ಸರ್ಕಾರಿ ಆಸ್ಪತ್ರೆ ಕಾಂಪೌಂಡು ನಿರ್ಮಿಸಲು ಅನುದಾನ: ಶಾಸಕ ರಾಜೇಗೌಡ ಭರವಸೆ

| Published : Oct 06 2024, 01:18 AM IST

ಸರ್ಕಾರಿ ಆಸ್ಪತ್ರೆ ಕಾಂಪೌಂಡು ನಿರ್ಮಿಸಲು ಅನುದಾನ: ಶಾಸಕ ರಾಜೇಗೌಡ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಸರ್ಕಾರಿ ಆಸ್ಪತ್ರೆ ಕಾಂಪೌಂಡು, ಗೇಟು ನಿರ್ಮಿಸಲು ತಾಪಂ ನಿಂದ 13 ಲಕ್ಷ ರು. ನೀಡಿದ್ದು ಅಗತ್ಯವಿದ್ದರೆ ಶಾಸಕರ ಕೋಟಾ ದಿಂದಲೂ ಅನುದಾನ ನೀಡುತ್ತೇನೆ ಎಂದು ಶಾಸಕ ಹಾಗೂ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.

ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಸರ್ಕಾರಿ ಆಸ್ಪತ್ರೆ ಕಾಂಪೌಂಡು, ಗೇಟು ನಿರ್ಮಿಸಲು ತಾಪಂ ನಿಂದ 13 ಲಕ್ಷ ರು. ನೀಡಿದ್ದು ಅಗತ್ಯವಿದ್ದರೆ ಶಾಸಕರ ಕೋಟಾ ದಿಂದಲೂ ಅನುದಾನ ನೀಡುತ್ತೇನೆ ಎಂದು ಶಾಸಕ ಹಾಗೂ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.

ಗುರುವಾರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಸ್ಪತ್ರೆ ಕಟ್ಟಡ ಮಳೆಯಿಂದ ಸೋರದಂತೆ ಸುರಕ್ಷಿತ ಕಾಮಗಾರಿ ಮಾಡಬೇಕು. ಅಗತ್ಯವಿದ್ದರೆ ಇನ್ನಷ್ಟು ಅನುದಾನ ನೀಡುತ್ತೇನೆ. ಅಗತ್ಯವಿದ್ದರೆ ಕುಡಿಯುವ ನೀರಿಗೆ ಒಂದು ಬೋರ್ ವೆಲ್ ನೀಡುತ್ತೇನೆ. ಸದ್ಯಕ್ಕೆ ಪಟ್ಟಣ ಪಂಚಾಯಿಯಿಂದಲೇ ನೀರಿನ ಸಂಪರ್ಕ ಕಲ್ಪಿಸಿ ಎಂದು ಸೂಚಿಸಿದರು.

ಆಸ್ಪತ್ರೆ ಮುಂಭಾಗ ಅಂಬ್ಯುಲೆನ್ಸ್ ಸರಾಗವಾಗಿ ಓಡಾಡಲು ರಸ್ತೆ ಅಗಲೀಕರಣ ವಿಷಯದ ಬಗ್ಗೆ ನಡೆದ ಚರ್ಚೆಯಲ್ಲಿ ಶಾಸಕರು ನಿರ್ಮಿತಿ ಕೇಂದ್ರ ದಿಂದ ಸೂಕ್ತ ಪ್ಲಾನ್, ಎಸ್ಟಿಮೇಟ್ ಮಾಡಿಸಿ ಕಾಮಗಾರಿಮಾಡಿಸಬಹುದು ಎಂದರು. ಸಭೆ ನಂತರ ಜನೌಷಧಿ ಕೇಂದ್ರದ ಜಾಗ ಪರಿಶೀಲನೆ ಮಾಡೋಣ. ಆಸ್ಪತ್ರೆ ಆವರಣದಲ್ಲಿ ಜನೌಷದಿ ಕೇಂದ್ರ ಇರಬೇಕು ಎಂಬ ನಿಯಮ ಇದೆ. 24 ಗಂಟೆಯೂ ಜನೌಷದಿ ಕೇಂದ್ರ ತೆರೆಯಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ. ವಿಜಯಕುಮಾರ್ ಮಾಹಿತಿ ನೀಡಿ, ಆಸ್ಪತ್ರೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಪಪಂನವರು ದುರಸ್ತಿ ಮಾಡಿಸಿದ್ದಾರೆ. 9 ಸಿಬ್ಬಂದಿಗೆ ತಿಂಗಳಿಗೆ ₹94 ಸಾವಿರ ಗೌರವಧನ ನೀಡಲಾಗುತ್ತಿದೆ. ಆಸ್ಪತ್ರೆ ಆವರಣದಲ್ಲಿ ಇರುವ ಜನೌಷದಿ ಕೇಂದ್ರವನ್ನು ಆಸ್ಪತ್ರೆ ಮುಂಭಾಗದ ಹಾಪ್ ಕಾಮ್ಸ್ ಮಳಿಗೆಗೆ ಸ್ಪಳಾಂತರಿಸುವ ಬಗ್ಗೆ ಚರ್ಚಿಸಿದರು.

ಆಸ್ಪತ್ರೆಯಲ್ಲಿರುವ 1 ಲಕ್ಷ ಮಂಗಳೂರು ಹೆಂಚು ಹರಾಜು ಹಾಕಲು ತೀರ್ಮಾನಿಸಲಾಯಿತು. ಮಾಸಿಕ ಗೌರವ ಧನ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಅನುಮೋದನೆ ಬಗ್ಗೆ ಚರ್ಚೆ ನಡೆಯಿತು.

ಸಭೆಯಲ್ಲಿ ತಾಪಂ ಇ.ಒ.ನವೀನ್ ಕುಮಾರ್, ಪಪಂ ಅಧ್ಯಕ್ಷೆ ಸುರೈಯಾಭಾನು, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯರುಗಳಾದ ರತನ್ ಗೌಡ, ಪಿ.ಪಿ.ಎಲಿಯೇಸ್, ಸುಜಿತ್, ಎಂ.ಪಿ.ಅಭಿಲಾಶ್,ಶ್ರೀಧರ್, ದಾನಮ್ಮ, ನಂದನ್, ಸುನೀಲ್ ಇದ್ದರು.