ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಕಾಡುಗೊಲ್ಲ ಸಮುದಾಯವನ್ನು ಆರ್ಥಿಕ ಸಾಮಾಜಿಕವಾಗಿ ಸದೃಢರನ್ನಾಗಿ ಮಾಡಲು ಸರ್ಕಾರವು ಬದ್ಧವಾಗಿದ್ದು ಈ ನಿಟ್ಟಿನಲ್ಲಿ ಕಾಡುಗೊಲ್ಲ ಸಮುದಾಯಕ್ಕೆ ವಿವಿಧ ಸವಲತ್ತುಗಳನ್ನು ವಿತರಿಸಲಾಗುತ್ತಿದೆ ಎಂದು ಶಾಸಕ ಟಿ ಬಿ ಜಯಚಂದ್ರ ಹೇಳಿದರು. ಅವರು ನಗರದ ತಾಲೂಕು ಪಂಚಾಯತಿ ಆವರಣದಲ್ಲಿ ಡಿ ದೇವರಾಜು ಆರಸು ಹಿಂದುಳಿದ ವರ್ಗಗಳ ನಿಗಮ ಮತ್ತು ಕಾಡುಗೊಲ್ಲ ಅಭಿವೃಧ್ದಿ ನಿಗಮ ಫಲಾನುಭವಿಗಳ ಮಂಜುರಾತಿ ಪತ್ರ ಹಾಗೂ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಿ ಮಾತನಾಡಿದರು. ಕಾಡುಗೊಲ್ಲ ಸಮುದಾಯವು ಸಾಮಾಜಿಕ ಪಿಡುಗಿನ ಕಟ್ಟುಪಾಡುಗಳಿಂದ ಹೊರಗೆ ಬರಬೇಕು ಕಾಡುಗೊಲ್ಲ ಸಮುದಾಯ ಸಬಲರಾಗುವ ನಿಟ್ಟಿನಲ್ಲಿ ಜನಾಂಗದ ಮುಂಖಡರು ಪ್ರಯತ್ನ ಮಾಡಿದರೆ ಆರ್ಥಿಕ ಶಕ್ತಿ ಹೆಚ್ಚಿ ಜೀವನಮಟ್ಟ ಸುಧಾರಿಸುತ್ತದೆ ಎಂದು ಹೇಳಿದರು. ತಹಶೀಲ್ದಾರ್ ಸಚ್ಚಿದಾನಂದ ಕುಚನೂರ, ಮಾತನಾಡಿ ಶಿರಾ ತಾಲೂಕಿನಲ್ಲಿ ಕಾಡುಗೊಲ್ಲ ಹಟ್ಟಿಗಳಲ್ಲಿ ಜನವಸತಿ ಪ್ರದೇಶಗಳಿದ್ದು ಕಾಡುಗೊಲ್ಲ ಹಟ್ಟಿಗಳಲ್ಲಿ ಹಕ್ಕುಪತ್ರ ಸವಲತ್ತುಗಳನ್ನು ಕಂದಾಯ ಇಲಾಖೆ ಮುಖಾಂತರ ಶೀಘ್ರವಾಗಿ ವಿತರಸುವ ಭರವಸೆ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಹರೀಶ್ ಮಾತನಾಡಿ ಸರಕಾರದಿಂದ ನೀಡಲಾಗುತ್ತಿರುವ ವಿವಿಧ ಸವಲತ್ತುಗಳನ್ನು ಫಲಾನುಭವಿಗಳು ಸದ್ಬಳಕೆ ಮಾಡಿಕೊಂಡಾಗ ಸರಕಾರದ ಯೋಜನೆ ಯಶಸ್ವಿಯಾಗುತ್ತದೆ ಎಂದರು.ಕಾಡುಗೊಲ್ಲ ಸಮುದಾಯದ ಮುಖಂಡ ಸುದರ್ಶನ್ ಮಾತನಾಡಿ, ಸ್ಥಳೀಯ ಶಾಸಕರ ಸಹಕಾರದಿಂದ ಕಾಡುಗೊಲ್ಲ ಅಭಿವೃದ್ಧಿ ನಿಗಮದ ನೊಂದಣಿ ಮಾಡಿಸುವ ನಿಟ್ಟಿನಲ್ಲಿ ನಿಗಮದ ರೂಪುರೇಷೆಯನ್ನು ಅಂತಿಮಗೊಳಿಸಿದ್ದು ಕಾರ್ಯಗತವಾಗಲು ಸಹಕಾರಿಯಾಯಿತು ಎಂದರು. ಕಾರ್ಯಕ್ರಮದಲ್ಲಿ ಕಾಡುಗೊಲ್ಲ ನಿಮಮದ ವ್ಯವಸ್ಥಾಪಕ ವೆಂಕಟರಾಜು , ಕಾಡುಗೊಲ್ಲ ಸಂಘದ ಶಿರಾ ತಾಲೂಕು ಅಧ್ಯಕ್ಷರಾದ ಈಶ್ವರಪ್ಪ ಕಾರ್ಪೇಹಳ್ಳಿ , ಹಾರೋಗೆರೆ ಮಹೇಶ್, ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ವೈಡಿ ಗೋಪಾಲ್, ಎಸ್ ಎಲ್ ಗೋವಿಂದರಾಜು, ಸೇರಿದಂತೆ ಹಲವರು ಹಾಜರಿದ್ದರು.