ಸಾರಾಂಶ
ಮಂಡ್ಯದಲ್ಲಿ ಜರಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ನಾಡು, ನುಡಿ ಹಾಗೂ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿನ ವೈಶಿಷ್ಟ್ಯ ರಾಜ್ಯಾದ್ಯಂತ ಜನತೆಗೆ ತಿಳಿಸುವ ಉದ್ದೇಶ
ಮುಂಡರಗಿ: ಮಂಡ್ಯದಲ್ಲಿ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ರಥಯಾತ್ರೆ ಶನಿವಾರ ಮುಂಡರಗಿ ಆಗಮಿಸಿತು.
ಕನ್ನಡ ರಥವನ್ನು ತಾಲೂಕಾಡಳಿತದ ವತಿಯಿಂದ ತಹಸೀಲ್ದಾರ್, ಪುರಸಭೆ ಆಡಳಿತ ಮಂಡಳಿ ವತಿಯಿಂದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಅದ್ಧೂರಿಯಾಗಿ ಸ್ವಾಗತಿಸಿ ಬರ ಮಾಡಿಕೊಂಡರು.ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಮಾರ್ಗವಾಗಿ ಮುಂಡರಗಿ ತಾಲೂಕಿನ ಬಾಗೇವಾಡಿ ಮೂಲಕ ಮುಂಡರಗಿ ಪಟ್ಟಣಕ್ಕೆ ಆಗಮಿಸಿ ಪಟ್ಟಣದ ಮುಂಡರಗಿ ಶಿರಹಟ್ಟಿ ರಸ್ತೆಯಲ್ಲಿರುವ ಗಣೇಶ ದೇವಸ್ಥಾನದ ಹತ್ತಿರಕ್ಕೆ ಕನ್ನಡ ರಥಯಾತ್ರೆ ಆಗಮಿಸುತ್ತಿದ್ದಂತೆ ಕನ್ನಡಾಭಿಮಾನಿಗಳು, ಸಾಹಿತಿಗಳು, ಚಿಂತಕರು, ಕನ್ನಡಪರ ಘೋಷಣೆ ಕೂಗುತ್ತ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಮಂಡ್ಯದಲ್ಲಿ ಜರಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ನಾಡು, ನುಡಿ ಹಾಗೂ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿನ ವೈಶಿಷ್ಟ್ಯ ರಾಜ್ಯಾದ್ಯಂತ ಜನತೆಗೆ ತಿಳಿಸುವ ಉದ್ದೇಶದಿಂದ ಈ ಕನ್ನಡ ರಥಯಾತ್ರೆ ನಾಡಿನಾದ್ಯಂತ ಹೊರಟಿದ್ದು, ಆಯಾ ಜಿಲ್ಲೆಗಳಲ್ಲಿ ಹಾಗೂ ತಾಲೂಕುಗಳಲ್ಲಿ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗುತ್ತಿದೆ. ಇದು ಮುಂಡರಗಿ ಪಟ್ಟಣಕ್ಕೆ ಆಗಮಿಸಿದ್ದು ಸಂತಸವನ್ನುಂಟು ಮಾಡಿದೆ ಎಂದರು.ತಹಸೀಲ್ದಾರ್ ಎರ್ರಿಸ್ವಾಮಿ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಸಂಚರಿಸುತ್ತಿರುವ ಈ ಕನ್ನಡ ರಥೋತ್ಸವಕ್ಕೆ ಎಲ್ಲ ಇಲಾಖೆಗಳು ಹಾಗೂ ಕನ್ನಡಪರ ಸಂಘಟನೆಗಳೂ ಸೇರಿದಂತೆ ಎಲ್ಲ ಸಂಘಟನೆಗಳು ಕೈ ಜೋಡಿಸಿ ಅದ್ಧೂರಿಯಿಂದ ಬರಮಾಡಿಕೊಳ್ಳಲಾಯಿತು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ನಿರ್ಮಲಾ ಕೊರ್ಲಹಳ್ಳಿ, ಧಾರವಾಡ ಕೆಎಂಎಫ್ ನಿರ್ದೇಶಕ ಲಿಂಗರಾಜಗೌಡ ಪಾಟೀಲ, ಕವಿತಾ ಉಳ್ಳಾಗಡ್ಡಿ, ರಾಜಾಭಕ್ಷಿ ಬೆಟಗೇರಿ, ತಾಪಂ ಇಒ ವಿಶ್ವನಾಥ ಹೊಸಮನಿ, ಎಚ್.ಎಂ. ಪಢ್ನೇಶಿ, ಅರುಣಾ ಸೋರಗಾವಿ, ಶಂಕರ ಹುಲ್ಲಮ್ಮನವರ, ಸವಿತಾ ಸಾಸ್ವಿಹಳ್ಳಿ, ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ, ಶಂಕರ ಕುಕನೂರು, ಡಾ. ಡಿ.ಸಿ.ಮಠ, ಶಂಬುಲಿಂಗ ಚಿಗರಿ, ವೀಣಾ ಪಾಟೀಲ, ಮಂಜುನಾಥ ಮುಧೋಳ, ದೇವು ಹಡಪದ, ಸಿ.ಕೆ. ಗಣಪ್ಪನವರ, ಬಸವರಾಜ ರಾಮೇನಹಳ್ಳಿ, ರಾಮು ಭಜಂತ್ರಿ, ಲಿಂಗರಾಜ ಡಾವಣಗೇರಿ, ಆರ್.ವೈ.ಪಾಟೀಲ, ಕಾವೇರಿ ಬೋಲಾ, ಎಸ್.ಎಸ್. ಬಿಚ್ಚಾಲಿ, ಶಿವಾನಂದ ಇಟಗಿ, ಅಕ್ಕಮಹಾದೇವಿ ಕೊಟ್ಟೂರಶೆಟ್ಟರ್, ಬಸವರಾಜ ನವಲಗುಂದ, ರವಿ ಕುಂಬಾರ, ಮಲ್ಲಿಕಾರ್ಜುನ ಮ್ಯಾಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.