ದಿನಾ ಹಾವೇರಿಗೆ ಹೋಗೋದು ಬಿಡ್ರಿ, ಆಸ್ಪತ್ರೆ ಸರಿಯಾಗಿ ನೋಡಿಕೊಳ್ರಿ

| Published : Dec 03 2024, 12:30 AM IST / Updated: Dec 03 2024, 12:31 AM IST

ದಿನಾ ಹಾವೇರಿಗೆ ಹೋಗೋದು ಬಿಡ್ರಿ, ಆಸ್ಪತ್ರೆ ಸರಿಯಾಗಿ ನೋಡಿಕೊಳ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ದಿನಾ ಹಾವೇರಿಗೆ ಹೋಗೋದು ಬಿಡ್ರಿ, ತಾಲೂಕಿನ ಆಸ್ಪತ್ರೆ ಸರಿಯಾಗಿ ನೋಡಿಕೊಳ್ರಿ, ಆರೋಗ್ಯ ಇಲಾಖೆಯ ಆಸ್ಪತ್ರೆಗಳೇ ಕಸದ ಗುಡ್ಡಿ ಆಗ್ಯಾವ, ನಿಮ್ಮ ನಿರ್ಲಕ್ಷ್ಯಕ್ಕೆ ಕ್ರಮ ಜರುಗಿಸುವುದು ಅನಿವಾರ್ಯ ಎಂದು ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ತಾಲೂಕು ಆರೋಗ್ಯಾಧಿಕಾರಿ ಡಾ.ಲಿಂಗರಾಜ ಅವರಿಗೆ ಎಚ್ಚರಿಕೆ ನೀಡಿದರು.

ಹಾನಗಲ್ಲ: ದಿನಾ ಹಾವೇರಿಗೆ ಹೋಗೋದು ಬಿಡ್ರಿ, ತಾಲೂಕಿನ ಆಸ್ಪತ್ರೆ ಸರಿಯಾಗಿ ನೋಡಿಕೊಳ್ರಿ, ಆರೋಗ್ಯ ಇಲಾಖೆಯ ಆಸ್ಪತ್ರೆಗಳೇ ಕಸದ ಗುಡ್ಡಿ ಆಗ್ಯಾವ, ನಿಮ್ಮ ನಿರ್ಲಕ್ಷ್ಯಕ್ಕೆ ಕ್ರಮ ಜರುಗಿಸುವುದು ಅನಿವಾರ್ಯ ಎಂದು ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ತಾಲೂಕು ಆರೋಗ್ಯಾಧಿಕಾರಿ ಡಾ.ಲಿಂಗರಾಜ ಅವರಿಗೆ ಎಚ್ಚರಿಕೆ ನೀಡಿದರು.ಸೋಮವಾರ ಹಾನಗಲ್ಲಿನ ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಾ.ಲಿಂಗರಾಜ ವರದಿ ನೀಡುವ ಸಂದರ್ಭದಲ್ಲಿ ಮೊದಲು ಕಾರಣಗಳನ್ನು ಹೇಳಿ ಹಾವೇರಿಗೆ ಹೋಗಿದ್ದೆ ಎಂದು ಹೇಳುವುದನ್ನು ಬಿಡಿ. ನೀವು ಆಸ್ಪತ್ರೆಯಲ್ಲಿ ಲಭ್ಯವಿರುವುದಿಲ್ಲ. ತಾಲೂಕಿನ ಆಸ್ಪತ್ರೆಗಳ ದುಸ್ಥಿತಿಗೆ ಸಾರ್ವಜನಿಕರು ನೀಡಿದ ದೂರುಗಳನ್ನು ನೀವು ಗಮನಿಸುವುದಿಲ್ಲ. ಸ್ವತಃ ತಾಲೂಕಿನ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವ ಅರಿತು ಕೆಲಸ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದೀರಿ. ಏನು ಹಾವೇರಿಯಲ್ಲಿ ದಿನಾಲು ಮೀಟಿಂಗಗಳು ಇರಲು ಸಾಧ್ಯವೆ. ಏನಾದರೂ ಹೇಳಿ ದಾರಿ ತಪ್ಪಿಸುವ ಕೆಲಸ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ನಿಮ್ಮ ಜವಾಬ್ದಾರಿ ನಿರ್ವಹಣೆಯಲ್ಲಿ ವಿಫಲರಾಗಿದ್ದೀರಿ ಎಂದು ಡಾ.ಲಿಂಗರಾಜ ಅವರನ್ನು ತರಾಟೆಗೆ ತೆಗೆದುಕೊಂಡರು.ತಾಲೂಕಿನ ಆಸ್ಪತ್ರೆಗಳಲ್ಲಿ ಬ್ಲಡ್ ರಿಪೋರ್ಟಗಾಗಿ ಖಾಸಗಿ ಕೇಂದ್ರಗಳಿಗೆ ರೋಗಿಗಳನ್ನು ಕಳಿಸಲಾಗುತ್ತಿದೆ. ಖಾಸಗಿಯವರಿಗೆ ಲಾಭ ಮಾಡಿ ಕೊಡುವುದಾದರೆ ಬಡವರ ಗತಿ ಏನು. ಮಹಿಳಾ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಸ್ಕ್ಯಾನರ್ ಸೇರಿದಂತೆ ಎಲ್ಲ ಸಲಕರಣೆಗಳಿದ್ದರೂ ರೋಗಿಗಳು ಖಾಸಗಿಯವರಲ್ಲಿ ಹೋಗಿ ಹಣ ತೆತ್ತು ಬ್ಲಡ್ ಸ್ಕ್ಯಾನಿಂಗ್ ರಿಪೋರ್ಟ ತರುವುದು ಸರಿಯೇ. ಬಮ್ಮನಹಳ್ಳಿ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್‌ ಇದೆ. ಆದರೆ ಅದರ ಬಳಕೆ ಆಗುತ್ತಿಲ್ಲ. ಸರಕಾರ ಕೊಟ್ಟ ಸೌಲಭ್ಯ ಬಡವರಿಗೆ ಅನುಕೂಲ ಆಗುವುದು ಬೇಡವೇ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನಷ್ಠಾನ ಸಮಿತಿ ಅಧ್ಯಕ್ಷ ವಿಜಕುಮಾರ ದೊಡ್ಡಮನಿ, ಕೆಡಿಪಿ ನಾಮ ನಿರ್ದೇಶಿತ ಸದಸ್ಯರಾದ ಅನಿತಾ ಡಿಸೋಜಾ, ಮಹಮ್ಮದ್ ಹನೀಫ್ ಬಂಕಾಪೂರ ಪ್ರಶ್ನಿಸಿದರು. ಒಂದು ವಾರದಲ್ಲಿ ಎಲ್ಲ ಸರಿಪಡಿಸುವೆ ಎಂದ ಡಾ. ಲಿಂಗರಾಜ ಅವರು ಬೊಮ್ಮನಹಳ್ಳಿಯಲ್ಲಿ ಆಂಬ್ಯುಲೆನ್ಸ್‌ ಇದೆ. ಆದರೆ ಚಾಲಕರಿಲ್ಲ ಎಂಬ ಕಾರಣಕ್ಕೆ ಓಡಿಸುತ್ತಿಲ್ಲ ಎಂದು ಸಬೂಬು ಹೇಳಿದರು. ಅದಕ್ಕೆ ಪ್ರತಿ ವರ್ಷ ಮೆಂಟೆನೆನ್ಸ ಖರ್ಚಾಗುತ್ತದೆ. ಇನಶ್ಯೂರನ್ಸ ಕಟ್ಟಲಾಗುತ್ತದೆ. ಆದರೆ ವಾಹನ ಮಾತ್ರ ಓಡುವುದಿಲ್ಲ ಎಂಬುದು ಸರಕಾರದ ಹಣದ ಪೋಲಿಗೆ ಅವಕಾಶವಾದಂತಾಗಿದೆ ಎಂದು ಸದಸ್ಯರು ಮರು ದೂರಿದರು.ಹಾನಗಲ್ಲ ತಾಲೂಕು ಆಸ್ಪತ್ರೆ ರೋಗಿಗಳನ್ನು ಇಲ್ಲಿಯೇ ಚಿಕಿತ್ಸೆ ನೀಡಲು ಸಾಧ್ಯವಿದ್ದರೂ ಹಾವೇರಿ, ಹುಬ್ಬಳ್ಳಿಗೆ ಕಳಿಸುತ್ತೀರಿ. ಇದು ಬಡ ರೋಗಿಗಳಿಗೆ ತೀರ ತೊಂದರೆಯಾಗಿದೆ. ಅಲ್ಲದೆ ಆಂಬ್ಯುಲೆನ್ಸ್‌ ಶಿರಸಿಗೆ ಕೊಡಲು ನೀವು ಒಪ್ಪುತ್ತಿಲ್ಲ. ಅನಾರೋಗ್ಯಕ್ಕೊಳಗಾದ ಹಲವರು ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿಯಲ್ಲಿನ ವೈದ್ಯಕೀಯ ವ್ಯವಸ್ಥೆ ಬಳಸಿಕೊಳ್ಳಲು ಮುಂದಾಗುತ್ತಾರೆ. ಅತ್ಯಂತ ಜರೂರ ಇರುವ ಸಂದರ್ಭದಲ್ಲಿ ಸರಕಾರಿ ಆಂಬ್ಯುಲೆನ್ಸ್‌ಗಳನ್ನು ಶಿರಸಿಗೆ ಕೊಡಲು ಮುಂದಾಗಿ. ಕಾನೂನು ತೊಡಕಿದ್ದರೆ ಮೇಲಧಿಕಾರಿಗಳಿಗೆ ಬರೆದು ಸರಿಪಡಿಸಿಕೊಳ್ಳಿ ಎಂದು ಸದಸ್ಯರು ಸೂಚಿಸಿದರು.