21ರಂದು ಗೋಕರ್ಣ ಬೀಚ್ ಟ್ರಕ್ಕಿಂಗ್

| Published : Jan 16 2024, 01:47 AM IST

ಸಾರಾಂಶ

ಸಮುದ್ರ ತೀರಗಳು, ಕಾಡಂಚಿನ ಕಡಲ ತೀರಗಳ ಪರಿಸರ ಎಂದರೆ ಎಲ್ಲರಿಗೂ ಅಲ್ಲಿಯೇ ವಾಸ್ತವ್ಯ ಹೂಡಿ ಬದುಕಬೇಕೆಂಬ ಉತ್ಸಾಹ ಮೂಡಿಸುತ್ತದೆ. ಇಂಥ ಪ್ರದೇಶಗಳಿಗೆ ಚಾರಣ ತೆರಳಲು ಶಿವಮೊಗ್ಗ ನಗರದ ದಿಕ್ಸೂಚಿ ಅಡ್ವೆಂಚರ್ಸ್‌ ಅವಕಾಶ ಕಲ್ಪಿಸಿದೆ. ಜ.21ರಂದು ಗೋಕರ್ಣ ಬೀಚ್ ಟ್ರಕ್ಕಿಂಗ್ ಹಮ್ಮಿಕೊಂಡಿದ್ದು, ಆಸಕ್ತರು ಪಾಲ್ಗೊಳ್ಳಬಹುದಾಗಿದೆ.

ಶಿವಮೊಗ್ಗ: ನಗರದ ದಿಕ್ಸೂಚಿ ಅಡ್ವೆಂಚರ್ಸ್‌ ವತಿಯಿಂದ ಜ.21ರಂದು ಗೋಕರ್ಣ ಬೀಚ್ ಟ್ರಕ್ಕಿಂಗ್ ಹಮ್ಮಿಕೊಳ್ಳಲಾಗಿದೆ. ಚಾರಣ ಪ್ರವಾಸ ಶನಿವಾರ ರಾತ್ರಿ ಆರಂಭಗೊಳ್ಳಲಿದ್ದು, ಭಾನುವಾರ ಚಾರಣ, ಬೋಟ್ ರೈಡ್ ಇರಲಿದೆ.

ಭಾನುವಾರ ಬೆಳಗ್ಗೆ ನಿರ್ವಾಣ ಬೀಚ್ ತಲುಪುವುದು, ಬೆಳಗಿನ ಉಪಾಹಾರ ಸೇವಿಸಿದ ನಂತರ ನಿರ್ವಾಣ ಬೀಚ್‌ನಲ್ಲಿ ಚಾರಣ ಆರಂಭಿಸಿ ಬೆಲೆಕನ್ ತಲುಪುವುದು, ಪಾರಾಡೈಸ್ ಬೀಚ್, ಹಾಫ್ ಮೂನ್ ಬೀಚ್, ಓಂ ಬೀಚ್, ಕುಡ್ಲ ಬೀಚ್ ಸೇರಿದಂತೆ ಒಟ್ಟು 10 ಕಿಮೀ ಚಾರಣದಲ್ಲಿ ನಡೆಸಲಾಗುವುದು.

ಹೊನ್ನಾವರದಲ್ಲಿ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ಬೋಟ್ ರೈಡ್, ಮುರುಡೇಶ್ವರ ದೇವಸ್ಥಾನ ವೀಕ್ಷಣೆ ಮುಗಿದ ಬಳಿಕ ಶಿವಮೊಗ್ಗಕ್ಕೆ ಹಿಂದಿರುಗಲಾಗುವುದು.

ಚಾರಣದಲ್ಲಿ ಪಾಲ್ಗೊಳ್ಳಲು ಒಬ್ಬರಿಗೆ ₹2,000 ಶುಲ್ಕ ನಿಗದಿಪಡಿಸಲಾಗಿದೆ. ಊಟ, ಬೋಟ್ ರೈಡ್, ಪ್ರವೇಶ ಶುಲ್ಕವು ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಗೆ ಮೊ: 82773- 14779 ಇಲ್ಲಿಗೆ ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.