ಒಳಮೀಸಲಾತಿ ಜಾರಿಗೆ ಸರ್ಕಾರ ಪ್ರಜ್ಞಾವಂತಿಕೆ ಪ್ರದರ್ಶಿಸಲಿ: ಮತ್ತಿಕೆರೆ ಹನುಮಂತಯ್ಯ

| Published : Aug 11 2024, 01:34 AM IST

ಒಳಮೀಸಲಾತಿ ಜಾರಿಗೆ ಸರ್ಕಾರ ಪ್ರಜ್ಞಾವಂತಿಕೆ ಪ್ರದರ್ಶಿಸಲಿ: ಮತ್ತಿಕೆರೆ ಹನುಮಂತಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ದೇಶ ಸರ್ವೋಚ್ಛ ನ್ಯಾಯಾಲಯ ಒಳಮೀಸಲಾತಿ ಪರ ಐತಿಹಾಸಿಕ ತೀರ್ಪು ನೀಡಿದ್ದು, ಸ್ವಾಗತಾರ್ಹ. ಇದರೊಂದಿಗೆ ಕೆನೆಪದರವೂ ಮುನ್ನೆಲೆಗೆ ಬಂದಿದೆ. ಈ ಆದೇಶ ಜಾರಿಗೊಳಿಸುವಲ್ಲಿ ಸರ್ಕಾರ ಪ್ರಜ್ಞಾವಂತಿಕೆ ಪ್ರದರ್ಶಿಸಬೇಕು ಎಂದು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಿತರಕ್ಷಣಾ ಸಮಿತಿಯ ಮತ್ತಿಕೆರೆ ಹನುಮಂತಯ್ಯ ಅಭಿಪ್ರಾಯಪಟ್ಟರು. ಚನ್ನಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

-ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಿತರಕ್ಷಣಾ ಸಮಿತಿಯ ಸದಸ್ಯ ಅಭಿಮತಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ದೇಶ ಸರ್ವೋಚ್ಛ ನ್ಯಾಯಾಲಯ ಒಳಮೀಸಲಾತಿ ಪರ ಐತಿಹಾಸಿಕ ತೀರ್ಪು ನೀಡಿದ್ದು, ಸ್ವಾಗತಾರ್ಹ. ಇದರೊಂದಿಗೆ ಕೆನೆಪದರವೂ ಮುನ್ನೆಲೆಗೆ ಬಂದಿದೆ. ಈ ಆದೇಶ ಜಾರಿಗೊಳಿಸುವಲ್ಲಿ ಸರ್ಕಾರ ಪ್ರಜ್ಞಾವಂತಿಕೆ ಪ್ರದರ್ಶಿಸಬೇಕು, ಅಂತೆಯೇ ಈ ಕುರಿತು ಸಮುದಾಯದ ಒಳಗೆ ಮುಕ್ತ ಮತ್ತು ನ್ಯಾಯಸಮ್ಮತ ಸಂವಾದ ನಡೆಯಬೇಕಿದೆ ಎಂದು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಿತರಕ್ಷಣಾ ಸಮಿತಿಯ ಮತ್ತಿಕೆರೆ ಹನುಮಂತಯ್ಯ ಅಭಿಪ್ರಾಯಪಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿಯಲ್ಲಿ ಅವಕಾಶ ಹಾಗೂ ಅಪಾಯ ಎರಡು ಇದೆ. ನ್ಯಾಯಾಲಯದ ಆದೇಶ ಪಾಲಿಸುವ ಗುರುತರ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಎರಡೂ ಸಮುದಾಯದ ಶಾಸಕರು, ಸಂಸದರು, ಹಿರಿಯ ಮುಖಂಡರು ಮುಕ್ತ ಸಂವಾದ ನಡೆಸಬೇಕೆಂಬುದು ನಮ್ಮ ಆಶಯ ಎಂದರು.

೨೦೨೦ರಲ್ಲೇ ಅಸ್ಪೃಶ್ಯ ಜಾತಿಗಳ ಪಟ್ಟಿಯಿಂದ ನಾಲ್ಕು ಜಾತಿಗಳನ್ನು ಕೈಬಿಡುವಂತೆ ನ್ಯಾಯಾಲಯ ತೀರ್ಪು ನೀಡಿದೆ. ಆದರೆ, ಈ ಆದೇಶ ಇನ್ನು ಪಾಲನೆಯಾಗಿಲ್ಲ. ಇದು ಪಾಲನೆಯಾದರೆ, ಬಲಗೈ-ಎಡಗೈ ಸಮಯದಾಯಕ್ಕೆ ಹೆಚ್ಚಿನ ಲಾಭವಾಗಲಿದೆ ಎಂದರು.

ದಲಿತ ಮುಖಂಡ ಚಂದ್ರಶೇಖರ್ ಮಾತನಾಡಿ, ಕೆಲ ರಾಜಕಾರಣಿಗಳು ತಮ್ಮ ಅನೂಕೂಲಕ್ಕಾಗಿ ಜಾರಿಗೆ ತರುವ ಕಾನೂನುಗಳು ತುಳಿತಕ್ಕೆ ಒಳಗಾದ ಸಮುದಾಯಗಳ ಹಿತವನ್ನು ಬಲಿಕೊಡುತ್ತವೆ. ಹಾಗಾಗಿ ನಾವೆಲ್ಲರೂ ಎಚ್ಚರ ವಹಿಸಬೇಕಿದೆ. ಜಾತಿಗಣತಿ ವರದಿ ಜಾರಿಗೊಳಿಸಿ ಅಸ್ಪೃಶ್ಯರಲ್ಲದ ನಾಲ್ಕು ಜಾತಿಗಳನ್ನು ಕೈ ಬಿಡುವಂತೆ ಆಗ್ರಹಿಸಿದರು.

ಅರುಣ್ ಮೌರ್ಯ ಮಾತನಾಡಿ, ರಾಜ್ಯದಲ್ಲಿ ಎಡಗೈ-ಬಲಗೈ ಸಮದಾಯದ ಹಾಗೂ ಇನ್ನಿತರ ಜಾತಿಗಳು, ಉಪಜಾತಿಗಳ ಜನಸಂಖ್ಯೆಯನ್ನು ನಿರ್ಧಿಷ್ಟವಾಗಿ ಗುರುತಿಸಬೇಕಿದೆ. ಈ ಹಿಂದೆ ೨೦೧೧ರಲ್ಲಿ ಜಾತಿ ಜನಗಣತಿ ನಡೆದಿದ್ದು, ೧೩ವರ್ಷ ಕಳೆದಿದೆ. ಸದಾಶಿವ ಆಯೋಗದ ವರದಿ ಸಾರ್ವಜನಿಕಗೊಳಿಸಬೇಕು. ಅಸ್ಪೃಶ್ಯರಲ್ಲದವರನ್ನು ಕೈಬಿಟ್ಟು ಒಳ ಮಿಸಲಾತಿ ಜಾರಿಗೆ ತರಲು ಸಮುದಾಯದ ಚಿಂತಕರು, ಶಾಸಕರು, ರಾಜ್ಯ ಮುಖಂಡರು ಸೌಹಾರ್ದಯುತವಾಗಿ ಪರಸ್ಪರ ಚರ್ಚಿಸಿ ಒಳ ಮಿಸಲಾತಿಯ ಲಾಭ ಪಡೆಯಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಮುಖಂಡ ಪಟ್ಟು ಗೋವಿಂದರಾಜು, ಚಕ್ಕೆರೆ ಗಂಗಾಧರ್, ಸ್ವಾಮಿ, ಭರತ್, ನಿಂಗಯ್ಯ, ಪ್ರಸನ್ನ, ಶಿವು, ಲಕ್ಷ್ಮಣ್, ಸತೀಶ್ ಹಾಜರಿದ್ದರು.