ಪಾಕಿಸ್ತಾನ ಪರ ಕೂಗಿದವರನ್ನು ರಕ್ಷಿಸುತ್ತಿರುವ ಸರ್ಕಾರ: ರವಿಕುಮಾರ ಆರೋಪ

| Published : Mar 07 2024, 01:52 AM IST

ಪಾಕಿಸ್ತಾನ ಪರ ಕೂಗಿದವರನ್ನು ರಕ್ಷಿಸುತ್ತಿರುವ ಸರ್ಕಾರ: ರವಿಕುಮಾರ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರವೇ ತಪ್ಪಿತಸ್ಥರನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕಾಗಿತ್ತು.

ಕೊಪ್ಪಳ: ಪಾಕಿಸ್ತಾನ ಪರ ಘೋಷಣೆ ಹಾಕಿದವರನ್ನು ರಾಜ್ಯ ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ವಿಪ ವಿರೋಧ ಪಕ್ಷದ ಮುಖ್ಯ ಸಚೇತಕ ರವಿಕುಮಾರ ಆರೋಪಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವೇ ತಪ್ಪಿತಸ್ಥರನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ, ಪ್ರಕರಣದಲ್ಲಿ ಅನೇಕ ಸಚಿವರು ಹಾಗೆ ಕೂಗಿಯೇ ಇಲ್ಲ ಎಂದು ವಾದಿಸುತ್ತಲೇ ಆರೋಪಿಗಳನ್ನು ರಕ್ಷಣೆ ಮಾಡುವ ಪ್ರಯತ್ನ ಮಾಡಿದರು. ಈ ಮೂಲಕ ತುಷ್ಠೀಕರಣ ರಾಜಕಾರಣ ಪರಾಕಾಷ್ಠೆ ತಲುಪಿದೆ. ಕಾಂಗ್ರೆಸ್ ಸರ್ಕಾರ ಈಗಲೂ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಬದಲು ವಿಚಾರಣೆ ಮಾಡುವ ನಾಟಕ ಮಾಡುತ್ತಿದೆ ಎಂದು ಆರೋಪಿಸಿದರು.ಡಿಎಂಕೆ ನಾಯಕ ಎ.ರಾಜಾ ದೇಶ ಒಡೆಯುವ ಬಗ್ಗೆ ಮಾತಾಡಿದ್ದಾರೆ. ದೇಶದ ಬಗ್ಗೆ ಗೌರವವೇ ಇಲ್ಲ. ಭಾರತ ಒಂದು ದೇಶವೇ ಅಲ್ಲ ಎನ್ನುವ ಮೂಲಕ ದೇಶದ್ರೋಹ ಮಾಡಿದ್ದಾರೆ. ಹೀಗಾಗಿ, ಇಂಥವರಿಗೆ ಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದರು.ಪಿಎಫ್ಐ, ಕೆಎಫ್‌ಡಿ ಮೇಲಿನ ಕೇಸ್ ತೆಗೆದು ಹಾಕಿದಾಗಲೇ ಕಾಂಗ್ರೆಸ್ ಟಿಪ್ಪು ಸುಲ್ತಾನ ಸರ್ಕಾರವೆಂದು ಕರೆದಿದ್ದೇನೆ ಎಂದರು.ಮಠಗಳಿಗೆ ಬಿಜೆಪಿ ನೀಡಿದ್ದ ಹಣವನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿಲ್ಲ. ಗವಿಮಠಕ್ಕೆ ಬಿಜೆಪಿ ಸರ್ಕಾರ ಘೋಷಣೆ ಮಾಡಿದ್ದ ₹10 ಕೋಟಿ ಪೈಕಿ ಈಗ ₹2.5 ಕೋಟಿ ಮಾತ್ರ ಕೊಡಲಾಗಿದ್ದು, ನಂತರ ಬಂದ ಕಾಂಗ್ರೆಸ್ ಸರ್ಕಾರ ಉಳಿದ ಹಣವನ್ನು ನೀಡಿಲ್ಲ ಎಂದು ಆರೋಪಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ. ಹೆಬ್ಬಾರ್, ಎಸ್.ಟಿ. ಸೋಮಶೇಖರ ಬಿಟ್ಟರೆ ಕಾಂಗ್ರೆಸ್ ಪಕ್ಷಕ್ಕೆ ಹೋಗುವವರು ಯಾರೂ ಇಲ್ಲ ಎಂದರು.