ಸಾರಾಂಶ
ಬೆಂಗಳೂರು : ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ತಿರುಪತಿಯೂ ಸೇರಿ ಆಂಧ್ರಪ್ರದೇಶ, ತಮಿಳುನಾಡಿನ ದೇವಾಲಯಗಳಿಗೆ ಕುಟುಂಬದೊಂದಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ವೆಲ್ಲೂರಿನಲ್ಲಿರುವ ಶ್ರೀಪುರಂ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ ಅವರು, ಶ್ರೀ ನಾರಾಯಣಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ನಾರಾಯಣಿ ಪೀಠದ ಸಂಸ್ಥಾಪಕರು ಮತ್ತು ಪೀಠಾಧಿಪತಿ ಶ್ರೀ ಶಕ್ತಿ ಅಮ್ಮನವರ ಭೇಟಿ ಮಾಡಿದರು. ಈ ವೇಳೆ ಶ್ರೀ ಶಕ್ತಿ ಅಮ್ಮ ಅವರು ರಾಜ್ಯಪಾಲರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶ್ರೀಪುರಂ ನಿರ್ದೇಶಕ ಮತ್ತು ಟ್ರಸ್ಟಿ ಸುರೇಶ್ ಬಾಬು, ಶ್ರೀ ನಾರಾಯಣಿ ಪೀಠದ ಟ್ರಸ್ಟೀ ಸೌಂದರರಾಜನ್, ಮ್ಯಾನೇಜರ್ ಸಂಪತ್, ಭಾಸ್ಕರ್ ಸೇರಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಶ್ರೀ ಪದ್ಮಾವತಿ ಅಮ್ಮನವರ ದರ್ಶನ:
ರಾಜ್ಯಪಾಲರು ತಮ್ಮ ಕುಟುಂಬ ಸದಸ್ಯರೊಂದಿಗೆ ತಿರುಪತಿಯ ತಿರುಚನೂರಿನಲ್ಲಿರುವ ಪದ್ಮಾವತಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ, ಆಶೀರ್ವಾದ ಪಡೆದರು.
ರಾಜ್ಯಪಾಲರು ಮತ್ತು ಅವರ ಕುಟುಂಬವನ್ನು ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಅಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು. ದೇವಾಲಯದ ಅರ್ಚಕರು ಸಾಂಪ್ರದಾಯಿಕ ಆಚರಣೆಗಳನ್ನು ನೆರವೇರಿಸಿ, ಶಿಷ್ಟಾಚಾರದ ಪ್ರಕಾರ ಪ್ರಸಾದ ಅರ್ಪಿಸಿದರು.