ಗಾಂಧೀಜಿ ಆದರ್ಶಗಳಿಂದ ಭವ್ಯ ಭಾರತ ನಿರ್ಮಾಣ

| Published : Oct 03 2024, 01:27 AM IST

ಗಾಂಧೀಜಿ ಆದರ್ಶಗಳಿಂದ ಭವ್ಯ ಭಾರತ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಮಸ್ಕಿಯಲ್ಲಿ ಗಾಂಧಿ ಜಯಂತಿ ನಿಮಿತ್ತ ಶಾಸಕ ಆರ್.ಬಸನಗೌಡ ನೇತೃತ್ವದಲ್ಲಿ ಗಾಂಧಿ ನಡೆಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಸ್ಕಿ

ಪಟ್ಟಣದಲ್ಲಿ ಮಹಾತ್ಮ ಗಾಂಧಿ ಜಯಂತಿ ಹಿನ್ನೆಲೆ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಳ್ಳಲಾದ ಗಾಂಧಿ ನಡಿಗೆಗೆ ಶಾಸಕ ಆರ್. ಬಸನಗೌಡ ತುರ್ವಿಹಾಳ ಚಾಲನೆ ನೀಡಿದರು.

ಇಲ್ಲಿನ ದೈವದಕಟ್ಟೆಯಿಂದ ಬಸವೇಶ್ವರ ನಗರದ ಕಾಂಗ್ರೆಸ್ ಕಚೇರಿಯವರೆಗೆ ಗಾಂಧಿ ನಡೆಗೆ ನಡೆಯಿತು.

ನಂತರ ಮಾತನಾಡಿದ ಶಾಸಕ ತುರ್ವಿಹಾಳ, ಅಂಹಿಸೆಯೇ ಗಾಂಧಿಜೀಯವರ ಅಸ್ತ್ರವಾಗಿತ್ತು. ಗಾಂಧಿಜೀ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಎಲ್ಲರೂ ನಡೆಯಬೇಕಿದೆ. ಅವರ ಅಂಹಿಸಾ ಹಾಗೂ ತ್ಯಾಗ ಮಾರ್ಗಗಳನ್ನು ಅಳವಡಿಸಿಕೊಂಡು ಭವ್ಯ ಭಾರತ ನಿರ್ಮಿಸಬೇಕಿದೆ ಎಂದು ಹೇಳಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರ, ಎಚ್.ಬಿ.ಮುರಾರಿ, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಮೈಬೂಸಾಬ ಮುದ್ದಾಪೂರ ಮಲ್ಲಯ್ಯ ಬಳ್ಳಾ, ಬಸನಗೌಡ ಪೊಲೀಸ್ ಪಾಟೀಲ, ವೆಂಕಟರೆಡ್ಡಿ ಹಾಲಾಪೂರ, ನಿರುಪಾದೆಪ್ಪ ವಕೀಲ, ಎಂ.ಅಮರೇಶ, ಮಾಜಿ ತಾಪಂ ಅಧ್ಯಕ್ಷ ಶಿವಣ್ಣ ನಾಯಕ, ಆನಂದ ವಿರಾಪೂರು, ಕೃಷ್ಣ ಚಿಗರಿ, ಶಬ್ಬೀರ್ಸಾಬ್ ಸೇರಿ ಹಲವಾರು ಮುಖಂಡರು ಕಾರ್ಯಕರ್ಯರು ನಡೆಗೆಯಲ್ಲಿ ಪಾಲ್ಗೊಂಡಿದ್ದರು.