ಶೈಕ್ಷಣಿಕವಾಗಿ ಬೆಳೆದು, ಸಮಾಜಕ್ಕೆ ಕೊಡುಗೆ ನೀಡಿ

| Published : May 30 2024, 12:55 AM IST

ಸಾರಾಂಶ

ಬೆಳಗಾವಿ ನಗರದ ಮಹಾದ್ವಾರ ರಸ್ತೆಯಲ್ಲಿರುವ ಶಿವಗಿರಿ ಸಭಾಭವನದಲ್ಲಿ ಬಿಲ್ಲವರ ಅಸೋಸಿಯೇಶನ್ ಹಾಗೂ ಶಿವಗಿರಿ ಸೊಸೈಟಿಯ ಜಂಟಿ ಆಶ್ರಯದಲ್ಲಿ ನಡೆದ ಬಡವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕವನ್ನು ಶಿವಗಿರಿ ಸೊಸೈಟಿ ನಿರ್ದೇಶಕ ಹಾಗೂ ಉದ್ಯಮಿ ಸುಧೀರ್ ಕುಮಾರ್ ಸಾಲಿಯಾನ್ ವಿತರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಉನ್ನತ ಸ್ಥಾನದಲ್ಲಿ ಬೆಳೆದು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಶಿವಗಿರಿ ಸೊಸೈಟಿ ನಿರ್ದೇಶಕ ಹಾಗೂ ಉದ್ಯಮಿ ಸುಧೀರ್ ಕುಮಾರ್ ಸಾಲಿಯಾನ್ ಹೇಳಿದರು.

ನಗರದ ಮಹಾದ್ವಾರ ರಸ್ತೆಯಲ್ಲಿರುವ ಶಿವಗಿರಿ ಸಭಾಭವನದಲ್ಲಿ ಬಿಲ್ಲವರ ಅಸೋಸಿಯೇಶನ್ ಹಾಗೂ ಶಿವಗಿರಿ ಸೊಸೈಟಿಯ ಜಂಟಿ ಆಶ್ರಯದಲ್ಲಿ ನಡೆದ ಬಡವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿ ಮಾತನಾಡಿದ ಅವರು, ಮಕ್ಕಳು ಉನ್ನತ ಸ್ಥಾನದಲ್ಲಿರಬೇಕು ಎಂಬುವುದು ತಂದೆ, ತಾಯಿಯ ಕನಸು. ಮಕ್ಕಳು ಆ ಕನಸನ್ನು ನನಸು ಮಾಡಬೇಕು. ಪೋಷಕರು ಸಹ ಮಕ್ಕಳ ಶಿಕ್ಷಣಕ್ಕೆ ಯಾವುದೇ ಅಡೆ, ತಡೆಯಾಗದಂತೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಉದ್ಯಮಿ ಪ್ರಭಾಕರ್ ಶೆಟ್ಟಿ ಮಾತನಾಡಿ, ಶಿಕ್ಷಣದಿಂದಲೇ ದೇಶದ ಅಭಿವೃದ್ಧಿ ಸಾಧ್ಯ. ಮಕ್ಕಳು ಆದಷ್ಟು ವ್ಯಾಸಂಗಕ್ಕೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.ಈ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳ ಪೋಷಕರನ್ನು ಸತ್ಕರಿಸಿ, ನೂರಾರು ಬಡವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸುಂದರ ಕೋಟಿಯಾನ್, ಮಹಿಳಾ ಮಂಡಳಿಯ ಅಧ್ಯಕ್ಷೆ ಪುಷ್ಪಾ ಕೋಟಿಯಾನ್‌, ಮುಖ್ಯ ಕಾರ್ಯನಿರ್ವಾಹಕ ಸೋಮನಾಥ್ ಕಡಕೋಳ ಸಂಘದ ಆಡಳಿತ ಮಂಡಳಿಯವರು ಸೊಸೈಟಿಯ ನಿರ್ದೇಶಕ ವೃಂದದವರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು. ಶಾಖಾ ವ್ಯವಸ್ಥಾಪಕ ಚಂದ್ರ ಪೂಜಾರಿ ನಿರೂಪಿಸಿದರು.ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಬಡ ಕುಟುಂಬದವರಾಗಿದ್ದು ಸಂಸ್ಥೆ ವತಿಯಿಂದ ಪ್ರತಿ ವರ್ಷವೂ ಶಾಲಾ ವಿದ್ಯಾರ್ಥಿಗಳಿಗೆ ಕಿರು ಸಹಾಯ, ಸಹಕಾರ ನೀಡಲಾಗುವುದು. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಶಾಲೆಗಳಲ್ಲಿ ಉತ್ತಮ ಫಲಿತಾಂಶವನ್ನು ತಮ್ಮದಾಗಿಸಿಕೊಳ್ಳಬೇಕು.

-ಸುಧೀರ್ ಕುಮಾರ್ ಸಾಲಿಯಾನ್,

ಶಿವಗಿರಿ ಸೊಸೈಟಿ ನಿರ್ದೇಶಕ ಹಾಗೂ ಉದ್ಯಮಿ.ಶಿಕ್ಷಣದಿಂದಲೇ ದೇಶದ ಅಭಿವೃದ್ಧಿ ಸಾಧ್ಯ. ಮಕ್ಕಳು ಆದಷ್ಟು ವ್ಯಾಸಂಗಕ್ಕೆ ಹೆಚ್ಚಿನ ಗಮನ ಹರಿಸಬೇಕು.

-ಪ್ರಭಾಕರ್ ಶೆಟ್ಟಿ,
ಉದ್ಯಮಿ.