ಗೋಮಾತೆಯ ರಕ್ಷಣೆ ಹಾಗೂ ಸೇವೆಯ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ‘ಗೋ ಸಮ್ಮಾನ್ ಆಹ್ವಾನ ಅಭಿಯಾನ’ದ ಮಂಗಳೂರು-ಉಡುಪಿ ಜಿಲ್ಲೆಗಳ 3ನೇ ಹಂತದ ಸಹಿ ಸಂಗ್ರಹ ಅಭಿಯಾನಕ್ಕೆ ಕದ್ರಿಯ ಶ್ರೀ ಯೋಗೇಶ್ವರ ಮಠದಲ್ಲಿ ಪೂಜ್ಯ ಸಂತರ ಸಾನ್ನಿಧ್ಯದಲ್ಲಿ ಚಾಲನೆ ನೀಡಲಾಯಿತು.
ಮಂಗಳೂರು: ಗೋಮಾತೆಯ ರಕ್ಷಣೆ ಹಾಗೂ ಸೇವೆಯ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ‘ಗೋ ಸಮ್ಮಾನ್ ಆಹ್ವಾನ ಅಭಿಯಾನ’ದ ಮಂಗಳೂರು-ಉಡುಪಿ ಜಿಲ್ಲೆಗಳ 3ನೇ ಹಂತದ ಸಹಿ ಸಂಗ್ರಹ ಅಭಿಯಾನಕ್ಕೆ ಕದ್ರಿಯ ಶ್ರೀ ಯೋಗೇಶ್ವರ ಮಠದಲ್ಲಿ ಪೂಜ್ಯ ಸಂತರ ಸಾನ್ನಿಧ್ಯದಲ್ಲಿ ಚಾಲನೆ ನೀಡಲಾಯಿತು.ಸಂತರು ಗೋ ಗ್ರಾಸವನ್ನು ಗೋವು ಮತ್ತು ಕರುವಿಗೆ ಅರ್ಪಿಸುವ ಮೂಲಕ ಉದ್ಘಾಟಿಸಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ದೇಶದ ಅಸ್ತಿತ್ವ ಹಾಗೂ ಕೃಷಿ ವ್ಯವಸ್ಥೆಯ ಉಳಿವಿಗೆ ಗೋ ಸಂರಕ್ಷಣೆ ಅತ್ಯಗತ್ಯ. ಸಾವಯವ ಕೃಷಿ ಮತ್ತು ಗೋ ಆಧಾರಿತ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಅಗತ್ಯವಿದೆ ಎಂದರು.ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಗೋವಿನ ರಕ್ಷಣೆ ಕೇವಲ ಧಾರ್ಮಿಕ ವಿಚಾರವಲ್ಲ. ದೇಶದ ಕೃಷಿ, ಪರಿಸರ ಹಾಗೂ ಸ್ವದೇಶಿ ಗೋ ತಳಿಗಳ ಸಂರಕ್ಷಣೆಯೊಂದಿಗೂ ಸಂಬಂಧಿಸಿದೆ. ‘ಗೋ ಸಮ್ಮಾನ್ ಅಭಿಯಾನ’ದ ಸಹಿ ಸಂಗ್ರಹಕ್ಕೆ ಸೂಕ್ತ ಮನ್ನಣೆ ದೊರೆಯುವವರೆಗೆ ಹೋರಾಟ ಮುಂದುವರಿಸಬೇಕು ಎಂದರು.ಕದ್ರಿ ಶ್ರೀ ಯೋಗೇಶ್ವರ ಮಠದ ಶ್ರೀ ನಿರ್ಮಲನಾಥ್ ಜೀ ಮಹಾರಾಜ್, ಗೋ ಧಾಮ್ ಪಥ್‌ಮೇಡ ರಾಜಸ್ಥಾನದ ಶ್ರೀ ರವೀಂದ್ರಾನಂದ ಸರಸ್ವತಿ ಜೀ ಮಹಾರಾಜ್, ಶ್ರೀ ಸಾಯಿ ಈಶ್ವರ್ ಗುರೂಜಿ, ಶ್ರೀ ಗೋಪಾಲನಂದ ಸರಸ್ವತಿ ಜೀ ಮಹಾರಾಜ್, ಶ್ರೀ ಕಾಳಿಕಾ ತನಯ ಉಮಾಮಹೇಶ್ವರ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ ರಾಜ್ಯ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಗೋಸೇವಾ ಗತೀವಿಧಿ ಪ್ರಾಂತ ಸಂಯೋಜಕ ಪ್ರವೀಣ್ ಸರಳಾಯ, ರಾಜ್ಯ ತಂಡ ಸಂಯೋಜಕ ಜೀವನ್ ದೊಡ್ಠಬಳ್ಳಾಪುರ, ಪ್ರಭಾರಿ ಗಜೇಂದ್ರ, ಗೋ ಸಮ್ಮಾನ್ ಸಮಿತಿ ಜಿಲ್ಲಾ ಪ್ರಭಾರಿ ಅಶೋಕ ಇಳಂತಿಲ, ಪ್ರಮುಖರಾದ ಗಂಗಾಧರ್ ಪೆರ್ಮಂಕಿ, ಶೈಲಜಾ ಭಟ್, ರಮೇಶ್ ಭಟ್, ಶಶಿಶೇಖರ್, ಹೇರಂಭ ಶಾಸ್ತ್ರಿ, ಉದಯ ಭಟ್ ಮತ್ತಿತರರು ಇದ್ದರು.