ಸಾರಾಂಶ
ಜಯಕರ್ನಾಟಕ ಸಂಘಟನೆಯಿಂದ ಗಿಡ ನೆಡುವ ಮೂಲಕ ಹಸಿರೇ ಉಸಿರು ಅಭಿಯಾನಕ್ಕೆ ಚಾಲನೆ ನೀಡಲಾಯಿತು
ಕನ್ನಡಪ್ರಭ ವಾರ್ತೆ ಮೈಸೂರು
ಜಯಕರ್ನಾಟಕ ಸಂಘಟನೆಯಿಂದ ಗಿಡ ನೆಡುವ ಮೂಲಕ ಹಸಿರೇ ಉಸಿರು ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮುಖ್ಯಅತಿಥಿಯಾಗಿದ್ದ ರಾಮನಹಳ್ಳಿ ಪಪಂ ಮುಖ್ಯಾಧಿಕಾರಿ ಹಾಗೂ ಆರೋಗ್ಯ ನಿರೀಕ್ಷಕರು ಉದ್ಘಾಟಿಸಿದರು. ಇದೇ ಸಸಿಗಳನ್ನು ನೆಡಲಾಯಿತು. ನಗರಾಧ್ಯಕ್ಷ ಶ್ರೀಹರ್ಷ ಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ವಿಜಯ ಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀನಿವಾಸ ರಾವ್, ಗೌರವಾಧ್ಯಕ್ಷ ಗುರುಪ್ರಸಾದ್, ಜಿಲ್ಲಾ ಉಪಾಧ್ಯಕ್ಷ ಕಾಂತರಾಜು, ಪ್ರಧಾನ ಕಾರ್ಯದರ್ಶಿ ಲಿಂಗರಾಜು, ನಗರ ಉಪಾಧ್ಯಕ್ಷ ಸಂದೇಶ್, ನಗರ ಪ್ರಧಾನ ಕಾರ್ಯಾಧ್ಯಕ್ಷ ಚೇತನ್, ಎನ್.ಆರ್. ಕ್ಷೇತ್ರದ ಅಧ್ಯಕ್ಷ ಸಂಜಯ್ ಸಿಂಗ್, ಕೆ.ಆರ್. ಕ್ಷೇತ್ರದ ಅಧ್ಯಕ್ಷ ಹರ್ಷತ್, ಸದಸ್ಯರು ಭಾಗವಹಿಸಿದ್ದರು.