ಮಹಾಲಕ್ಷ್ಮೀ ದೇವಿ ಅದ್ಧೂರಿ ಜಾತ್ರೆಗೆ ತೆರೆ

| Published : May 20 2024, 01:37 AM IST

ಸಾರಾಂಶ

ಯಮಕನಮರಡಿ: ಸಮೀಪದ ಕೋಚರಿ ಗ್ರಾಮದ ಶ್ರೀ ಮಹಾಲಕ್ಷ್ಮೀದೇವಿ ಜಾತ್ರಾ ಮಹೋತ್ಸವವು ಐದು ದಿನಗಳವರೆಗೆ ವಿಜೃಂಭಣೆಯಿಂದ ನಡೆದಿದ್ದು, ಅದ್ಧೂರಿಯ ಜಾತ್ರೆಗೆ ಶನಿವಾರ ತೆರೆ ಬಿದ್ದಿದೆ. ರಂದು ಜಾತ್ರಾಮಹೋತ್ಸವ ಸಮಾರೋಪ ದೇವಿಯ ಹೊನ್ನಾಟದ ಮೆರವಣಿಗೆಯೊಂದಿಗೆ ನಡೆದು ಸಂಜೆ ದೇವಿಯನ್ನು ಸೀಮೆಗೆ ಬಿಳ್ಕೋಡುವ ಕಾರ್ಯಕ್ರಮ ನಡೆಸಲಾಯಿತು.

ಐದು ದಿನಗಳ ಕಾಲ ವಿವಿಧ ಸ್ಪರ್ಧೆಗಳು ಹಾಗು ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ಧಾ ಭಕ್ತಿಯಿಂದ ಗ್ರಾಮಸ್ಥರು ಹಮ್ಮಿಕೊಂಡಿದ್ದರು. ಗ್ರಾಮಸ್ತರು ಹಾಗೂ ಸ್ವಗ್ರಾಮದ ಸುಮಂಗಲೆಯರು ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ದೇವಿ ದರ್ಶನ ಪಡೆದು ಪುಣಿತರಾದರು. ಅಲ್ಲದೇ, ಜನತೆಗೆ ಮನರಂಜನೆ ನೀಡುವ ಉದ್ದೇಶದಿಂದ ಜೋಡೆತ್ತಿನ ಚಕ್ಕಡಿ ಸ್ಪರ್ಧೆ, ಕುದುರೆ ಗಾಡಿ ಸ್ಪರ್ಧೆ, ಸೈಕಲ್ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಕೂಡ ಆಯೋಜನೆ ಮಾಡಲಾಗಿತ್ತು.ಅಂತಿಮ ದಿನದ ಹೊನ್ನಾಟದ ವೇಳೆ ಭಕ್ತರು ದೇವಿಗೆ ಭಂಡಾರವನ್ನು ಅರ್ಪಿಸಿ ದೇವಿಯ ನಾಮಸ್ಮರಣೆ ಹಾಗೂ ಹರ್ಷೋದ್ಘಾಟರ ಹಾಕುತ್ತಿದ್ದರು. ಹಕ್ಕುದಾರರು ಮತ್ತು ಗ್ರಾಮದ ಭಕ್ತಾದಿಗಳು ಮತ್ತು ಸುತ್ತಲಿನ ಗ್ರಾಮಗಳಿಂದ ಬಂಧ ಭಕ್ತಾಧಿಗಳು ಕೊನೆ ದಿನ ಜಾತ್ರಾಮಹೋತ್ಸವದಲ್ಲಿ ಹುರುಪಿನಿಂದ ಪಾಲ್ಗೊಂಡಿದ್ದರು.