Shankarappa, President of the Yadehalli Lions Club, said that good health can be achieved by consuming good food.
ಹೊಳೆಹೊನ್ನೂರು: ಒಳ್ಳೆಯ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಪಡೆಯಬಹುದು ಎಂದು ಯಡೇಹಳ್ಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಶಂಕರಪ್ಪ ಹೇಳಿದರು.ಸಮೀಪದ ಅರಹತೊಳಲು ಪ್ರೌಢಶಾಲೆಯಲ್ಲಿ ಯಡೇಹಳ್ಳಿ ಲಯನ್ಸ್ ಕ್ಲಬ್ ಮತ್ತು ಹೊಳೆಹೊನ್ನೂರಿನ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ನಡೆದ ರಕ್ತಹೀನ ಮುಕ್ತ ಶಾಲೆ ಹಾಗೂ ಆರೋಗ್ಯ ಶಿಕ್ಷಣ ಸಂಚಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಮಕ್ಕಳಲ್ಲಿ ರಕ್ತಹೀನತೆ ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ಕಾರಣ ನಮ್ಮ ಆಹಾರ ಪದ್ದತಿ. ಕುರುಕಲು ತಿಂಡಿಗಳು, ಬೇಕರಿ ಪದಾರ್ಥಗಳು, ಕರಿದ ಪದಾರ್ಥಗಳನ್ನು ಹೆಚ್ಚಾಗಿ ಮಕ್ಕಳು ತಿನ್ನುವುದರಿಂದ ರಕ್ತಹೀನತೆ ಕಂಡುಬರುತ್ತದೆ. ಇದು ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅಡ್ಡಿಯಾಗುವುದು. ಆದ್ದರಿಂದ ಉತ್ತಮ ಪೌಷ್ಟಿಕಾಂಶ ಉಳ್ಳ ಹಸಿರು ಸೊಪ್ಪು, ತರಕಾರಿಗಳು, ಹಣ್ಣುಗಳನ್ನು ಹೆಚ್ಚಾಗಿ ಬಳಸಬೇಕು. ನಿಯಮಿತವಾದ ವ್ಯಾಯಾಮ ಮತ್ತು ನಮ್ಮ ದೈನಂದಿನ ಚಟುವಟಿಕೆಗಳಿಂದ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ. ಈ ಕಾರಣದಿಂದ ಮಕ್ಕಳಿಗೆ ರಕ್ತಹೀನತೆಯ ಬಗ್ಗೆ ಸರಿಯಾದ ಮಾಹಿತಿ ನೀಡುವುದು ಸಮಾಜದ ಕರ್ತವ್ಯ ಎಂದು ಹೇಳಿದರು.ಸಮುದಾಯ ಆರೋಗ್ಯ ಅಧಿಕಾರಿ ಯಶ್ವಂತ್ ಮತ್ತು ಆರ್‌ಕೆಎಸ್‌ಕೆ ಆಪ್ತ ಅಮಾಲೋಚಕ ಗೋವರ್ಧನ್ ಮಕ್ಕಳಿಗೆ ಆರೋಗ್ಯ ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಕೆ.ರಂಗನಾಥ, ಲಯನ್ಸ್ ಕ್ಲಬ್‌ನ ಸದಸ್ಯರಾದ ಎಂ.ಪಾಲಾಕ್ಷಪ್ಪ, ಬಸಪ, ರೇವಣಸಿದ್ದಪ್ಪ, ಚಿನ್ನಯ್ಯ, ಕಾರ್ಯದರ್ಶಿ ಕೆ.ಪಿ.ಕಿರಣ್ ಕುಮಾರ್, ಸಮುದಾಯ ಆರೋಗ್ಯ ಅಧಿಕಾರಿ ಯಶ್ವಂತ್, ಆಪ್ತ ಸಮಾಲೋಚಕ ಗೋವರ್ಧನ್, ಶಿಕ್ಷಕರು ಮತ್ತು ಮಕ್ಕಳು ಇದ್ದರು.
-------------------------ಪೋಟೋ.
05 ಎಚ್ ಎಚ್ ಆರ್ ಪಿ 01ಅರಹತೊಳಲು ಸರ್ಕಾರಿ ಪ್ರೌಢಶಾಲೆಯಲ್ಲಿ ಯಡೇಹಳ್ಳಿ ಲಯನ್ಸ್ ಕ್ಲಬ್ ಮತ್ತು ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ರಕ್ತಹೀನ ಮುಕ್ತ ಶಾಲೆ ಮತ್ತು ಆರೋಗ್ಯ ಶಿಕ್ಣ ಸಂಚಿಕೆ ಕಾರ್ಯಕ್ರಮವನ್ನು ಕ್ಲಬ್‌ನ ಅಧ್ಯಕ್ಷ ಶಂಕರಪ್ಪ ಉದ್ಘಾಟಿಸಿದರು. ಬಸಪ್ಪ, ಪಾಲಾಕ್ಷಪ್ಪ, ಕೆ.ಇ.ಕಿರಣ್ ಕುಮಾರ್, ತಿಮ್ಮಪ್ಪ ಇದ್ದರು.