ಗುಣಮಟ್ಟದ ಶಿಕ್ಷಣಕ್ಕಾಗಿ ಸರ್ಕಾರ ಹಲವು ಯೋಜನೆಗಳ ಜಾರಿ

| Published : Sep 24 2024, 01:59 AM IST

ಸಾರಾಂಶ

ಕವಿತಾಳ ಪಟ್ಟಣದ ಬಾಲಕಿಯರ ಸಾರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು.

ಕನ್ನಡಪ್ರಭ ವಾರ್ತೆ ಕವಿತಾಳ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳ ಪ್ರಯೋಜನ ಪಡೆಯುವ ಮೂಲಕ ಉತ್ತಮ ಶಿಕ್ಷಣ ಪಡೆಯಬೇಕು ಎಂದು ಶಾಸಕ ಜಿ.ಹಂಪಯ್ಯ ನಾಯಕ ಹೇಳಿದರು.

ಪಟ್ಟಣದ ಬಾಲಕಿಯರ ಸಾರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಲಯ ವ್ಯಾಪ್ತಿಯ 25 ಶಾಲೆಗಳ ಅಂದಾಜು 600 ಮಕ್ಕಳು ವೈಯಕ್ತಿಕ ಹಾಗೂ ಸಮೂಹ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಕಾರ್ಯಕ್ರಮದಲ್ಲಿ ಸೋಲು ಗೆಲುವು ಎಂದುಕೊಳ್ಳದೆ ಭಾಗವಹಿಸುವುದಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಈ ವೇಳೆ ಜಿಪಂ ಮಾಜಿ ಸದಸ್ಯ ಕಿರಲಿಂಗಪ್ಪ ಮತ್ತು ಸಿಆರ್‌ಪಿ ಸೌಮ್ಯಶ್ರೀ ಮಾತನಾಡಿದರು. ಬಿಇಒ ಚಂದ್ರಶೇಖರ ದೊಡ್ಡಮನಿ, ಎಸ್‌ಡಿಎಂಸಿ ಅಧ್ಯಕ್ಷ ಹಂಪಣ್ಣ ಕಂದಗಲ್, ಮುಖಂಡರಾದ ಶೇಖರಪ್ಪ ಹಟ್ಟಿ, ಗಂಗಪ್ಪ ದಿನ್ನಿ, ರಾಜೇಶ ಬನ್ನಿಗಿಡದ, ಒವಣ್ಣ, ಚಾಂದ್ ಪಾಶಾ, ತಿಮ್ಮಣ್ಣ ಬಲ್ಲಟಗಿ, ಇಸ್ಮಾಯಿಲ್ ಸಾಬ್, ಶರಣಬಸವ ಹಣಿಗಿ, ಅಯ್ಯಪ್ಪ ನಿಲಗಲ್, ಪತ್ರಕರ್ತ ಅಮರೇಶ ಭೋವಿ, ಮುಖ್ಯ ಶಿಕ್ಷಕ ರುದ್ರಪ್ಪ ಲೋಕಾಪುರ, ಎಎಸ್ ಐ ರಮೇಶಕುಮಾರ ಉಪಸ್ಥಿತರಿದ್ದರು.