವಿಗೆ ವಿಶೇಷವಾಗಿ ಬೆಳಗ್ಗೆ ಕಲ್ಪೋಕ್ತ ಪೂಜೆ, ರಾತ್ರಿ ಚಂದ್ರಮಂಡಲ ರಥೋತ್ಸವ, ಪಲ್ಲಕ್ಕಿ ಸೇವೆ, ರಂಗಸೇವೆಗಳನ್ನು ನಡೆಸಲಾಯಿತು. ನೂರಾರು ಭಕ್ತರು ಭಕ್ತಿಶ್ರದ್ಧೆಯಿಂದ ಸೀರೆ ಕಾಣಿಕೆ, ಹರಿವಾಣ ನೈವೇದ್ಯ, ಹಾಲು ಪಾಯಸ, ಗೂಡಾನ್ನ ಸೇವೆ, ದೀಪ ನಮಸ್ಕಾರ ಇತ್ಯಾದಿ ಸೇವೆಗಳನ್ನು ಸಲ್ಲಿಸಿ ಕೃತಾರ್ಥರಾದರು.ಇಂದು ದೇವಾಲಯದಲ್ಲಿ ವಿಶೇಷವಾಗಿ ಲಲಿತ ಪಂಚಮಿಯನ್ನು ಆಚರಿಸಲಾಗುತ್ತದೆ. ಬೆಳಗ್ಗೆ ಭಕ್ತರ ಸೇವೆಯಾಗಿ ಚಂಡಿಕಾಯಾಗ, ರಾತ್ರಿ ರಂಗಪೂಜೆಗಳು ನಡೆಯಲಿವೆ. 29ರಂದು ಶಾರದಾ ಪ್ರತಿಷ್ಠೆ, ಪೂಜೆ ಆರಂಭವಾಗಲಿದ್ದು, ಅ.1ರಂದು ಸಾನ್ನಿಧ್ಯ ಹೋಮ, 2ರಂದು ಶಾರದಾ ವಿಸರ್ಜನೆ ನಡೆಯಲಿದೆ ಎಂದು ಕೃಷ್ಣಮೂರ್ತಿ ಆಚಾರ್ಯ ತಿಳಿಸಿದ್ದಾರೆ.