ಸರ್ಕಾರಿ ಭೂಮಿ, ಅರಣ್ಯ ಪ್ರದೇಶ ಖಾಸಗಿಯವರಿಗೆ ಲೀಜ್ ನೀಡಿಕೆ ಸಲ್ಲದು

| Published : Jun 26 2024, 01:34 AM IST

ಸರ್ಕಾರಿ ಭೂಮಿ, ಅರಣ್ಯ ಪ್ರದೇಶ ಖಾಸಗಿಯವರಿಗೆ ಲೀಜ್ ನೀಡಿಕೆ ಸಲ್ಲದು
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಗಿರಿ: ತಾಲೂಕಿನಲ್ಲಿ ಅರಣ್ಯ ಮತ್ತು ಸರ್ಕಾರಿ ಭೂ ಪ್ರದೇಶವನ್ನು ಲೀಜ್ ಆಧಾರದಲ್ಲಿ ಖಾಸಗಿಯವರಿಗೆ ನೀಡುವ ಹುನ್ನಾರ ನಡೆಯುತ್ತಿದೆ. ಹಾಗೇನಾದರೂ ಲೀಜ್‌ಗೆ ನೀಡಿದರೆ ತಾಲೂಕು ರೈತ ಸಂಘಟನೆಗಳಿಂದ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಹುಚ್ಚವ್ವನಹಳ್ಳಿ ಮಂಜುನಾಥ್ ಬಣ ಚನ್ನಗಿರಿಯಲ್ಲಿ ಎಚ್ಚರಿಸಿದ್ದಾರೆ.

- ರೈತ ಸಂಘ-ಹಸಿರು ಸೇನೆ ಅಸಮಾಧಾನ: ತಹಸೀಲ್ದಾರ್‌ಗೆ ಮನವಿ - - - ಚನ್ನಗಿರಿ: ತಾಲೂಕಿನಲ್ಲಿ ಅರಣ್ಯ ಮತ್ತು ಸರ್ಕಾರಿ ಭೂ ಪ್ರದೇಶವನ್ನು ಲೀಜ್ ಆಧಾರದಲ್ಲಿ ಖಾಸಗಿಯವರಿಗೆ ನೀಡುವ ಹುನ್ನಾರ ನಡೆಯುತ್ತಿದೆ. ಹಾಗೇನಾದರೂ ಲೀಜ್‌ಗೆ ನೀಡಿದರೆ ತಾಲೂಕು ರೈತ ಸಂಘಟನೆಗಳಿಂದ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಹುಚ್ಚವ್ವನಹಳ್ಳಿ ಮಂಜುನಾಥ್ ಬಣ ಎಚ್ಚರಿಸಿದೆ. ಸಂಘಟನೆ ಮುಖಂಡ ಎಸ್.ಆರ್.ರವಿಕುಮಾರ್ ಮತ್ತು ರೈತ ಸಂಘದ ಪದಾಧಿಕಾರಿಗಳು ಮಂಗಳವಾರ ತಹಸೀಲ್ದಾರರಿಗೆ ಈ ಸಂಬಂಧ ಮನವಿಯನ್ನೂ ಸಲ್ಲಿಸಿದರು.

ತಾಲೂಕಿನ ಬಸವಾಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಸಾವಿರಾರು ರೈತರು ಅರಣ್ಯ ಭೂಮಿ ಸಿ ಮತ್ತು ಡಿ ಮತ್ತು ಸರ್ಕಾರಿ ಜಾಗಗಳಲ್ಲಿ ಹಲವಾರು ವರ್ಷಗಳಿಂದ ಬಗರ್‌ಹುಕುಂ ಸಾಗುವಳಿ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಈ ಜಮೀನುಗಳನ್ನು ಎಂ.ಪಿ.ಎಂ. ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಸರ್ಕಾರಿ ಜಮೀನು ಲೀಜ್‌ಗೆ ನೀಡಬೇಕೆಂದು ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರರಿಗೆ ಒತ್ತಡ ಹಾಕುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದ್ದಾರೆ.

ಸರ್ಕಾರ ಈ ಸಂಬಂಧ ಯಾವುದೇ ಒತ್ತಡಗಳಿಗೆ ಮಣಿಯದೇ ಬಡರೈತರನ್ನು ಒಕ್ಕಲೆಬ್ಬಿಸಬಾರದು. ಯಾವುದೇ ಇಲಾಖೆಗಳಿಗೂ ಸರ್ಕಾರಿ ಭೂಮಿಯನ್ನು ಲೀಜ್ ನೀಡಬಾರದು. ಈಗಾಗಲೇ ಬಸವಾಪಟ್ಟಣ ಹೋಬಳಿಯ ಮೋಹಿಹುದ್ದಿನ್ ಪುರ ಗ್ರಾಮದ ಸರ್ವೆ ನಂಬರ್: 74, 28, ರಾಮಸಾಗರದ 10 ಮತ್ತು 6 ಸರ್ವೆ ನಂಬರ್, ಕಂಚುಗಾರ್ತಿಕಟ್ಟಿ 17, 18, ಶೃಂಗಾರಬಾಗ್ 18 ಈ ಸರ್ವೆ ನಂಬರ್‌ಗಳಲ್ಲಿ ರೈತರಿಗೆ ಗೊತ್ತಿಲ್ಲದಂತೆ ಲೀಜ್ ಪ್ರಕ್ರಿಯೆ ನಡೆಯುತ್ತಿದೆ. ಈ ಕ್ರಮವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ತಹಸೀಲ್ದಾರರಿಗೆ ಒತ್ತಾಯಿಸಿದರು.

- - - -25ಕೆಸಿಎನ್‌ಜಿ1:

ಸರ್ಕಾರಿ ಭೂಮಿ, ಅರಣ್ಯ ಪ್ರದೇಶ ಖಾಸಗಿಯವರಿಗೆ ಲೀಜ್‌ ಆಧಾರದಲ್ಲಿ ನೀಡದಂತೆ ಒತ್ತಾಯಿಸಿ ರೈತ ಸಂಘದ ಮುಖಂಡರು ಚನ್ನಗಿರಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.