ಸಾರಾಂಶ
ತಾಲೂಕಿನಲ್ಲಿ ೬೨೦ ಸಮೀಕ್ಷಾ ಕುಟುಂಬಗಳ ಬ್ಲಾಕ್ ಗಳಿದ್ದು, ಪ್ರತಿಯೊಬ್ಬ ಸಮೀಕ್ಷೆದಾರರು ಪ್ರತಿನಿತ್ಯ ಕನಿಷ್ಠ ೧೦ ಕುಟುಂಬದ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಬೇಕು. ಸಮೀಕ್ಷೆ ಪ್ರಾರಂಭವಾದ ಮೊದಲ ಮೂರು ದಿನ ತಾಂತ್ರಿಕ ದೋಷಗಳಿಂದ ಸಮೀಕ್ಷೆ ಬ್ಯಾಕ್ ಲಾಗ್ ಸೇರಿಕೊಂಡಿದೆ.
ಕನ್ನಡಪ್ರಭ ವಾರ್ತೆ ಮಾಲೂರು
ಕರ್ನಾಟಕ ರಾಜ್ಯ ಹಿಂದುಳಿದ ಆಯೋಗಗಳ ವತಿಯಿಂದ ಕೈಗೊಂಡಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯಾವುದೇ ರೀತಿಯ ಗೊಂದಲಗಳು, ತಾಂತ್ರಿಕ ಸಮಸ್ಯೆ ಇಲ್ಲದೆ ಚುರುಕುಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ರವಿ ಹೇಳಿದರು.ಅವರು ನಗರದ ಬಾಬುರಾವ್ ರಸ್ತೆಯಲ್ಲಿ ಸಮೀಕ್ಷೆದಾರರು ನಡೆಸುತ್ತಿರುವ ಸಾಮಾಜಿಕ ಸಮೀಕ್ಷೆ ಪರಿಶೀಲನೆ ನಡೆಸಿ ಮಾತನಾಡುತ್ತ ತಾಲೂಕಿನಲ್ಲಿ ನಡೆಯುತ್ತಿರುವ ಶೈಕ್ಷಣಿಕ ಸಮೀಕ್ಷೆಯನ್ನು ಪರಿಶೀಲನೆ ಮಾಡುವ ಉದ್ದೇಶದಿಂದ ಗ್ರಾಮೀಣ ಭಾಗದ ಸಂತೇಹಳ್ಳಿ ಗ್ರಾಮ ಹಾಗೂ ನಗರ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದರು.೬೨೦ ಸಮೀಕ್ಷಾ ಬ್ಲಾಕ್
ತಾಲೂಕಿನಲ್ಲಿ ೬೨೦ ಸಮೀಕ್ಷಾ ಕುಟುಂಬಗಳ ಬ್ಲಾಕ್ ಗಳಿದ್ದು, ಪ್ರತಿಯೊಬ್ಬ ಸಮೀಕ್ಷೆದಾರರು ಪ್ರತಿನಿತ್ಯ ಕನಿಷ್ಠ ೧೦ ಕುಟುಂಬದ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಬೇಕು. ಸಮೀಕ್ಷೆ ಪ್ರಾರಂಭವಾದ ಮೊದಲ ಮೂರು ದಿನ ತಾಂತ್ರಿಕ ದೋಷಗಳಿಂದ ಸಮೀಕ್ಷೆ ಬ್ಯಾಕ್ ಲಾಗ್ ಸೇರಿಕೊಂಡಿದೆ. ಸಮೀಕ್ಷೆದಾರರು ಕೇಳುವ ಪ್ರಶ್ನೆಗಳಿಗೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಂತೆ ಅನುಭವ ಹೆಚ್ಚುತ್ತದೆ. ಜಿಲ್ಲೆಯಾದ್ಯಂತ ಸಮೀಕ್ಷೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ ಎಂದರು.ಅ.7ಕ್ಕೂ ಮುನ್ನವೇ ಪೂರ್ಣ
ಆಕ್ಟೋಬರ್ ೭ ಕ್ಕೂ ಮೊದಲೇ ಗುರಿ ತಲುಪುವ ನಿರೀಕ್ಷೆ ಇದೆ. ಇದಕ್ಕೆ ಅಧಿಕಾರಿಗಳು ಮೇಲ್ವಿಚಾರಕರು ನೊಡಲ್ ಅಧಿಕಾರಿಗಳು, ಸಮೀಕ್ಷೆದಾರರ ಸಹಕಾರ ಅಗತ್ಯ. ಸಮೀಕ್ಷೆಯಲ್ಲಿ ಕಂಡು ಬಂದ ಎಲ್ಲ ಗೊಂದಲಗಳನ್ನು ಸರಿಪಡಿಸಲಾಗಿದೆ. ಸಮೀಕ್ಷೆದಾರರು ಪ್ರತಿ ಮನೆಗೆ ತೆರಳಿ ಕುಟುಂಬಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸಾರ್ವಜನಿಕರು ಸಮೀಕ್ಷೆದಾರರು ಕೇಳುವ ೬೦ ಪ್ರಶ್ನೆಗಳಿಗೆ ಸಮರ್ಪಕವಾದ ಮಾಹಿತಿ ಪೂರ್ಣ ಗೊಳಿಸಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.ಈ ಸಂದರ್ಭ ದಲ್ಲಿ ಜಿಲ್ಲಾಪಂಚಾಯ್ತಿ ಸಿಇಓ ಪ್ರವೀಣ್ ಬಾಗೇವಾಡಿ, ತಹಸೀಲ್ದಾರ್ ಎಂ.ವಿ.ರೂಪ, ನೊಡಲ್ ಅಧಿಕಾರಿ ಸುಜಾತ, ನಗರಸಭೆ ಪೌರಯುಕ್ತ ಎ.ಬಿ.ಪ್ರದೀಪ್, ಬಿಸಿಎಂ ವಿಸ್ತರಣಾಧಿಕಾರಿ ಅಂಬಿಕಾ, ನಗರ ಸಭೆಯ ಕಂದಾಯ ಅಧಿಕಾರಿಗಳಾದ ಆನಿಲ್, ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸ್, ರಾಜಣ್ಣ, ಗ್ರಾಮ ಆಡಳಿತ ಅಧಿಕಾರಿ ರಾಹುಲ್ ಇನ್ನಿತರರು ಇದ್ದರು.
.