ಜಿಪಿಎಲ್ ಸೀಸನ್ 2: ದಿ ಎಲೈಟ್ ಕ್ರಿಕೆಟ್ ಸ್ಕ್ವಾಡ್-2 ವಿನ್ನರ್ಸ್‌

| Published : Apr 29 2024, 01:30 AM IST

ಜಿಪಿಎಲ್ ಸೀಸನ್ 2: ದಿ ಎಲೈಟ್ ಕ್ರಿಕೆಟ್ ಸ್ಕ್ವಾಡ್-2 ವಿನ್ನರ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಜಿಪಿಎಲ್‌ ಸೀಸನ್‌ 2 ಲೆದರ್‌ ಬಾಲ್‌ ಪಂದ್ಯಾವಳಿಯಲ್ಲಿ ಪ್ರೀಮಿಯರ್‌ ಲೀಗ್‌ ಭಾನುವಾರ ನಡೆದ ಪಂದ್ಯದಲ್ಲಿ ದಿ ಎಲೈಟ್‌ ಕ್ರಿಕೆಟ್ ಸ್ಕ್ವಾಡ್‌ - 2 ಚಾಂಪಿಯನ್‌ ಪಟ್ಟ ಅಲಂಕರಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಗೌಡ ಯುವ ವೇದಿಕೆಯಿಂದ ನಗರದ ಜನರಲ್ ತಿಮ್ಮಯ್ಯ ಮೈನಾದಲ್ಲಿ ಕಳೆದ ಹಲವು ದಿನಗಳಿಂದ ನಡೆದ ಜಿಪಿಎಲ್ ಸೀಸನ್ 2 ಲೆದರ್ ಬಾಲ್ ಪ್ರೀಮಿಯರ್ ಲೀಗ್ ಭಾನುವಾರ ನಡೆದ ಪಂದ್ಯದಲ್ಲಿ ದಿ ಎಲೈಟ್ ಕ್ರಿಕೆಟ್ ಸ್ಕ್ವಾಡ್-2 ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಫೈನಲ್ ಪಂದ್ಯಾಟದಲ್ಲಿ ದಿ ಎಲೈಟ್ ತಂಡದ ವಿರುದ್ಧ ದಿ ಎಲೈಟ್ ಕ್ರಿಕೆಟ್ ಸ್ಕ್ವಾಡ್-2 ತಂಡ 10 ರನ್ ಗಳ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸ್ಕ್ವಾಡ್- 2 ತಂಡ ನಿಗದಿತ 10 ಓವರ್‌ಗಳಲ್ಲಿ 83 ರನ್ ಗಳಿಸಿತು. ತಂಡದ ಪರ ಮನ್ವಿತ್ ಕಲ್ಲುಗದ್ದೆ 8 ಎಸೆತಗಳಲ್ಲಿ 19 ರನ್ ಗಳಿಸಿದರು. ಆಕರ್ಷ್ 18 ರನ್ ಗಳಿಸಿದರು. ಎಲೈಟ್ ತಂಡದ ಪರ ಧಿನೇಂದ್ರ ಅಣ್ಣಚಿರ ಮತ್ತು ಕಾರ್ತಿಕ್ ತಲಾ ಎರಡು ವಿಕೆಟ್ ಪಡೆದರು. ಲೋಕೇಶ್ , ನಿತಿನ್ ಮತ್ತು ಶರತ್ ಚೊಕ್ಕಾಡಿ ತಲಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ಎಲೈಟ್ ತಂಡ ನಿಗದಿತ 10 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿ 10 ರನ್ ಗಳಿಂದ ಸೋಲು ಕಂಡಿತು. ತಂಡದ ಪರ ಹೊಸೂರ್ ಹಿತಕೃತ್ ಅಶೋಕ್ ಅತ್ಯಧಿಕ 25 ರನ್ ಗಳಿಸಿದರು. ಸ್ಕ್ವಾಡ್- 2 ತಂಡದ ಪರ ಮನ್ವಿತ್ ಕಲ್ಲುಗದ್ದೆ ಮತ್ತು ನಯನ್ ಚೆರಿಯಮನೆ ತಲಾ ಎರಡು ವಿಕೆಟ್ ಹಾಗೂ ಎಡಿಕೇರಿ ನೂತನ್ ಒಂದು ವಿಕೆಟ್ ಪಡೆದು ಗೆಲವಿನ ರೂವಾರಿಯಾದರು.

ಒಂದೇ ಫ್ರಾಂಚೈಸಿಯ ಎರಡೂ ತಂಡಗಳು ಫೈನಲ್ ಪ್ರವೇಶಿಸಿ ಗಮನ ಸೆಳೆದವು. ಗೌಡ ಪ್ರೀಮಿಯರ್ ಲೀಗ್‌ ನಲ್ಲಿ ಎಲೈಟ್ ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಮೂಡಿಬಂದಿತು.

ಎಲಿಮಿನೇಟರ್ ಪಂದ್ಯಾಟದಲ್ಲಿ ಎಲೈಟ್ ಕ್ರಿಕೆಟ್ ಕ್ಲಬ್ ತಂಡ ಕೂರ್ಗ್ ವಾರಿಯರ್ಸ್ ತಂಡವನ್ನು 7 ವಿಕೆಟ್ ಗಳ ಜಯ ಗಳಸಿತು. ಇದರೊಂದಿಗೆ ಜಿಪಿಎಲ್ ಸೀಸನ್-2 ನ ಎರಡನೇ ತಂಡವಾಗಿ ಫೈನಲ್ ಪ್ರವೇಶಿಸಿತು‌.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೂರ್ಗ್ ವಾರಿಯರ್ಸ್ ತಂಡ ನಿಗದಿತ 10 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿತು‌. ತಂಡದ ಪರ ಅನಿಲ್ ಕುಡೇಕಲ್ಲು 29 ಎಸೆತಗಳಲ್ಲಿ 66 ರನ್ ಗಳಿಸಿದರು. 4 ಬೌಂಡರಿ 6 ಸಿಕ್ಸರ್ ಗಳು ಇವರ ಇನ್ನಿಂಗ್ಸ್‌ನಲ್ಲಿ ಮೂಡಿಬಂದವು. ಎಲೈಟ್ ತಂಡ ಪರ ಕಾರ್ತಿಕ್, ಶರತ್ ಚೊಕ್ಕಾಡಿ, ಧಿನೇಂದ್ರ ಅಣ್ಣಚಿರ, ನಿತಿನ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು‌.

ಗುರಿ ಬೆನ್ನಟ್ಟಿದ ಎಲೈಟ್ ತಂಡ 9 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ತಂಡದ ಪರ ಲೋಕೇಶ್ 28 ಎಸೆತಗಳಲ್ಲಿ ಅಜೇಯ 67 ರನ್ ಗಳಿಸಿ ತಂಡದ ಗೆಲುವಿನ ರುವಾರಿಯಾದರು‌. ಇವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ಮೂಡಿಬಂದವು. ಕೂರ್ಗ್ ವಾರಿಯರ್ಸ್ ಪರ ಅನಿಲ್ ಕುಡೇಕಲ್ಲು ಮತ್ತು ಕುಜಲ್ ಕಾರ್ಯಪ್ಪ ತಲಾ ಒಂದು ವಿಕೆಟ್ ಪಡೆದರು‌. ಇದರೊಂದಿಗೆ ಎಲೈಟ್ ತಂಡ ಫೈನಲ್ ಪ್ರವೇಶ ಪಡೆದಿತ್ತು.

ಮ್ಯಾನ್ ಆಫ್ ದಿ ಸೀರೀಸ್ - ರಾಹುಲ್ ಅತ್ರಮಜಲು (ದಿ ಎಲೈಟ್ ಸ್ಕ್ವಾಡ್-2), ಬೆಸ್ಟ್ ಬ್ಯಾಟ್ಸಮನ್ - ಅನಿಲ್ ಕುಡೆಕಲ್ (ಕೂರ್ಗ್ ವಾರಿಯರ್ಸ್), ಬೆಸ್ಟ್ ಬೌಲರ್ - ತುಷಾರ್ ಮೂವನ (ದಿ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ), ಬೆಸ್ಟ್ ವಿಕೆಟ್ ಕೀಪರ್ - ಜಶ್ವಂತ್ ಗುತ್ತಿಮುಂಡನ (ದಿ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ), ಬೆಸ್ಟ್ ಎಮೆರ್ಜಿಂಗ್ ಪ್ಲೇಯರ್ - ಎಡಿಕೇರಿ ಗಣಿತ್ (ದಿ ಎಲೈಟ್ ಕ್ರಿಕೆಟ್ ಕ್ಲಬ್)