ಅಡಕೆ-ತೆಂಗಿನ ತೋಟಕ್ಕೆ ಬೆಂಕಿ: ಲಕ್ಷಾಂತರ ರು. ನಷ್ಟ

| Published : Mar 20 2024, 01:18 AM IST

ಅಡಕೆ-ತೆಂಗಿನ ತೋಟಕ್ಕೆ ಬೆಂಕಿ: ಲಕ್ಷಾಂತರ ರು. ನಷ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಕೊರಟಗೆರೆ ತಾಲೂಕಿನ ತೋವಿನಕೆರೆ ಸಮೀಪದ ಜುಂಜನಾರಮನಹಳ್ಳಿ ರೈತರೊಬ್ಬರ ತೋಟಕ್ಕೆ ಬೆಂಕಿ ಬಿದ್ದು ಸುಮಾರು ಮೂರು ಎಕರೆಯಷ್ಟು ತೆಂಗು ಮತ್ತು ಅಡಕೆ ಮರಗಳು ಭಸ್ಮವಾಗಿ ಲಕ್ಷಾಂತರ ರು.ಗಳ ನಷ್ಟ ಉಂಟಾಗಿದೆ.

ಕೊರಟಗೆರೆ: ತಾಲೂಕಿನ ತೋವಿನಕೆರೆ ಸಮೀಪದ ಜುಂಜನಾರಮನಹಳ್ಳಿ ರೈತರೊಬ್ಬರ ತೋಟಕ್ಕೆ ಬೆಂಕಿ ಬಿದ್ದು ಸುಮಾರು ಮೂರು ಎಕರೆಯಷ್ಟು ತೆಂಗು ಮತ್ತು ಅಡಕೆ ಮರಗಳು ಭಸ್ಮವಾಗಿ ಲಕ್ಷಾಂತರ ರು.ಗಳ ನಷ್ಟ ಉಂಟಾಗಿದೆ.

ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗಾ ಹೋಬಳಿ ಕುರಂಕೋಟೆ ಗ್ರಾಪಂ ವ್ಯಾಪ್ತಿಯ ಜುಂಜರಾಮನಹಳ್ಳಿ ಜನಾರ್ಧನಯ್ಯ ಎಂಬುವರಿಗೆ ಸೇರಿದ ತೋಟದಲ್ಲಿ ಭಾನುವಾರ ಮದ್ಯಾಹ್ನ ತೋಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಿಸಿಲು ಮತ್ತು ಗಾಳಿ ಜೋರಾಗಿ ಬೀಸುತ್ತಿದ್ದರಿಂದ ಬೆಂಕಿಯ ಜ್ವಾಲೆಗೆ 200ಕ್ಕೂ ಹೆಚ್ಚು ತೆಂಗು, 150 ಅಡಿಕೆ ಗಿಡಗಳು ಮತ್ತು ಹಣ್ಣಿನ ಗಿಡಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿ ಲಕ್ಷಾಂತರ ರು. ನಷ್ಟವಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ 2 ಗಂಟೆಗಳ ಕಾಲ ಶಮವಹಿಸಿ ಬೆಂಕಿ ನಂದಿಸಿ ಅಕ್ಕ ಪಕ್ಕದ ತೋಟಗಳಿಗೆ ಬೆಂಕಿ ತಾಕದಂತೆ ಹಾಗೂ ಹೆಚ್ಚಿನ ಅನಾಹುತ ನಡೆಯದಂತೆ ಕ್ರಮ ವಹಿಸಿದರು.