ಗ್ರಾಪಂ ಯೋಜನೆಗಳ ಪ್ರಗತಿಯಲ್ಲಿ ಕುಂಠಿತವಾಗದಿರಲಿ

| Published : Sep 08 2025, 01:01 AM IST

ಸಾರಾಂಶ

ಗ್ರಾಪಂ ವಿವಿಧ ಯೋಜನೆಗಳ ಅಭಿವೃದ್ಧಿ ಹಾಗೂ ಪ್ರಗತಿಯಲ್ಲಿ ಕುಂಠಿತವಾಗದಂತೆ ಜಾಗೃತಿ ವಹಿಸಬೇಕು

ಶಿರಸಿ: ಗ್ರಾಪಂ ವಿವಿಧ ಯೋಜನೆಗಳ ಅಭಿವೃದ್ಧಿ ಹಾಗೂ ಪ್ರಗತಿಯಲ್ಲಿ ಕುಂಠಿತವಾಗದಂತೆ ಜಾಗೃತಿ ವಹಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚನ್ನಬಸಪ್ಪ ಹಾವಣಗಿ ಸೂಚಿಸಿದರು.

ತಾಲೂಕಿನ ಅಬ್ದುಲ್ ನಜೀರಸಾಬ್ ಸಭಾಂಗಣದಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಮಾನವ ದಿನಗಳ ಸೃಜನೆ, ಕಾಮಗಾರಿ ಮುಕ್ತಾಯ, ಎಟಿಆರ್‌ ಕಂಡಿಕೆ, ಸಾಮಾಜಿಕ ಲೆಕ್ಕ ಪರಿಶೋಧನೆ, ವಿಷಯಗಳಲ್ಲಿ ಪ್ರಗತಿ ಕುಂಠಿತವಾಗದಂತೆ ಅಭಿವೃದ್ಧಿ ಸಾಧಿಸಬೇಕು. ತೆರಿಗೆ ಸಂಗ್ರಹಣೆ, ಗ್ರಂಥಾಲಯ, ನಲ್ ಜಲ್ ಮಿತ್ರ ಅನುದಾನದ ಭರಣ, 15ನೇ ಹಣಕಾಸಿನ ಖರ್ಚು- ವೆಚ್ಚದ ಬಾಕಿ ಅನುದಾನದ ಖರ್ಚಿನ ಕುರಿತು ತೆಗೆದುಕೊಂಡ ಕ್ರಮಗಳು, ಹೆಸ್ಕಾಂ ಬಿಲ್ ಪಾವತಿ, ಇ-ಹಾಜರಾತಿ, ಜಲ ಜೀವನ ಮಿಷನ್, ವಸತಿ ಯೋಜನೆಯ ಪ್ರಗತಿಯಲ್ಲಿ ಸಾಧನೆಗೆ ತೆಗೆದುಕೊಂಡ ಕ್ರಮಗಳು, ಎಸ್‌ಇಪಿ, ಟಿಎಸ್‌ಪಿ ಅನುದಾನ ಹಾಗೂ ಜಿಪಿಡಿಪಿ ಪ್ರಗತಿ ವಿಷಯಗಳ ಕುರಿತು ಪ್ರಗತಿ ಸಾಧಿಸಲು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಬಾಕಿ ಇರುವ ಐಇಸಿ ಚಟುವಟಿಕೆಗಳನ್ನು ಪೂರ್ಣಗೊಳಿಸಬೇಕು. ಎಸ್‌ಬಿಎಂ ಯೋಜನೆಯ ಸದುಪಯೋಗ ಪ್ರತಿ ಗ್ರಾಪಂ ಪಡೆಯಬೇಕು. ವೈಯಕ್ತಿಕ ಗೃಹ ಶೌಚಾಲಯಗಳ ಆರ್ಥಿಕ ಪ್ರಗತಿ ಹಾಗೂ ಜಿಯೋಟ್ಯಾಗ್, ಘನತ್ಯಾಜ್ಯ ಘಟಕಗಳ ನಿರ್ವಹಣೆ ಹಾಗೂ ಪ್ರಗತಿ, ಗ್ರಾಪಂಗಳ ಒಡಿಎಫ್‌ ಪ್ಲಸ್‌ನಲ್ಲಿ ಪ್ರಗತಿ ಸಾಧಿಸಬೇಕು ಎಂದರು.

ತಾಪಂ ಸಹಾಯಕ ಲೆಕ್ಕಧಿಕಾರಿ ಸೀತಾರಾಮ ನಾಯ್ಕ, ತಾಲೂಕು ಯೋಜನಾಧಿಕಾರಿ ಅಶೋಕ ನಾಯ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ಇದ್ದರು.