ಸಾರಾಂಶ
ತಾಲ್ಲೂಕಿನ ಗೊರೇಬಾಳ ಕ್ಯಾಂಪಿನಲ್ಲಿ ಶುಕ್ರವಾರ ರಾತ್ರಿ ಜೆ.ನಾಗರಾಜ ಮ್ಯಾದಾರ ಎಂಬುವವರ ಮನೆಯಲ್ಲಿನ 10 ತೊಲ ಬಂಗಾರ, 23 ತೊಲ ಬೆಳ್ಳಿ ಹಾಗೂ ನಗದು ಹಣ ಕಳ್ಳತನವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಿಂಧನೂರು: ತಾಲ್ಲೂಕಿನ ಗೊರೇಬಾಳ ಕ್ಯಾಂಪಿನಲ್ಲಿ ಶುಕ್ರವಾರ ರಾತ್ರಿ ಜೆ.ನಾಗರಾಜ ಮ್ಯಾದಾರ ಎಂಬುವವರ ಮನೆಯಲ್ಲಿನ 10 ತೊಲ ಬಂಗಾರ, 23 ತೊಲ ಬೆಳ್ಳಿ ಹಾಗೂ ನಗದು ಹಣ ಕಳ್ಳತನವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಾಗರಾಜ ಅವರು ಮದುವೆಗೆಂದು ತಿರುಪತಿಗೆ ಹೋಗಿದ್ದರು. ಅವರು ಬರುವಷ್ಟರಲ್ಲಿ ಮನೆ ಕಳ್ಳತನವಾಗಿದೆ. ಅವರ ಮನೆ ಎದುರಿಗೆ ಇರುವ ನಂದಿ ಟ್ರೇರ್ಸ್ನಲ್ಲಿ ಇರುವ ಸಿ.ಸಿ.ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆ.1 ರ ರಾತ್ರಿ 11 ಗಂಟೆಯಿಂದ ಮಧ್ಯರಾತ್ರಿ 2.30 ರ ಸುಮಾರಿಗೆ ಬಾಗಿಲು ಮುರಿದು ಬಂಗಾರ, ಬೆಳ್ಳಿ ಹಾಗೂ ಮನೆಯಲ್ಲಿದ್ದ ಹಣ ಕಳ್ಳತನ ಮಾಡಿದ್ದಾರೆಂದು ನಾಗರಾಜ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.