ಸಾರಾಂಶ
ಶಾಲಾ ಆವರಣಕ್ಕೆ ನುಗ್ಗಿದ ಜಾನುವಾರುಗಳು ಅಲ್ಲಿ ನೆಡಲಾಗಿದ್ದ ಹೂವಿನ ಗಿಡಗಳು ನಾಶವಾಗಿವೆ. ಇದನ್ನು ಗಮನಿಸಿದ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ತುರ್ತು ತಂತಿ ಬೇಲಿ ನಿರ್ಮಿಸಿದ್ದಾರೆ.
ಯಲ್ಲಾಪುರ: ಧಾರಾಕಾರ ಮಳೆಗೆ ಮಂಗಳವಾರ ತಾಲೂಕಿನ ತಟಗಾರ ಸ.ಹಿ.ಪ್ರಾ. ಶಾಲೆಯ ಆವಾರದ ಗೋಡೆ ಕುಸಿದು ಬಿದ್ದಿದೆ. ಆದರೆ ಶಾಲೆಯಲ್ಲಿ ವಿದ್ಯಾರ್ಥಿಗಳು ಇಲ್ಲದ ಸಮಯದಲ್ಲಿ ಬಿದ್ದಿದ್ದರಿಂದ ಯಾವುದೇ ಅವಘಡ ಸಂಭವಿಸಿಲ್ಲ.
ಶಾಲಾ ಆವರಣಕ್ಕೆ ನುಗ್ಗಿದ ಜಾನುವಾರುಗಳು ಅಲ್ಲಿ ನೆಡಲಾಗಿದ್ದ ಹೂವಿನ ಗಿಡಗಳು ನಾಶವಾಗಿವೆ. ಇದನ್ನು ಗಮನಿಸಿದ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ತುರ್ತು ತಂತಿ ಬೇಲಿ ನಿರ್ಮಿಸಿದ್ದಾರೆ.೨೦೦೫ರಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಈ ಆವಾರ ಗೋಡೆಯನ್ನು ನಿರ್ಮಿಸಲಾಗಿತ್ತು. ಗೋಡೆಯ ಮುಂಭಾಗದಲ್ಲಿ ಬರೆಯಲಾಗಿದ್ದ ವಿವಿಧ ಗಾದೆಮಾತುಗಳನ್ನು ವಿದ್ಯಾರ್ಥಿಗಳು ನಿತ್ಯ ಓದುತ್ತಿದ್ದರು. ಕಾಂಪೌಂಡ್ ತಳಭಾಗದಲ್ಲಿ ಮಕ್ಕಳು ಹೂವಿನ ಗಿಡಗಳನ್ನು ಬೆಳೆಸಿದ್ದಾರೆ. ಶಾಲಾಭಿವೃದ್ಧಿ ಮತ್ತು ಮಕ್ಕಳ ಸುರಕ್ಷತೆಗಾಗಿ ಉತ್ತಮ ಆವಾರ ಗೋಡೆ, ಸೂಕ್ತ ಕೊಠಡಿ ನಿರ್ಮಾಣ ತುರ್ತು ಅಗತ್ಯವಾಗಿದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.ಮನೆಗೋಡೆ ಕುಸಿದು ಮಹಿಳೆಗೆ ಗಾಯ
ಮುಂಡಗೋಡ: ಪಾತ್ರೆ ತೊಳೆಯುತ್ತಿದ್ದ ಮಹಿಳೆಯ ಮೇಲೆ ಪಕ್ಕದ ಮನೆಯ ಗೋಡೆ ಕುಸಿದು ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಕಲಕೇರಿ ಪ್ಲಾಟ್ ಹೊನ್ನಿಕೊಪ್ಪದಲ್ಲಿ ಮಂಗಳವಾರ ನಡೆದಿದೆ.ಸಾತವ್ವ ಭೀಮಣ್ಣ ಬೆಂಗಳೂರ (೫೦) ಗಾಯಗೊಂಡ ಮಹಿಳೆ. ಮನೆಯ ಹಿತ್ತಲಿನಲ್ಲಿ ಪಾತ್ರೆ ತೊಳೆಯುತ್ತಿದ್ದ ಇವರ ಮೇಲೆ, ಪಕ್ಕದ ಹಟೇಲ್‌ಸಾಬ್ ಅತ್ತಾರ್ ಎಂಬವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಈ ದುರ್ಘಟನೆ ನಡೆದಿದ್ದು, ಗಾಯಾಳು ಮಹಿಳೆಗೆ ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿರಂತರ ಮಳೆಯ ಕಾರಣಕ್ಕೆ ಗೋಡೆ ಶಿಥಿಲಗೊಂಡು ಕುಸಿದು ಬಿದ್ದಿದೆ ಎನ್ನಲಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.