ಹಣಕ್ಕಾಗಿ ತೆಲಂಗಾಣಕ್ಕೆ ನೀರು ಮಾರಿದ ಸರ್ಕಾರ: ರಾಜೂಗೌಡ

| Published : Mar 27 2025, 01:02 AM IST

ಹಣಕ್ಕಾಗಿ ತೆಲಂಗಾಣಕ್ಕೆ ನೀರು ಮಾರಿದ ಸರ್ಕಾರ: ರಾಜೂಗೌಡ
Share this Article
  • FB
  • TW
  • Linkdin
  • Email

ಸಾರಾಂಶ

Government sold water to Telangana for money: Raju Gowda

-ರೈತರಿಂದ 350ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಲ್ಲಿ ಪ್ರತಿಭಟನೆ । ರಾಜೂಗೌಡ ಪೊಲೀಸ್‌ ವಶಕ್ಕೆ: ಗುರುವಾರ ಸಂಜೆವರೆಗೂ ನೀರು ಬಿಡಲು ಕಾಲಾವಕಾಶ

----

ಕನ್ನಡಪ್ರಭ ವಾರ್ತೆ ಕೊಡೇಕಲ್‌ (ಯಾದಗಿರಿ ಜಿಲ್ಲೆ)

ನೀರಿನ ಕೊರತೆಯಿಂದ ರೈತರ ಬೆಳೆಗಳು ಒಣಗುವ ಭೀತಿ ಎದುರಾಗಿದ್ದು, ನಾರಾಯಣಪುರದ ಬಸವ ಸಾಗರ ಜಲಾಶಯದ ಎಡ-ಬಲದಂಡೆ ಕಾಲುವೆಗಳಿಗೆ ಏ.15ರವರೆಗೆ ನೀರು ಹರಿಸುವಂತೆ ಆಗ್ರಹಿಸಿ ಹಾಗೂ ರಾಜ್ಯ ಸರ್ಕಾರ ತೆಲಂಗಾಣಕ್ಕೆ ಕದ್ದುಮುಚ್ಚಿ ರಾತೋರಾತ್ರಿ 10 ಟಿಎಂಸಿಯಷ್ಟು ನೀರು ಹರಿಸಿದೆ ಎಂದು ಆರೋಪಿಸಿ, ಮಾಜಿ ಸಚಿವ ರಾಜೂಗೌಡ ನೇತೃತ್ವದಲ್ಲಿ ಹುಣಸಗಿಯಿಂದ ನಾರಾಯಣಪುರವರೆಗೆ ಸಾವಿರಾರು ರೈತರ ಸಮ್ಮುಖದಲ್ಲಿ ನೂರಾರು ಟ್ರ್ಯಾಕ್ಟರ್‌ಗಳ ಪ್ರತಿಭಟನಾ ರ್‍ಯಾಲಿ ನಡೆಸಿದರು.

ಒಣಗುತ್ತಿರುವ ಬೆಳೆಯನ್ನು ಟ್ರ್ಯಾಕ್ಟರ್‌ನಲ್ಲಿ ಹೊತ್ತು ತಂದಿದ್ದ ರೈತರು, ನೀರಿಲ್ಲದೆ ಒಣಗಿದ ಪೈರು ಪ್ರದರ್ಶಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತೆಲಂಗಾಣಕ್ಕೆ ಕಳ್ಳತನದಿಂದ ನೀರು ಹರಿಸುವಾಗ ಕೊರತೆ ಕಾಣದಿದ್ದ ರಾಜ್ಯ ಸರ್ಕಾರಕ್ಕೆ ಇದೀಗ, ರೈತರಿಗೆ ನೀರು ಬಿಡುವಾಗ ನೀರಿನ ಕೊರತೆ ಅದ್ಹೇಗೆ ಕಾಣಿಸ್ತು ಎಂದು ಡ್ಯಾಂ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು. 300ಕ್ಕೂ ಹೆಚ್ಚು ಟ್ರ್ಯಾಕ್ಟರುಗಳಲ್ಲಿ. ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೂಗೌಡ ನೇತೃತ್ವದಲ್ಲಿ ಜಲಾಶಯದ ಕಚೇರಿಗೆ ಬಂದ ಪ್ರತಿಭಟನಾನಿರತ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಾರಾಯಣಪುರ ಜಲಾಶಯಕ್ಕೆ ಮುತ್ತಿಗೆ ಹಾಕಿಯಾದರೂ ನೀರು ಪಡೆಯುತ್ತೇವೆ ಎಂದು ಆಕ್ರೋಶಿತ ರೈತರು, ಮುಖ್ಯರಸ್ತೆಗೆ ಹಾಕಲಾಗಿದ್ದ ಬ್ಯಾರಿಕೇಡ್‌ ಕಿತ್ತೆಸೆದು ಜಲಾಶಯದತ್ತ ನುಗ್ಗಲೆತ್ನಿಸಿದರು. ಆಗ, ಮಾಜಿ ಸಚಿವ ರಾಜೂಗೌಡ ಸೇರಿದಂತೆ ಹಲವು ರೈತ ಮುಖಂಡರನ್ನು, ಸಂಘಟನೆಗಳ ಪಧಾಧಿಕಾರಿಗಳನ್ನು ಪೋಲಿಸರು ವಶಕ್ಕೆ ಪಡೆದರು. ಪ್ರತಿಭಟನಾಕಾರರ ಗುಂಪಿನಿಂದ ತೂರಿಬಂದ ಕಲ್ಲೊಂದು ಪೊಲೀಸ್ ಅಧಿಕಾರಿಯೊಬ್ಬರ ತಲೆಗೆ ಬಡಿದು ರಕ್ತ ಚಿಮ್ಮಲು ಕಾರಣವಾಯ್ತು.

ನಾರಾಯಣಪುರದ ಮುಖ್ಯ ಎಂಜಿನೀಯರ್ ಕಚೇರಿಯ ಮುಂಭಾಗದಲ್ಲಿ ಏ.15ರ ವರೆಗೆ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಬುಧವಾರ ಕರೆ ನೀಡಿದ್ದ ಪ್ರತಿಭಟನಾ ರ‍್ಯಾಲಿಯಲ್ಲಿ ಸಾವಿರಾರು ರೈತರನ್ನುದ್ದೇಶಿಸಿ ಮಾತನಾಡಿದ ರಾಜೂಗೌಡ, ತೆಲಂಗಾಣಕ್ಕೆ ರಾತೋರಾತ್ರಿ ಬಸವಸಾಗರದ ನೀರನ್ನು ಹರಿಸಿ, ಹಣಕ್ಕಾಗಿ ನೀರನ್ನು ಮಾರಿಕೊಂಡಿದ್ದಾರೆ ಎಂದು ಆರೋಪಿಸಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜಗೌಡ ವಿಭೂತಿಹಳ್ಳಿ, ಮಾಜಿ ಅಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ, ಬಸನಗೌಡ ಯಡಿಯಾಪುರ ಮತ್ತು ಹನುಮಂತನಾಯಕ (ಬಬ್ಲೂಗೌಡ) ಮಾತನಾಡಿ, ರೈತರೆಲ್ಲರೂ ಪಕ್ಷಾತೀತ ಒಗ್ಗಟ್ಟಾದರೆ, ಸರ್ಕಾರವನ್ನೇ ಉರುಳಿಸುವ ತಾಕತ್ತು ನಮ್ಮಲ್ಲಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ವಿರುದ್ಧ ಪರೋಕ್ಷಾ ವಾಗ್ದಾಳಿ ನಡೆಸಿದರು.

===ಬಾಕ್ಸ್‌:1====

* ಉದ್ವಿಗ್ನಗೊಂಡ ರೈತರು

ಮುಖ್ಯ ಎಂಜಿನೀಯರ್‌ಗೆ ಮನವಿ ಪತ್ರ ನೀಡಿ ನೀರು ಹರಿಸಲು ಒಂದು ದಿನ ಕಾಲಾವಕಾಶ ನೀಡೋಣ ಎಂದು ರಾಜೂಗೌಡ ರೈತರಿಗೆ ಕೇಳಿದಾಗ, ರೈತರು ಇದು ಸಾಧ್ಯವಾಗದ ಮಾತು ಯಾವುದೇ ನಿರ್ಣಯ ತೆಗೆದುಕೊಂಡರೇ ಇವತ್ತೇ ಆಗಲಿ, ಅಲ್ಲಿಯವರೆಗೆ ನಾವು ಜಾಗ ಖಾಲಿ ಮಾಡುವುದಿಲ್ಲ, ಜಲಾಶಯಕ್ಕೆ ಮುತ್ತಿಗೆ ಹಾಕಿಯಾದರು ನೀರು ಪಡೆಯುತ್ತೇವೆ ಎಂದು ಏಕಾಏಕಿಯಾಗಿ ಮುಖ್ಯರಸ್ತೆಗೆ ಹಾಕಲಾಗಿದ್ದ ಬ್ಯಾರಿಕೇಡ್‌ ಕಿತ್ತೆಸೆದು ಜಲಾಶಯದತ್ತ ನುಗ್ಗತೊಡಗಿದರು. ಪೊಲೀಸರು ರೈತರನ್ನು ನಿಯಂತ್ರಿಸಲು ಹರಸಾಹಸಪಟ್ಟರಾದರೂ, ಉದ್ವಿಗ್ನತೆಯಿಂದ ಕೂಡಿದ್ದ ರೈತ ಸಮೂಹ ಬ್ಯಾರೀಕೇಡ್‌ಗಳನ್ನು ಕಿತ್ತೆಸೆದರು.

ರಾಜೂಗೌಡ ಸೇರಿದಂತೆ ಹಲವು ರೈತ ಮುಖಂಡರನ್ನು ಮತ್ತು ವಿವಿಧ ಸಂಘಟನೆಗಳ ಪಧಾಧಿಕಾರಿಗಳನ್ನು ಪೋಲಿಸರು ವಶಕ್ಕೆ ಪಡೆದುಕೊಂಡರು. ಇದೇ ವೇಳೆ, ಪ್ರತಿಭಟನಾಕಾರರ ಗುಂಪಿನಿಂದ ತುರಿಬಂದ ಕಲ್ಲೊಂದು ಪೊಲೀಸ್ ಸಿಬ್ಬಂದಿಯ ತಲೆಗೆ ಬಡಿದ ಘಟನೆ ಜರುಗಿತು.

---ಬಾಕ್ಸ್:2---

- ಗುರುವಾರ ಸಂಜೆಯವರೆಗೆ ನೀರು ಹರಿಸುವಂತೆ ಮನವಿ

ನಮ್ಮ ನಾಯಕನನ್ನು (ರಾಜೂಗೌಡ) ವಶಕ್ಕೆ ಪಡೆದಿದ್ದೇಕೆ ಎಂದು ಪ್ರಶ್ನಿಸಿ ರೈತರು, ಪೋಲಿಸ್ ವಾಹನ ಮುಂದೆ ಹೋಗದಂತೆ ಮಲಗಿಕೊಂಡರು. ನಂತರ ಎಲ್ಲ ರೈತ ಸಮುದಾಯವನ್ನು ಸಮಾಧಾನ ಪಡೆಸಿದ ರಾಜೂಗೌಡ ಗುರುವಾರ ಸಂಜೆಯವರೆಗೆ ನೀರು ಹರಿಸುವ ನಿರ್ಧಾರ ಕೈಗೊಳ್ಳುವಂತೆ ನಿಗಮದ ಅಧಿಕಾರಿಗಳಿಗೆ ಮನವಿ ಪತ್ರ ನೀಡೋಣ, ಒಂದು ವೇಳೆ, ನೀರು ಹರಿಸದೇ ಹೋದರೆ ಶುಕ್ರವಾರದಿಂದ ಮತ್ತೇ ಪ್ರತಿಭಟನೆ ನಡೆಸೋಣ, ನೀರು ಪಡೆದೇ ಹೋಗೋಣ. ಇಲ್ಲವಾದಲ್ಲಿ ಜೈಲಿಗೆ ಹೋಗೋಣ ಎಂದು ರೈತರನ್ನು ಸಮಾಧಾನ ಪಡೆಸಿ ಮುಖ್ಯ ಅಭಿಯಂತರರಿಗೆ ಮನವಿ ಪತ್ರ ಸಲ್ಲಿಸಿದರು.

---ಬಾಕ್ಸ್:3---

ರೈತರಿಗೆ ನೀರು ಮತ್ತು ಮೊಸರನ್ನ

ರೈತರಿಗಾಗಿ ಉಪಹಾರ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಹುಣಸಗಿಯ ತಿರುಮಲ ಆಗ್ರೋ ಕೇಂದ್ರದವರು ರೈತರಿಗೆ ನೀರು ಮತ್ತು ತಂಪಾದ ಮೊಸರನ್ನ ನೀಡಿದ್ದು ಎಲ್ಲರ ಗಮನ ಸೆಳೆಯಿತು. ಬಿಸಿಲಿನಿಂದ ಬಸವಳಿದಿದ್ದ ಜನರು ನೆರಳಿರುವ ಸ್ಥಳಗಳಲ್ಲಿ ಕುಳಿತುಕೊಂಡರೆ, ಇನ್ನೂ ಹಲವರು ಮರಗಿಡಗಳನ್ನು ಹತ್ತಿ ಕುಳಿತಿದ್ದು ಕಂಡುಬಂದಿತು. ಆರೋಗ್ಯ ಇಲಾಖೆಯಿಂದ ಪ್ರಥಮಾ ಚಿಕಿತ್ಸೆ ವ್ಯವಸ್ಥೆಯನ್ನು ಕಲ್ಪಿಸಿದ್ದರು.

----

ರಾಜಾ ಕುಶಾಲನಾಯಕ ಜಹಾಗೀರದಾರ, ರಾಜಾ ಹಣಮಪ್ಪನಾಯಕ ತಾತಾ, ಹನುಮಂತನಾಯಕ (ಬಬ್ಲೂಗೌಡ), ಚಂದ್ರಶೇಖರಗೌಡ ಮಾಗನೂರ, ಶಿವಣ್ಣ ಮಂಗೀಹಾಳ, ಗದ್ದೆಪ್ಪ ಪೂಜಾರಿ, ಯಲ್ಲಪ್ಪ ಕುರಕುಂದಿ, ಸಂಗಣ್ಣ ವೈಲಿ, ಮಹೇಶ ರೆಡ್ಡಿ ಮುದ್ನಾಳ, ಬಸವರಾಜ ಪಡುಕೋಟೆ, ಟಿ.ಎನ್. ಭೀಮುನಾಯಕ, ವೀರೇಶ ಚಿಂಚೋಳಿ, ನಂದಕುಮಾರ ಕನ್ನಳ್ಳಿ, ಶ್ರವಣಕುಮಾರ ನಾಯಕ, ಮೇಲಪ್ಪ ಗುಳಗಿ, ಮಲ್ಲನಗೌಡ ಹಗರಟಗಿ, ವೆಂಕಟೇಶ ಸಾಹುಕಾರ, ರಮೇಶ ಬಿರಾದಾರ, ಸೇರಿದಂತೆ ಸಾವಿರಾರು ರೈತರು ಇದ್ದರು. ಎಸ್ಪಿ ಪೃಥ್ವಿಕ್‌ ಶಂಕರ್‌ ನೇತೃತ್ವದಲ್ಲಿ, ಡಿವೈಎಸ್ಪಿ ಜಾವೀದ್‌ ಇನಾಮಾದಾರ್ ಸೇರಿದಂತೆ ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಿಂದ 600 ಕಕ್ಕೂ ಹೆಚ್ಚು ಜನ ಪೊಲೀಸ್ ಸಿಬ್ಬಂದಿಗಳು ಮತ್ತು ಕೆಎಸ್‌ಆರ್‌ಪಿ ತುಕಡಿಯಿಂದ ಬಂದೋಬಸ್ತ್ ನೀಡಲಾಗಿತ್ತು.

-

ಕೋಟ್ -1: ನಾನು ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ನಡೆಸುತ್ತಿಲ್ಲ. ಅಧಿಕಾರ ಇರಲಿ ಇರದೇ ಹೋಗಲಿ ನನಗೆ ರೈತರ ಹಿತ ಮುಖ್ಯ. ನಿಮ್ಮ ಬೆಂಬಲವೊಂದಿದ್ದರೆ ಸಾಕು ರಕ್ತ ಕೊಟ್ಟಾದರೂ ಕಾಲುವೆಗೆ ನೀರು ಹರಿಸುತ್ತೇನೆ.

-ರಾಜೂಗೌಡ, ಬಿಜೆಪಿ ರಾಜ್ಯ ಉಪಾಧ್ಯಕ್ಷ, ಸುರಪುರ. (26ವೈಡಿಆರ್‌12)

--------

26ವೈಡಿಆರ್‌13 : ಏ.15ರವರೆಗೆ ಕಾಲುವೆಗೆ ನೀರು ಹರಿಸಲು ನಾರಾಯಣಪುರದ ಮುಖ್ಯ ಎಂಜಿನೀಯರ್ ಕಚೇರಿಯ ಮುಂಭಾಗದಲ್ಲಿ ಆಗ್ರಹಿಸಿ ಬುಧವಾರ ಕರೆ ನೀಡಿದ್ದ ಪ್ರತಿಭಟನಾ ರ‍್ಯಾಲಿಯಲ್ಲಿ ಸಾವಿರಾರು ರೈತರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ನರಸಿಂಹ ನಾಯಕ್‌ (ರಾಜೂಗೌಡ) (ಚಿತ್ರ : ಮಂಜುನಾಥ್‌ ಎಸ್‌. ಬಿರಾದರ್‌, ಸಗರ)

-

26ವೈಡಿಆರ್‌14 : ಏ.15ರವರೆಗೆ ಕಾಲುವೆಗೆ ನೀರು ಹರಿಸಲು ನಾರಾಯಣಪುರದ ಮುಖ್ಯ ಎಂಜಿನೀಯರ್ ಕಚೇರಿಯ ಮುಂಭಾಗದಲ್ಲಿ ಆಗ್ರಹಿಸಿ, ಹುಣಸಗಿಯಿಂದ ನಾರಾಯಣಪುರದವರೆಗೆ ಬುಧವಾರ ಕರೆ ನೀಡಿದ್ದ ಪ್ರತಿಭಟನಾ ರ‍್ಯಾಲಿಯಲ್ಲಿ ಕಂಡುಬಂದ ಟ್ರ್ಯಾಕ್ಟರ್‌ಗಳಲ್ಲಿ ಸಾವಿರಾರು ರೈತರು. (ಚಿತ್ರ : ಮಂಜುನಾಥ್‌ ಎಸ್‌. ಬಿರಾದರ್‌, ಸಗರ)

-

26ವೈಡಿಆರ್‌14ಬಿ : ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಮಾಜಿ ಸಚಿವ ರಾಜೂಗೌಡ (ಚಿತ್ರ : ಮಂಜುನಾಥ್‌ ಎಸ್‌. ಬಿರಾದರ್‌, ಸಗರ)

-

26ವೈಡಿಆರ್15 : ಬ್ಯಾರಿಕೇಡ್‌ ಬೇಧಿಸಿ, ಜಲಾಶಯದತ್ತ ನುಗ್ಗಲೆತ್ನಿಸಿದ ಪ್ರತಿಭಟನಾ ನಿರತ ರೈತರನ್ನು ನಿಯಂತ್ರಿಸಲು ಹರಸಾಹಸ ಪಟ್ಟ ಪೊಲೀಸರು. (ಚಿತ್ರ : ಮಂಜುನಾಥ್‌ ಎಸ್‌. ಬಿರಾದರ್‌, ಸಗರ)

------

ನೀರು ಪಡೆಯೋಣ, ಇಲ್ಲವೇ ಜೈಲಿಗೆ ಹೋಗೋಣ: ರಾಜೂಗೌಡ । ಬಸವಸಾಗರ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲು ಆಗ್ರಹ

---

ಇದಕ್ಕೂ ಮುಂಚೆ, ತಾಲೂಕು ಕೇಂದ್ರವಾದ ಹುಣಸಗಿಯ ಮಹಾಂತಸ್ವಾಮಿ ವೃತ್ತದಿಂದ ಆರಂಭವಾದ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಅಂದಾಜು 350ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಲ್ಲಿ 5 ರಿಂದ 6 ಸಾವಿರ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಹುಣಸಗಿ ಮಾರ್ಗವಾಗಿ, ಕಾಮನಟಗಿ, ಬಲಶೆಟ್ಟಿಹಾಳ, ರಾಜನಕೋಳೂರು, ಕೊಡೇಕಲ್ ಮೂಲಕ ರ‍್ಯಾಲಿ ನಾರಾಯಣಪುರ ತಲುಪಿತು. ಎತ್ತ ನೋಡಿದರತ್ತ ಹಸಿರು ರುಮಾಲುಗಳೇ ಕಾಣಿಸುತ್ತಿದ್ದವು.

----