ಸಾರಾಂಶ
ಮಕ್ಕಳು ಈ ಸಂದರ್ಭದಲ್ಲಿ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಪಾದಪೂಜೆಯ ಮುಖಾಂತರ ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿ
ಧಾರವಾಡ: ಇಲ್ಲಿಯ ಜೆಎಸ್ಸೆಸ್ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯಲ್ಲಿ ಗುರು ಪೂರ್ಣಿಮೆ ನಿಮಿತ್ತ ಹತ್ತನೆಯ ತರಗತಿಯ ಮಕ್ಕಳು ಶಿಕ್ಷಕ ವೃಂದಕ್ಕೆ ಹಾಗೂ ಶಾಲಾ ಸಿಬ್ಬಂದಿಗಳಿಗೆ ಪಾದಪೂಜೆ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸಿದರು.
ಪ್ರಾಚಾರ್ಯ ಸಾಧನಾ ಎಸ್.ಮಾತನಾಡಿ, ಭಾರತೀಯ ಪರಂಪರೆ, ಆಚಾರ-ವಿಚಾರ ಮಹತ್ತರವಾದವು. ಮಕ್ಕಳು ಈ ಸಂದರ್ಭದಲ್ಲಿ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಪಾದಪೂಜೆಯ ಮುಖಾಂತರ ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿ. ಮಕ್ಕಳ ಭವಿಷ್ಯ ಉಜ್ವಲವಾಗಲಿ ಹಾಗೂ ಜೀವನದಲ್ಲಿ ಯಶಸ್ಸನ್ನು ಕಾಣಲಿ ಎಂದು ಹಾರೈಸಿದರು. ಸಂಸ್ಕೃತ ವಿಷಯದ ಮುಖ್ಯಸ್ಥ ಡಾ.ಶ್ರೀಶಾಚಾರ್ಯ ನಾಮಾವಳಿ ಪಾದ ಪೂಜೆ ಮಾಡುವ ವಿಧಾನ ತಿಳಿಸಿಕೊಟ್ಟರು.