ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡು ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎಂಟನೇ ವರ್ಷದ ಗೌಡ ಫುಟ್ಬಾಲ್ ಪಂದ್ಯಾವಳಿಗೆ ಅದ್ಧೂರಿ ಚಾಲನೆ ನೀಡಲಾಯಿತು.ಗಣಪತಿ ಹೋಮದೊಂದಿಗೆ ಪಂದ್ಯಾವಳಿಯನ್ನು ಉದ್ಘಾಟಿಸಲಾಗಿದ್ದು, ಗೌಡ ಫುಟ್ಬಾಲ್ ಅಕಾಡೆಮಿ ಅಧ್ಯಕ್ಷ ಬಡುವಂಡ್ರ ಸುಜಯ್ ಅವರು ತೆಂಗಿನಕಾಯಿ ಗುಂಡು ಹೊಡೆಯುವುದರ ಮುಖಾಂತರ ಪಂದ್ಯಾಟಕ್ಕೆ ಚಾಲನೆ ನೀಡಿದರು.ದಿನದ ಮೊದಲ ಪಂದ್ಯಾಟ ಪರಿಚನ ಹಾಗೂ ಕೇನೇರ ತಂಡಗಳ ನಡುವೆ ನಡೆಯಿತು. 5-0 ಗೋಲುಗಳಿಂದ ಪರಿಚನ ಜಯಗಳಿಸಿತು. ಬೈಲೋಳಿ ಮತ್ತು ಬೊಳ್ತಜ್ಜಿರ ತಂಡ ನಡುವೆ ನಡೆದ ಪಂದ್ಯದಲ್ಲಿ ಬೊಳ್ತಜ್ಜಿರ ತಂಡ ಜಯಗಳಿಸಿತ್ತು. ಅಯ್ಯಂಡ್ರ ಹಾಗೂ ಕಡಿಯತುರು ಮುಕ್ಕಾಟಿ ತಂಡಗಳ ನಡುವಿನ ಪಂದ್ಯದಲ್ಲಿ ಅಯ್ಯಂಡ್ರ ತಂಡ ಜಯಗೊಳಿಸಿತು.ಚಿಯಪ್ಪನ ಹಾಗೂ ಬಿದ್ರುಪನೆ ನಡುವಿನ ಪಂದ್ಯದಲ್ಲಿ ಬಿದ್ರುಪಣೆ ತಂಡ ಜಯಗಳಿಸಿತು. ಚೋಂಡಿರ ಹಾಗೂ ಚಂಡಿರ ನಡುವಿನ ಪಂದ್ಯದಲ್ಲಿ ಚಂಡಿರ ತಂಡ ಜಯಗಳಿಸಿತು. ತೆಕ್ಕಡೆ ಹಾಗೂ ಮುಕ್ಕಾಟಿ(ಬಿ) ಮರಗೋಡು ತಂಡದ ನಡುವಿನ ಪಂದ್ಯದಲ್ಲಿ ಮುಕ್ಕಾಟಿ(ಬಿ) ತಂಡ ಜಯಗಳಿಸಿತು.ಪರಿಚನ ಹಾಗೂ ಮುಕ್ಕಾಟಿ(ಎ) ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿ(ಎ) ತಂಡ ಜಯಗಳಿಸಿತು. ಅಯ್ಯಂಡ್ರ ಹಾಗೂ ಬಿದ್ರೂಪಣೆ ನಡುವಿನ ಪಂದ್ಯದಲ್ಲಿ ಅಯ್ಯಂಡ್ರ ತಂಡ ಜಯಶಾಲಿಯಾಯಿತು. ಚಂಡಿರಾ ಹಾಗೂ ತೋಟಂಬೈಲು ನಡುವಿನ ಪಂದ್ಯದಲ್ಲಿ ಚಂಡಿರಾ ತಂಡ ಗೆದ್ದು ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು. ಮುಕ್ಕಾಟಿ(ಎ) ಹಾಗೂ ತುಂತಾಜಿರ ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿ(ಎ)ತಂಡ ಜಯಶಾಲಿಯಾಗಿ ಮುಂದಿನ ಹಂತ ಪ್ರವೇಶ ಪಡೆಯಿತು. ಮುಕ್ಕಾಟಿ(ಎ), ಮುಕ್ಕಾಟಿ(ಬಿ), ಅಯ್ಯಂಡ್ರ ಹಾಗೂ ಚಂಡಿರಾ ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.