ಸಾರಾಂಶ
ಗ್ಯಾರಂಟಿಗಳಿಂದ ಸಾಮಾಜಿಕ ನ್ಯಾಯ ನೀಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ
ಲಕ್ಷ್ಮೇಶ್ವರ:
ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆ ಮಹಿಳೆಯರ ಪಾಲಿಗೆ ದೊಡ್ಡ ವರದಾನವಾಗಿದೆ.ಯೋಜನೆಯಡಿ ಪ್ರತಿ ತಿಂಗಳು ಬರುತ್ತಿರುವ ಎರಡು ಸಾವಿರಗಳಿಂದ ಮಹಿಳೆಯರು ಆರ್ಥಿಕ ಸಬಲರಾಗುವಲ್ಲಿ ಸಹಕಾರಿಯಾಗಿದೆ ಎಂದು ಕಾಂಗ್ರೆಸ್ ನಾಯಕಿ ಮತ್ತು ಮಾಜಿ ಸಚಿವೆ ಉಮಾಶ್ರೀ ಹೇಳಿದರು.ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಶನಿವಾರ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠರ ಪರ ಮತಯಾಚನೆ ನಡೆಸಿ ಮಾತನಾಡಿದರು.
ಸಿದ್ಧರಾಮಯ್ಯನವರ ಸರ್ಕಾರ ನುಡಿದಂತೆ ನಡೆದಿದೆ.ಪಂಚ ಗ್ಯಾರಂಟಿಗಳಿಂದ ರಾಜ್ಯದ ಬಡವರ ಬದುಕು ಹಸನಾಗಿದೆ. ಗ್ಯಾರಂಟಿಗಳಿಂದ ಸಾಮಾಜಿಕ ನ್ಯಾಯ ನೀಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಈ ಬಾರಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಎಸ್.ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಸುಜಾತಾ ದೊಡ್ಡಮನಿ, ಎಸ್.ಪಿ. ಬಳಿಗಾರ, ರಾಜರತ್ನ ಹುಲಗೂರ, ಕೋಲಾರ ಗಣೇಶ, ಗೋ.ತಿಪ್ಪೇಶ, ನೀಲಮ್ಮ ಬೋಳನವರ, ಯಲ್ಲಪ್ಪ ತಳವಾರ, ರಾಜು ಓಲೆಕಾರ, ರಮೇಶ ಬಾರ್ಕಿ, ಸುರೇಶ ಸ್ವಾದಿ, ಸಂತೋಷ ತಾಂದಳೆ, ಶಿವಣ್ಣ ಕುರಿ, ಜಯಶ್ರೀ ಕರ್ಜಗಿ, ರೇಣುಕಾ ಆತಡಕರ, ದುಂಡವ್ವ ಹಾದಿಮನಿ, ರಾಮಣ್ಣ ತಳವಾರ ಸೇರಿದಂತೆ ಮತ್ತಿತರರು ಇದ್ದರು.