ಸಾರಾಂಶ
ಚನ್ನಪಟ್ಟಣ: ರಸ್ತೆಯಲ್ಲಿ ಒಣಹಾಕಿದ್ದ ರಾಗಿ ಹುಲ್ಲು ಕಾರಿನ ಎಂಜಿನ್ ಹಾಗೂ ಸೈಲೆನ್ಸರ್‌ಗೆ ಸಿಲುಕಿ ಬೆಂಕಿ ಹೊತ್ತುಕೊಂಡ ಪರಿಣಾಮ ಕಾರು ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ಅಂಕುಶನಹಳ್ಳಿ ಗ್ರಾಮದ ಬಳಿ ನಡೆದಿದೆ.
ಚನ್ನಪಟ್ಟಣ: ರಸ್ತೆಯಲ್ಲಿ ಒಣಹಾಕಿದ್ದ ರಾಗಿ ಹುಲ್ಲು ಕಾರಿನ ಎಂಜಿನ್ ಹಾಗೂ ಸೈಲೆನ್ಸರ್‌ಗೆ ಸಿಲುಕಿ ಬೆಂಕಿ ಹೊತ್ತುಕೊಂಡ ಪರಿಣಾಮ ಕಾರು ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ಅಂಕುಶನಹಳ್ಳಿ ಗ್ರಾಮದ ಬಳಿ ನಡೆದಿದೆ. ಬೆಂಗಳೂರಿನ ವಿಜಯ ಬ್ಯಾಂಕ್ ಲೇಔಟ್ ನಿವಾಸಿ ಅವಿನಾಶ್ ಬನ್ನಂಜೆ ಅರಿಯಪ್ಪ ಅವರ ಕಾರು ಸುಟ್ಟು ಕರಕಲಾಗಿದೆ. ಇವರು ಕಾರ್ಯನಿಮಿತ್ತ ತಾಲೂಕಿನ ಗರಕಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಅಂಕುಶನಹಳ್ಳಿ- ಕೃಷ್ಣಾಪುರ ರಸ್ತೆಯಲ್ಲಿ ಒಣಹಾಕಿದ ರಾಗಿ ಹುಲ್ಲು ಇವರ ಕಾರಿನ ಎಂಜಿನ್ ಹಾಗೂ ಸೈರನ್‌ಗೆ ತಗುಲಿಕೊಂಡಿದೆ. ಇದರಿಂದ ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡಿದೆ. ತಕ್ಷಣ ಕಾರಿನಿಂದ ಹೊರಬಂದ ಅವಿನಾಶ್ ಪ್ರಾಣ ಉಳಿಸಿಕೊಂಡಿದ್ದಾರೆ. ವಿಚಾರ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.