14ರಿಂದ ಗುಂಡ್ಲುಪೇಟೇಲಿ 21ನೇ ಮದ್ಯ ವರ್ಜನ ಶಿಬಿರ

| Published : Jul 06 2025, 01:48 AM IST

14ರಿಂದ ಗುಂಡ್ಲುಪೇಟೇಲಿ 21ನೇ ಮದ್ಯ ವರ್ಜನ ಶಿಬಿರ
Share this Article
  • FB
  • TW
  • Linkdin
  • Email

ಸಾರಾಂಶ

ಸುತ್ತೂರು ಶ್ರೀಕ್ಷೇತ್ರ ಮೈಸೂರು ಜೆಎಸ್‌ಎಸ್‌ ಮಹಾವಿದ್ಯಾಪೀಠ ಹಾಗೂ ಹಾಲಹಳ್ಳಿ ಸಂಗಮ ಪ್ರತಿಷ್ಠಾನ, ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಪಟ್ಟಣದಲ್ಲಿ ೨೧ನೇ ಮದ್ಯ ವರ್ಜನ ಶಿಬಿರ ಜು.೧೪ ರಿಂದ ೨೩ ರ ವರೆಗೆ ನಡೆಯಲಿದೆ ಎಂದು ಮದ್ಯ ವರ್ಜನ ಶಿಬಿರದ ಸಂಚಾಲಕ ಡಾ.ಎಂ.ಪಿ.ಸೋಮಶೇಖರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಸುತ್ತೂರು ಶ್ರೀಕ್ಷೇತ್ರ ಮೈಸೂರು ಜೆಎಸ್‌ಎಸ್‌ ಮಹಾವಿದ್ಯಾಪೀಠ ಹಾಗೂ ಹಾಲಹಳ್ಳಿ ಸಂಗಮ ಪ್ರತಿಷ್ಠಾನ, ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಪಟ್ಟಣದಲ್ಲಿ ೨೧ನೇ ಮದ್ಯ ವರ್ಜನ ಶಿಬಿರ ಜು.೧೪ ರಿಂದ ೨೩ ರ ವರೆಗೆ ನಡೆಯಲಿದೆ ಎಂದು ಮದ್ಯ ವರ್ಜನ ಶಿಬಿರದ ಸಂಚಾಲಕ ಡಾ.ಎಂ.ಪಿ.ಸೋಮಶೇಖರ್‌ ಹೇಳಿದರು.

ಪಟ್ಟಣದ ಜೆಎಸ್‌ಎಸ್‌ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣದ ಜೆಎಸ್‌ಎಸ್‌ ಅನುಭವ ಮಂಟಪದಲ್ಲಿ ಮದ್ಯ ವರ್ಜನ ಶಿಬಿರ ನಡೆಯಲಿದ್ದು, ಈ ಶಿಬಿರದಲ್ಲಿ ೫೦ ರಿಂದ ೬೦ ಮಂದಿಗೆ ಮಾತ್ರ ಅವಕಾಶವಿದೆ ಆಸಕ್ತ ಮದ್ಯ ವ್ಯಸನಿಗಳು ಹೆಸರು ನೋಂದಾಯಿಸಿಕೊಳ್ಳಿ ಎಂದರು. ಹೆಚ್ಚಿನ ಮಾಹಿತಿ, ಶಿಬಿರ ನೋಂದಣಿಗೆ ಚಿಕ್ಕತುಪ್ಪೂರು ಮಠಾಧೀಶ ಚನ್ನವೀರ ಸ್ವಾಮೀಜಿ (೯೯೪೫೯೮೧೮೭೨) ,ಚುಂಚನಹಳ್ಳಿ ಮಠಾಧೀಶ ಚನ್ನಬಸವ ಸ್ವಾಮೀಜಿ (೯೯೪೫೪೯೪೬೧೨), ಡಾ.ಎಂ.ಪಿ.ಸೋಮಶೇಖರ್ (‌೯೪೪೮೬೫೩೮೯೭), ಎಸ್.ಬಸವರಾಜು (೯೮೮೬೪೭೬೧೪೨), ಸಂಗಮ ಪ್ರತಿಷ್ಠಾನದ ಮಂಜುನಾಥ್ (‌೯೮೮೬೮೩೮೮೧೦), ಪಿ.ಮಲ್ಲು ಚನ್ನಂಜಯ್ಯನಹುಂಡಿ (೯೯೦೦೦೭೬೦೪೫), ಎಚ್.ಎಂ.ಮಹದೇವಪ್ಪ ಹಂಗಳ (೯೯೭೨೭೩೦೪೮೬), ಮಣಿ ಮಡಹಳ್ಳಿ (೯೯೭೨೭೨೬೩೫೧), ಜೆಎಸ್‌ಎಸ್‌ ಅನುಭವ ಮಂಟಪದ ಕೆ.ಮಹದೇವಪ್ಪ (೯೯೦೨೧೪೨೩೮೮) ಸಂಪರ್ಕಿಸಿ ಎಂದು ಮನವಿ ಮಾಡಿದರು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಸುತ್ತೂರು ಕ್ಷೇತ್ರ ೨೦ ಮದ್ಯ ವರ್ಜನ ಶಿಬಿರಗಳನ್ನು ನಡೆಸಿದೆ. ಈಗ ಗುಂಡ್ಲುಪೇಟೆಯಲ್ಲಿ ೨೧ ನೇ ಮದ್ಯ ವರ್ಜನ ಶಿಬಿರ ನಡೆಯಲಿದೆ. ಗುಂಡ್ಲುಪೇಟೆಯಲ್ಲಿ ೨೦೧೭ ರಲ್ಲಿ ೭ನೇ ಮತ್ತು ೨೦೨೧ ರಲ್ಲಿ ೧೭ ನೇ ಮದ್ಯ ವರ್ಜನ ಶಿಬಿರ ನಡೆದಿವೆ ಎಂದರು.

ಆಸಕ್ತ ಮದ್ಯ ವ್ಯಸನಿಗಳು ಶಿಬಿರಕ್ಕೆ ಬರುವವರಿಗೆ ಎಲ್ಲಾ ಸೌಲಭ್ಯಗಳು ಉಚಿತ. ಅಲ್ಲದೆ ಆಪ್ತ ಸಮಾಲೋಚನೆ, ವೈದ್ಯಕೀಯ ತಪಾಸಣೆ ,ಕೌಶಲ್ಯ ತರಬೇತಿ, ೨೦ ಶಿಬಿರಗಳಲ್ಲಿ ಮದ್ಯ ತ್ಯಜಿಸಿದವರಿಂದ ಅನುಭವ ಹಂಚಿಕೊಳ್ಳಲಿದ್ದಾರೆ ಎಂದರು.

ಒಟ್ಟು ೨೦ ಮದ್ಯ ವರ್ಜನ ಶಿಬಿರಗಳಲ್ಲಿ ೧೦೫೨ ಮಂದಿ ಮದ್ಯ ವ್ಯಸನಿಗಳು ಭಾಗವಹಿಸಿದ್ದು, ಅವರಲ್ಲಿ ೪೦೦ ಮಂದಿಯಷ್ಟು ಮದ್ಯ ತ್ಯಜಿಸಿ, ಉತ್ತಮ ಜೀವನ ನಡೆಸುತ್ತಿದ್ದಾರೆ. ಶಿಬಿರದಲ್ಲಿ ಮನೋ ರಂಜನಾ ಕಾರ್ಯಕ್ರಮಗಳು, ಯೋಗ, ಧ್ಯಾನ ಇರುತ್ತದೆ ಎಂದರು.

ಜು.೨೩ ರಂದು ಮದ್ಯ ವರ್ಜನ ಶಿಬಿರದ ಕಡೆ ದಿನ ಸಮಾರೋಪ ಸಮಾರಂಭ ನಡೆಯಲಿದ್ದು, ಸಮಾರಂಭದಲ್ಲಿ ಸುತ್ತೂರು ಮಠಾಧೀಶರಾದ ಶಿವರಾತ್ರಿ ದೇಶಿಕೇಂದ್ರಮಹಾಸ್ವಾಮೀಜಿ, ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಭಾಗವಹಿಸಲಿದ್ದಾರೆ ಎಂದರು.

ಚುಂಚನಹಳ್ಳಿ ಮಠಾಧೀಶ ಚನ್ನಬಸವಸ್ವಾಮೀಜಿ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜೆಎಸ್‌ಎಸ್‌ ಕಾಲೇಜಿನ ಪ್ರಾಂಶುಪಾಲೆ ಡಾ.ಪಿ.ಮಹದೇವಮ್ಮ, ಎಂಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ಎಚ್.ಎಸ್.ಪ್ರಭುಸ್ವಾಮಿ ಇದ್ದರು.