ದೊಡ್ಡಮಗ್ಗೆ- ಇಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿಯಲ್ಲಿ ಶೇ. 96 ಲಭಿಸಿದೆ. ಪರೀಕ್ಷೆಯಲ್ಲಿ ಕುಳಿತಿದ್ದ 81 ವಿದ್ಯಾರ್ಥಿಗಳಲ್ಲಿ 78 ಮಂದಿ ತೇರ್ಗಡೆಯಾಗಿದ್ದಾರೆ. 18 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಲಾನ ವಿಭಾಗದಲ್ಲಿ 28 ವಿದ್ಯಾರ್ಥಿಗಳ ಪೈಕಿ 25 ತೇರ್ಗಡೆಯಾಗಿದ್ದು, 7 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ. 100 ಫಲಿತಾಂಶ ಬಂದಿದೆ.

ರಾಮನಾಥಪುರ: ಇಲ್ಲಿಯ ಕೃಷಿಕರಾದ ಆರ್‌. ಎನ್. ಪಟ್ಟಾಭಿ ಅವರ ಪುತ್ರ ಆರ್‌. ಪಿ. ಶ್ರೇಯಸ್ ಅವರು ಹಾಸನ ಸೆಂಟ್ರಲ್ ಕಾರ್ಮಸ್ ಕಾಲೇಜಿನಲ್ಲಿ 573 ಶೇ. 95.5 ಫಲಿತಾಂಶ ಪಡೆದು ತೇರ್ಗಡೆಯಾಗಿದ್ದಾರೆ.

ದೊಡ್ಡಮಗ್ಗೆ- ಇಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿಯಲ್ಲಿ ಶೇ. 96 ಲಭಿಸಿದೆ. ಪರೀಕ್ಷೆಯಲ್ಲಿ ಕುಳಿತಿದ್ದ 81 ವಿದ್ಯಾರ್ಥಿಗಳಲ್ಲಿ 78 ಮಂದಿ ತೇರ್ಗಡೆಯಾಗಿದ್ದಾರೆ. 18 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಲಾನ ವಿಭಾಗದಲ್ಲಿ 28 ವಿದ್ಯಾರ್ಥಿಗಳ ಪೈಕಿ 25 ತೇರ್ಗಡೆಯಾಗಿದ್ದು, 7 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ. 100 ಫಲಿತಾಂಶ ಬಂದಿದೆ. 14 ವಿಷಯಗಳಲ್ಲಿ 13 ವಿಷಯಗಳು ಶೇ. 100 ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ ಎಸ್. ಎಲ್. ಧನಂಜಯ 538 ವಾಣಿಜ್ಯ ವಿಭಾಗದಲ್ಲಿ ಪವಿತ್ರಾ 549, ವಿಜ್ಲಾನ ವಿಭಾಗದಲ್ಲಿ ಆಶಾ 544 ಅಂಕ ಗಳಿಸಿದ್ದಾರೆ. ಶೇ. 100 ಫಲಿತಾಂಶ ಗಳಿಸಲು ಕಾರಣರಾದ ಉಪನ್ಯಾಸಕರಿಗೆ ಪ್ರಾಂಶುಪಾಲೆ ಫರ್ಜಾನಾ ಅಂಜು 5 ಸಾವಿರ ರು. ಪ್ರೋತ್ಸಾಹ ಧನ ನೀಡಿ ಅಭಿನಂದಿಸಿದ್ದಾರೆ.