ಸಾರಾಂಶ
ಗ್ಯಾರಂಟಿ ಯೋಜನೆಯ ಮೂಲಕ ಲಕ್ಷಾಂತರ ಜನ ಅನುಕೂಲ ಪಡೆಯುತ್ತಿದ್ದಾರೆ. ಪ್ರಚಾರದ ನಡುವೆಯೂ ಹಲವು ಗ್ರಾಪಂ ವ್ಯಾಪ್ತಿಯಲ್ಲಿ ಕೆಲವು ಅರ್ಹ ಫಲಾನುಭವಿಗಳು ಈಗಲೂ ಯೋಜನೆಯಿಂದ ವಂಚಿತರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪಾಕ್ಷಿಕ ಪರಿಶೀಲನಾ ಸಭೆ ಪಟ್ಟಣದ ತಾಪಂ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.ಗ್ಯಾರಂಟಿ ಯೋಜನೆ ಮೂಲಕ ತಾಲೂಕಿನ ಫಲಾನುಭವಿಗಳಿಗೆ ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ ಯೋಜನೆ, ಉಚಿತ ವಿದ್ಯುತ್ ಮತ್ತು ಯುವನಿಧಿ ಯೋಜನೆಗಳ ಅನುಷ್ಟಾನದ ಬಗ್ಗೆ ಆಯಾ ಇಲಾಖಾ ವ್ಯಾಪ್ತಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಸಮಿತಿ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಕುಮಾರ್ ಮಾತನಾಡಿ, ಗ್ಯಾರಂಟಿ ಯೋಜನೆಯ ಮೂಲಕ ಲಕ್ಷಾಂತರ ಜನ ಅನುಕೂಲ ಪಡೆಯುತ್ತಿದ್ದಾರೆ. ಪ್ರಚಾರದ ನಡುವೆಯೂ ಹಲವು ಗ್ರಾಪಂ ವ್ಯಾಪ್ತಿಯಲ್ಲಿ ಕೆಲವು ಅರ್ಹ ಫಲಾನುಭವಿಗಳು ಈಗಲೂ ಯೋಜನೆಯಿಂದ ವಂಚಿತರಾಗಿದ್ದಾರೆ ಎಂದರು.ಸೌಲಭ್ಯ ವಂಚಿತ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರನ್ನು ಯೋಜನಾ ವ್ಯಾಪ್ತಿಗೆ ತರುವ ಕೆಲಸವನ್ನು ಸಮಿತಿಯ ಸದಸ್ಯರು ಮಾಡುತ್ತಿದ್ದಾರೆ. ಸದಸ್ಯರ ಜೊತೆಗೆ ಅಧಿಕಾರಿಗಳು ಕೈಜೋಡಿಸಬೇಕು. ಅಧಿಕಾರಿಗಳು ಬದ್ದತೆಯಿಂದ ಕೆಲಸ ಮಾಡಿದರೆ ಯೋಜನೆಯ ಫಲ ಶೇ.100 ಅರ್ಹರಿಗೆ ತಲುಪಲಿದೆ ಎಂದರು.
ಈ ವೇಳೆ ತಾಪಂ ಇಒ ಕೆ.ಸುಷ್ಮಾ, ಸಿಡಿಪಿಒ ಅರುಣ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿ, ಗ್ಯಾರಂಟಿ ಸಮಿತಿಯ ಸದಸ್ಯರಾದ ವಳಗೆರೆ ಮೆಣಸ ಬಿ.ಎನ್.ಗೋಪಾಲ್, ಸಿಂಗನಹಳ್ಳಿ ಯೋಗೇಶ್, ಗೋವಿಂದನಹಳ್ಳಿ ಕೊಪ್ಪಲು ಶ್ಯಾಮಣ್ಣ, ದೊಡ್ಡತಾರಹಳ್ಳಿ ಸೋಮಶೇಖರ್,ಚಟ್ಟೇನಹಳ್ಳಿ ಉದೇಶ್, ಗೊರವಿ ಕುಮಾರ್, ಕೆ.ಆರ್.ಪೇಟೆ ಪಟ್ಟಣದ ಅಗ್ರಹಾರ ಶಿವಣ್ಣ, ಕನದಾಸ ನಗರದ ಶಿವಮ್ಮ, ಬೊಮ್ಮೇನಹಳ್ಳಿ ಲತಾ, ಸಿಂಧುಘಟ್ಟ ಅಪೀಜ್ ಉಲ್ಲಾ, ಬೂಕನಕೆರೆ ರೂಪ ಮತ್ತು ಯಗಚಗುಪ್ಪೆ ಶಿವಲಿಂಗಪ್ಪ ಸಭೆಯಲ್ಲಿದ್ದರು.