ಸಾರಾಂಶ
-ವಿದ್ಯಾ ವಿಕಾಸ ಸಂಸ್ಥೆಯಲ್ಲಿ ಕಿಡ್ಡಿ ಫೀಟ್ ವಿಭಾಗದಿಂದ ಆಯೋಜಿಸಿದ್ದ ಅಜ್ಜಿ-ತಾತಂದಿರ ದಿನಾಚರಣೆ
------ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಮಕ್ಕಳಿಗೆ ಅಜ್ಜಿ, ತಾತಂದಿರೆ ಬೆಸ್ಟ್ ಫ್ರೆಂಡ್. ಇಂತಹ ಸ್ನೇಹಿತರು ಎಲ್ಲರಿಗೂ ಸಿಗುವುದಿಲ್ಲವೆಂದು ವಿದ್ಯಾ ವಿಕಾಸ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ವಿಜಯಕುಮಾರ್ ಅಭಿಪ್ರಾಯಪಟ್ಟರು.ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ಕಿಡ್ಡಿ ಫೀಟ್ ವಿಭಾಗದಿಂದ ಆಯೋಜಿಸಿದ್ದ ಅಜ್ಜಿ-ತಾತಂದಿರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಅನಾದಿ ಕಾಲದಿಂದಲೂ ಮನೆಯಲ್ಲಿ ಅಜ್ಜಿಯರು ಮೊಮ್ಮಕ್ಕಳಿಗೆ ನೀತಿ ಕತೆಗಳ ಹೇಳುತ್ತಾ ಬದುಕಿನ ಮಾರ್ಗಗಳ ಪರಿಚಯ ಮಾಡಿಕೊಡುತ್ತಿದ್ದರು. ಮೊದಲ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮನೆಗಳಲ್ಲಿ ಅಜ್ಜಿಯರೊಂದಿಗೆ ಒಡನಾಟಗಳು ಕಡಿಮೆಯಾಗುತ್ತಿರುವುದು ವಿಷಾಧನೀಯ ಎಂದರು.
ಈ ಮೊದಲು ಪೋಷಕರು ಮಕ್ಕಳಿಗಿಂತಲೂ ಹೆಚ್ಚಾಗಿ ಮೊಮ್ಮಕ್ಕಳ ಜೊತೆ ಹೆಚ್ಚಾಗಿ ಕಾಲ ಕಳೆಯುತ್ತೇವೆ. ಮೊಮ್ಮಕಳಿಗೆ ಪಾಠ ಹೇಳುವ ಮೂಲಕ ಶಿಕ್ಷಕರಾಗುತ್ತಿದ್ದರು. ಇದರಿಂದ, ಮಕ್ಕಳು ಬುದ್ಧಿವಂತರಾಗುತ್ತಿದ್ದರು. ಅತ್ಯಂತ ತಾಳ್ಮೆಯಿಂದ ಇರುವುದ ಕಲಿಯುತ್ತಿದ್ದರೆಂದು ವಿಜಯಕುಮಾರ್ ಹೇಳಿದರು.ಐಸಿಎಸ್‌ಇ ಪ್ರಿನ್ಸಿಪಾಲ ಬಸವರಾಜಯ್ಯ ಮಾತನಾಡಿ, ಅಜ್ಜಿ ತಾತಂದಿರು ಎಂದರೆ ನಮಗೆ ವಿಶೇಷ ಗೌರವವಿರುತ್ತದೆ. ಪ್ರತಿದಿನ ಅವರು ಮನೆಯಲ್ಲಿ ಸಲಹೆ ಸೂಚನೆ ನೀಡಿ ಮನೆಯು ಅಚ್ಚು ಕಟ್ಟಾಗಿ ನಡೆಯಲು ಸಹಕರಿಸುತ್ತಾರೆ. ಅಜ್ಜಿ ತಾತಂದಿರು ಮನೆಯಲ್ಲಿ ಎಷ್ಟೇ ನೋವು ಇದ್ದರೂ ಸಹ ನಗುನಗುತ್ತಾ ಇರುತ್ತಾರೆ. ಇತರಿಗೆ ನಗುವುದನ್ನು ಕಲಿಸುವ ಮೂಲಕ ಜೀವನ ಪಾಠವನ್ನು ಹೇಳಿಕೊಡುತ್ತಾರೆ. ಇಳಿ ವಯಸ್ಸಿನಲ್ಲಿಯೂ ಮಕ್ಕಳನ್ನು ಬೆಳೆಸುತ್ತಾರೆ, ಬೆರೆಯುತ್ತಾರೆ, ಆ ಮೂಲಕ ಜಗತ್ತನ್ನು ಬೆಳಗುತ್ತಾರೆ. ಅಜ್ಜಿ ತಾತ ಮೊಮ್ಮಕ್ಕಳ ನಂಟು ಬಿಡಿಸಲಾರದ ಗಂಟು. ತಂದೆ ತಾಯಿಗಳ ಮಮತೆ ಅಕ್ಕರೆ ಒಂದೆಡೆಯಾದರೆ, ಪ್ರೀತಿ-ವಾತ್ಸಲ್ಯ ಮಮತೆ ಕರುಣೆ ಈ ಪದಗಳ ಪ್ರತಿ ರೂಪವೇ ಅಜ್ಜಿ ತಾತಂದಿರು ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅಜ್ಜಿ – ತಾತಂದಿರ ವೇಷ ಧರಿಸಿ ಸಂಭ್ರಮಿಸಿದರು. ನಂತರ ಬಣ್ಣ ಬಣ್ಣದ ಉಡುಗೆ ತೊಟ್ಟು, ನೃತ್ಯ ಮಾಡಿ ಹಿರಿಯರಿಗೆ ಗೌರವ ಸಲ್ಲಿಸಿದರು. ಮೊಮ್ಮಕ್ಕಳು ಕೈಯಾರೆ ಬರೆದಂತಹ ಶುಭಾಶಯ ಪತ್ರಗಳನ್ನು ತಮ್ಮ ಅಜ್ಜಿ-ತಾತಂದಿರಿಗೆ ನೀಡಿದರು. ನಂತರ ಅಜ್ಜಿ ಮತ್ತು ತಾತಂದಿರಿಗೆ ಪ್ರತ್ಯೇಕ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಂಸ್ಥೆಯ ನಿರ್ದೇಶಕ ಎಸ್.ಎಂ.ಪೃಥ್ವೀಶ, ಶಾಲೆಯ ಮುಖ್ಯೋಪಾಧ್ಯಾಯ ಎನ್.ಜಿ.ತಿಪ್ಪೇಸ್ವಾಮಿ ಇದ್ದರು.---------------
ಪೋಟೋ ಕ್ಯಾಪ್ಸನ್..ಚಿತ್ರದುರ್ಗದ ವಿದ್ಯಾವಿಕಾಸ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಅಜ್ಜ-ಅಜ್ಜಿಯಂದಿರ ದಿನಾಚರಣೆಗೆ ಕಾರ್ಯದರ್ಶಿ ವಿಜಯಕುಮಾರ್ ಚಾಲನೆ ನೀಡಿದರು.
---------ಫೋಟೋ ಫೈಲ್ ನೇಮ್- 15 ಸಿಟಿಡಿ 2