ಸಾರಾಂಶ
ಡೆಂಘಿ ಕಾಯಿಲೆಯಿಂದ ಪಾಲಕ ಪೋಷಕರು ಮಕ್ಕಳ ರಕ್ಷಣೆ ಮಾಡಬೇಕು. ಶಾಲೆ ಮತ್ತು ಮನೆಯಲ್ಲಿ ಈ ಕುರಿತು ತಿಳಿವಳಿಕೆ ನೀಡುವ ಮೂಲಕ ಮಕ್ಕಳನ್ನು ರಕ್ಷಿಸಬೇಕಿದೆ
ಗದಗ: ಸ್ವಚ್ಛತೆಯ ಬಗೆಗೆ ಅರಿತು ನಮ್ಮ ಆರೋಗ್ಯ ಜಾಗೃತಿಯಿಂದ ರಕ್ಷಿಸಿಕೊಳ್ಳುವುದು ಹಾಗೂ ಮಕ್ಕಳು ಸತ್ವಯುತ ಆಹಾರ ಸೇವನೆ, ನಿಯಮಿತ ವ್ಯಾಯಾಮದಿಂದ ಸದೃಢ ಆರೋಗ್ಯ ಹೊಂದಬೇಕು ಎಂದು ನಗರಸಭೆಯ ಮಾಜಿ ಅಧ್ಯಕ್ಷೆ ಜಯಶ್ರೀ ಉಗಲಾಟ ಹೇಳಿದರು.
ಅವರು ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ.13ರಲ್ಲಿ ಭಾವಸಾರ ವಿಜನ್ ಇಂಡಿಯಾ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ರಕ್ತದ ಗುಂಪು ಗುರುತಿಸಿ ಕಾರ್ಡ್ ವಿತರಣೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಡೆಂಘಿ ಕಾಯಿಲೆಯಿಂದ ಪಾಲಕ ಪೋಷಕರು ಮಕ್ಕಳ ರಕ್ಷಣೆ ಮಾಡಬೇಕು. ಶಾಲೆ ಮತ್ತು ಮನೆಯಲ್ಲಿ ಈ ಕುರಿತು ತಿಳಿವಳಿಕೆ ನೀಡುವ ಮೂಲಕ ಮಕ್ಕಳನ್ನು ರಕ್ಷಿಸಬೇಕಿದೆ. ನಿಂತ ನೀರಿನಲ್ಲಿ ಮಕ್ಕಳು ಆಟವಾಡುವದು ತರವಲ್ಲ, ಕೈ ಕಾಲು ಸ್ವಚ್ಛವಾಗಿ ತೊಳೆದುಕೊಂಡು ಮಕ್ಕಳು ಊಟ ಮಾಡಬೇಕು. ಮಕ್ಕಳಿಗೆ ಸತ್ವಯುವ ಆಹಾರ ಅಗತ್ಯ ಎಂದರು.
ರಕ್ತತಪಾಸಿಗ ಡಾ.ದತ್ತಾತ್ರೇಯ ವೈಕುಂಠೆ ಮಾತನಾಡಿ, ಎಲ್ಲರ ಆರೋಗ್ಯದಲ್ಲಿ ರಕ್ತವು ಪ್ರಮುಖ ಪಾತ್ರ ವಹಿಸುತ್ತದೆ. ಪರಿಶುದ್ಧ ರಕ್ತದಿಂದ ಸದೃಢ ಆರೋಗ್ಯ ರೂಪುಗೊಳ್ಳಲು ಸಾಧ್ಯ. ಯುವಕರು ಮತ್ತು ಮಧ್ಯ ವಯಸ್ಕರರು ಕನಿಷ್ಠ ವರ್ಷದಲ್ಲಿ ಎರಡು ಸಲವಾದರೂ ರಕ್ತದಾನ ಮಾಡುವ ಮೂಲಕ ಆರೋಗ್ಯದ ಸಮತೋಲನ ಕಾಯ್ದುಕೊಳ್ಳಬೇಕು ಎಂದರು.ಈ ವೇಳೆ ಅನ್ನಪೂರ್ಣ ವರವಿ, ಸುಲೋಚನಾಬಾಯಿ ಕಾಟಗಿ, ಮುಖ್ಯೋಪಾಧ್ಯಾಯನಿ ಎಸ್.ಎಸ್. ಹುರಕಡ್ಲಿ ಹಾಗೂ ಶಿಕ್ಷಕರು ಇದ್ದರು. ಸಂಪನ್ಮೂಲ ವ್ಯಕ್ತಿ ಕೆ.ಎಸ್. ಬೇಲೇರಿ ಸ್ವಾಗತಿಸಿ, ವಂದಿಸಿದರು.