ದಾಂಡೇಲಿಯಲ್ಲಿ ಅದ್ಧೂರಿ ರಾಮಲೀಲೋತ್ಸವ

| Published : Oct 04 2025, 12:00 AM IST

ದಾಂಡೇಲಿಯಲ್ಲಿ ಅದ್ಧೂರಿ ರಾಮಲೀಲೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ದಾಂಡೇಲಿ ನಗರದ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯವರ ಆಶ್ರಯದಡಿ ಕಾರ್ಖಾನೆಯ ಡಿಲಕ್ಸ್ ಮೈದಾನದಲ್ಲಿ ನಡೆದ ರಾಮಲೀಲೋತ್ಸವ ಕಾರ್ಯಕ್ರಮ ಗುರುವಾರ ಯಶಸ್ವಿಯಾಗಿ ನಡೆಯಿತು.

ದಾಂಡೇಲಿ: ನಗರದ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯವರ ಆಶ್ರಯದಡಿ ಕಾರ್ಖಾನೆಯ ಡಿಲಕ್ಸ್ ಮೈದಾನದಲ್ಲಿ ನಡೆದ ರಾಮಲೀಲೋತ್ಸವ ಕಾರ್ಯಕ್ರಮ ಗುರುವಾರ ಯಶಸ್ವಿಯಾಗಿ ನಡೆಯಿತು.

ಈ ಕಾರ್ಯಕ್ರಮ ಜಾತಿ, ಮತ, ಧರ್ಮ ಭೇದವಿಲ್ಲದೆ ಎಲ್ಲರೂ ಭಾಗವಹಿಸುವುದು ವಿಶೇಷ. ಗುರುವಾರ ಸಂಜೆ ೭ ಗಂಟೆ ಸುಮಾರಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ೫೦ ಅಡಿ ಎತ್ತರದ ರಾವಣ ಮೂರ್ತಿ, ೪೮ ಅಡಿ ಎತ್ತರದ ಕುಂಭಕರ್ಣ ಮತ್ತು ಮೇಘನಾದನ ಮೂರ್ತಿಗಳನ್ನು ಸಹಸ್ರಾರು ಸಂಖ್ಯೆಯ ಜನರ ಉಪಸ್ಥಿತಿಯಲ್ಲಿ ಸುಡಲಾಯಿತು. ಈ ಮೂರ್ತಿಗಳಿಗೆ ಅಗ್ನಿಸ್ಪರ್ಶ ಮಾಡುವ ಮೊದಲು ಕಾರ್ಖಾನೆಯವರು ಸುಡುಮದ್ದು ಸಿಡಿಸುವ ಕಾರ್ಯಕ್ರಮ ಆಯೋಜಿಸಿದ್ದರು. ಬಾನಂಗಳದಲ್ಲಿ ರಂಗುರಂಗಿನ ಚಿತ್ತಾರ, ಚಟಪಟ ಸದ್ದು ಜನರನ್ನು ಆಕರ್ಷಿಸಿತು. ರಾವಣ, ಕುಂಭಕರ್ಣ ಮತ್ತು ಮೇಘನಾದನ ಪ್ರತಿಕೃತಿ ಸುಡುವ ಕಾರ್ಯಕ್ರಮ ನೋಡಲು ನಗರದ ಜನ ಮಾತ್ರವಲ್ಲದೇ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದಲೂ ಅಧಿಕ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.

ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ, ಕಾಗದ ಕಾರ್ಖಾನೆಯ ತಾಂತ್ರಿಕ ವಿಭಾಗದ ಹಿರಿಯ ಉಪಾಧ್ಯಕ್ಷ ಅನುಪ ದಯಾಳ, ದಾಂಡೇಲಿ ತಹಸೀಲ್ದಾರ್‌ ಶೈಲೇಶ ಪರಮಾನಂದ, ದಾಂಡೇಲಿ ನಗರ ಸಭೆಯ ಅಧ್ಯಕ್ಷ ಅಷ್ಪಾಕ್‌ ಶೇಖ, ಡಿವೈಎಸ್‌ಪಿ ಶಿವಾನಂದ ಮದರಖಂಡಿ, ಸಿಪಿಐ ಜಯಪಾಲ ಪಾಟೀಲ, ಕಾರ್ಖಾನೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ಸ್ವಾಗತಿಸಿದರು. ರಾಘವೇಂದ್ರ ಜೆ.ಆರ್. ವಂದಿಸಿದರು.