ಸಾರಾಂಶ
ಮುಂಡರಗಿ: 37 ವರ್ಷ ಅರ್ಥಪೂರ್ಣ ಸೇವೆ ಸಲ್ಲಿಸಿದ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕ ಎಸ್.ಆರ್. ರಿತ್ತಿ ಪ್ರಾರಂಭದ 11 ವರ್ಷಗಳ ಕಾಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೇವೆ ಸಲ್ಲಿಸಿ ಅಪಾರ ವಿದ್ಯಾರ್ಥಿ ಬಳಗ ಹೊಂದಿದ್ದು, ಒಳ್ಳೆಯ ಗುರುಗಳನ್ನು ಶಿಷ್ಯರು ಹಾಗೂ ಸಂಸ್ಥೆ ಸದಾ ಸ್ಮರಿಸುತ್ತದೆ ಎಂದು ಜ.ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.
ಅವರು ಗುರುವಾರ ಪಟ್ಟಣದ ಶ್ರೀ ಜ.ಅ.ವಿದ್ಯಾ ಸಮಿತಿ ಮುಂಡರಗಿ, ಎಂ.ಎಸ್. ಡಂಬಳ ಹೆಣ್ಣು ಮಕ್ಕಳ ಪ್ರೌಢಶಾಲೆ ಹಾಗೂ ಜ.ಅ. ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದ ಪ್ರಯುಕ್ತ ಹಳೆಯ ವಿದ್ಯಾರ್ಥಿಗಳಿಂದ ಎಸ್.ಆರ್.ರಿತ್ತಿ ಹಾಗೂ ಸುಧಾ ಸಾಹುಕಾರಗೆ ನಡೆದ ಗುರುವಂದನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.ಎಸ್.ಆರ್.ರಿತ್ತಿ ಇನ್ನು ಮುಂದೆಯೂ ಸಹ ವಿದ್ಯಾ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಜತೆಗೆ ಮುಂದಿನ ವರ್ಷದಿಂದ ನಮ್ಮ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ.ಕಾಲೇಜಿನ ಆವರಣದಲ್ಲಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಈಗಾಗಲೇ ₹ 2 ಕೋಟಿಗಳಷ್ಟು ಹಣ ಖರ್ಚಾಗಿದ್ದು, 2025ರ ಜೂನ್ ತಿಂಗಳಿನ ವೇಳೆಗೆ ಉದ್ಘಾಟನೆಗೆ ಸಜ್ಜುಗೊಳ್ಳಬೇಕಿದೆ.ಹೀಗಾಗಿ ಇಲ್ಲಿ ಕಲಿತು ವಿವಿದೆಢೆ ಕಾರ್ಯ ನಿರ್ವಹಿಸುತ್ತಿರುವ ವಿದ್ಯಾರ್ಥಿಗಳು ಕಟ್ಟಡಕ್ಕೆ ಹಣಕಾಸಿನ ನೆರವು ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ. ಪ್ರಕಾಶ ಹೊಸಮನಿ, ಡಾ.ಸಿ.ಸಿ. ವಾಚದಮಠ, ಉಮಾ ಗಿಂಡಿಮಠ, ಪವನ್ ಮೇಟಿ, ಮಂಜುನಾಥ ಇಟಗಿ ಮಾತನಾಡಿ, ಎಸ್.ಆರ್.ರಿತ್ತಿ ಶಿಕ್ಷಕರು ಪ್ರಾರಂಭದಲ್ಲಿ ಕಡಿಮೆ ವೇತನ ಪಡೆದರೂ ಸಹ ನಮಗೆಲ್ಲ ಪ್ರೀತಿ ಕೊಡುವಲ್ಲಿ ಎಂದೂ ಕಡಿಮೆ ಮಾಡಿರಲಿಲ್ಲ. ಕಬ್ಬಿಣದ ಕಡಲೆಯಾದ ಗಣಿತವನ್ನು ಸುಲಲಿತವಾಗಿ ಕಲಿಸಿದರು ಎಂದರು.ಎಸ್.ಜಿ. ಕೋರಿ, ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಎಸ್.ಆರ್. ರಿತ್ತಿ ಮಾತನಾಡಿ, ನಾನು ಶಿಕ್ಷಕನಾಗಿ ಸೇವೆಗೆ ಸೇರಿದಾಗ ಸಂಬಳ ಕಡಿಮೆ ಇತ್ತು, ಸಂತೊಷ ಹೆಚ್ಚಿತ್ತು.ಇಂದು ಸಂಬಳ ಹೆಚ್ವಾಗಿದೆ,ಆದರೆ ಸಂತಸ ಕಡಿಮೆಯಾಗಿದೆ. ನಿತ್ಯ ಪಾಠ ಮಾಡುವ ಶಿಕ್ಷಕರಿಗೆ ನಿರಂತರ ಅಭ್ಯಾಸ ಮಾಡುವುದು ಅವಶ್ಯವಾಗಿದೆ ಎಂದರು.ಸುಧಾ ಸಾಹುಕಾರ್ ಮಾತನಾಡಿ, ನಾನು ಪ್ರಥಮವಾಗಿ ಕಲಿಸಿದ ವಿದ್ಯಾರ್ಥಿಗಳಿಗೆ ಅಭಿನಂದಿಸುವೆ. ನನ್ನ ಕರ್ತವ್ಯ ನಿರ್ವಹಿಸಲು ಶ್ರೀಗಳ ಅನುಗ್ರಹದಿಂದ ನಾನು ಉತ್ತಮವಾಗಿ ಸೇವೆ ಮಾಡಿರುವೆ. ನಾವು ಕಲಿಸಿದ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದಯಲ್ಲಿರುವುದು ಖುಷಿ ತಂದಿದೆ ಎಂದರು.
ಸಮ್ಮುಖ ವಹಿಸಿದ್ದ ನಿರಂಜನ ಸ್ವಾಮೀಜಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಗೀತಾ ರಿತ್ತಿ, ಎಂ.ಎಸ್. ಶಿವಶೆಟ್ಟರ, ಆರ್.ಆರ್. ಹೆಗಡಾಳ, ಕರಬಸಪ್ಪ ಹಂಚಿನಾಳ, ಆನಂದಗೌಡ ಪಾಟೀಲ, ನಾಗರಾಜ ಹೊಸಮನಿ, ಡಾ. ವಿಜಯಗಿಂಡಿಮಠ, ಶ್ರಿನಿವಾಸ ಉಪ್ಪಿನಬೆಟಗೆರಿ, ಮಹೇಶ ಹತ್ತಿ, ಅಮಜಾದ್ ಹಣಗಿ, ಡಾ. ವಿರೇಂದ್ರ ಹಿರೇಮಠ, ದಶಗಿರ್ ಸಾಬ್ ಹೊಸಮನಿ, ಶಿವಕುಮಾರ ಗಿಂಡಿಮಠ, ಎಸ್.ಎಸ್. ಗಿಂಡಿಮಠ, ನೇತ್ರಾವತಿ ಭಾವಿಹಳ್ಳಿ, ಅಮಿನಸಾಬ್ ಬಿಸನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಂಜುನಾಥ ಹರ್ತಿ ನಿರೂಪಿಸಿದರು.