ಸಾರಾಂಶ
ತಾಲೂಕಿನ ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ರಾಜ್ಯ ಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ ಪಡೆದುಕೊಂಡಿದೆ.
ಗುಂಡ್ಲುಪೇಟೆ: ತಾಲೂಕಿನ ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ರಾಜ್ಯ ಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ ಪಡೆದುಕೊಂಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ರಾಜ್ಯ ಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿಯನ್ನು ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂಧನ್ ಶಾಲೆಯ ಮುಖ್ಯ ಶಿಕ್ಷಕ ಬಿ.ಮಹದೇಶ್ವರ ಸ್ವಾಮಿಗೆ ನೀಡಿದರು. ಪ್ರಶಸ್ತಿಯ ಫಲಕ, ನಗದು ₹10,000 ಬಹುಮಾನ, ಶಾಲೆಯ ಮಕ್ಕಳಿಗೆ ಚಾಕ್ಲೆಟ್, ಎಂಟು ಸಾವಿರ ಮೌಲ್ಯದ ಪುಸ್ತಕ, ಶಿಕ್ಷಕರಿಗೆ ದಿನಚರಿ, ಕೈ ಗಡಿಯಾರ ಒಳಗೊಂಡಿದೆ ಎಂದು ಮುಖ್ಯ ಶಿಕ್ಷಕ ಬಿ.ಮಹದೇಶ್ವರಸ್ವಾಮಿ ಮಾಹಿತಿ ನೀಡಿದ್ದಾರೆ.