ಸಾರಾಂಶ
ಸಿಂಧನೂರು ತಾಲೂಕಿನ ಸಾಸಲಮರಿ ಕ್ಯಾಂಪಿನಲ್ಲಿ ಸೀತಾರಾಮ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಶುಕ್ರವಾರ ಕುಂಭ-ಕಳಸದೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು
ಕನ್ನಡಪ್ರಭ ವಾರ್ತೆ ಸಿಂಧನೂರು
ತಾಲೂಕಿನ ಸಾಸಲಮರಿ ಕ್ಯಾಂಪಿನಲ್ಲಿ ಸೀತಾರಾಮ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಶುಕ್ರವಾರ ಕುಂಭ-ಕಳಸದೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು.ಬೆಳಗ್ಗೆ ದೇವಸ್ಥಾನದಲ್ಲಿ ರಮಣಬಾಬು ಸಿದ್ದಾಂತಿ ಅವರ ನೇತೃತ್ವದಲ್ಲಿ ಸೀತಾರಾಮ ಮೂರ್ತಿಗೆ ಅಭಿಷೇಕ, ಅಲಂಕಾರ, ವಿಶೇಷ ಪೂಜೆ ನಡೆದವು. ನಂತರ 501 ಕುಂಭ-ಕಳಸದೊಂದಿಗೆ ವಿವಿಧ ಭಾಜಾ ಭಜಂತ್ರಿಗಳೊಂದಿಗೆ ಮಹಿಳೆಯರು, ಪುರುಷರು, ಯುವಕ-ಯುವತಿಯರು, ಮಕ್ಕಳು ಅದ್ಧೂರಿ ಮೆರವಣಿಗೆಯೊಂದಿಗೆ ಗಂಗೆ ಸ್ಥಳಕ್ಕೆ ಹೋಗಿ ಪೂಜೆ ಸಲ್ಲಿಸಿ ಪುನಃ ದೇವಸ್ಥಾನಕ್ಕೆ ಬಂದರು. ನಂತರ ಹೋವ-ಹವನ ಕಾರ್ಯಕ್ರಮ ಜರುಗಿತು. ಯುವತಿಯರು ಕೋಲಾಟ ಆಡುವ ಮೂಲಕ ನೋಡುಗರ ಗಮನ ಸೆಳೆದರು. ದೇವಸ್ಥಾನದೊಳಗೆ ಆಕಳನ್ನು ಬಿಟ್ಟು ಗೋಪೂಜೆ ಮಾಡಿದರು.
ಈ ಸಂದರ್ಭದಲ್ಲಿ ಎಂ.ಅಮರೇಗೌಡ ವಕೀಲರು, ಲಿಂಗರಾಜ ಪೊಲೀಸ್ ಪಾಟೀಲ್, ಮುಖಂಡ ಉಪ್ಪಲಪಾಡಿ ದುರ್ಗಾಪ್ರಸಾದ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀರಾಮ ಸೇವಾ ಪ್ರತಿಷ್ಠಾನ ಸಮಿತಿ ಅಧ್ಯಕ್ಷ ನಲ್ಲ ವೆಂಕಟರಾವ್, ಬುರಗಪಲ್ಲಿ ಮುರಳಿಕೃಷ್ಣ, ಗನ್ನಿನ ಸುಬ್ಬಾರಾವ್, ಇಡುಪುಗಂಟಿ ಸತೀಶ್, ಕೊಡೂರಿ ರಾಮಬಾಬು, ನಲ್ಲ ಅಮನ್ರಾಜು, ವಂಕ ಸತ್ಯನಾರಾಯಣ, ಸಿಂಹಾದ್ರಿ ವೆಂಕಟೇಶ್ವರಾವ್, ಬೊಡ್ಡು ಗಂಗಾಧರ್, ಪುಟ್ಟ ಮುರಳಿಕೃಷ್ಣ, ಸೋಮುಪಾಟಿ ವಿನಯ ಭಾಸ್ಕರ್ರಾವ್, ಬಲುಸು ಪ್ರತಾಪ ಸೇರಿದಂತೆ ಗ್ರಾಮಸ್ಥರು, ಮಹಿಳೆಯರು ಇದ್ದರು.