ಇಂದಿನ ಮಕ್ಕಳಿಗೆ ಗುರುಕುಲ ಮಾದರಿ ನೈತಿಕ ಶಿಕ್ಷಣ ಅವಶ್ಯ: ಎ.ಸಿ.ಗಂಗಾಧರ

| Published : Feb 09 2025, 01:34 AM IST

ಸಾರಾಂಶ

ಮಕ್ಕಳು ಏಕಾಗ್ರತೆ, ಶಿಸ್ತುಬದ್ಧತೆಯಿಂದ ವಿದ್ಯಾರ್ಜನೆ ಮಾಡಿದ್ದಾದರೆ ಸಾಧಕರಾಗಿ ಸಮಾಜ ಸೇವೆ ಮಾಡಲು ಸಾಧ್ಯ ಎಂದು ನಿವೃತ್ತ ಡಿಡಿಪಿಐ ಎ.ಸಿ.ಗಂಗಾಧರ ನುಡಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಮಕ್ಕಳು ಏಕಾಗ್ರತೆ, ಶಿಸ್ತುಬದ್ಧತೆಯಿಂದ ವಿದ್ಯಾರ್ಜನೆ ಮಾಡಿದ್ದಾದರೆ ಸಾಧಕರಾಗಿ ಸಮಾಜ ಸೇವೆ ಮಾಡಲು ಸಾಧ್ಯ ಎಂದು ನಿವೃತ್ತ ಡಿಡಿಪಿಐ ಎ.ಸಿ.ಗಂಗಾಧರ ನುಡಿದರು.

ತಾಲೂಕಿನ ನಯಾನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ ಎಸ್ಎಸ್ಎಲ್‌ಸಿ ಮಕ್ಕಳ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ಹಾಗೂ 2000-01ನೇ ಸಾಲಿನ ವಿದ್ಯಾರ್ಥಿಗಳ ಗುರುವಂದನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಇಂದಿನ ಮಕ್ಕಳಿಗೆ ವೈಜ್ಞಾನಿಕ ಯುಗದ ಶಿಕ್ಷಣ ಪದ್ಧತಿ ಜೊತೆಗೆ ಗುರುಕುಲ ಮಾದರಿ ನೈತಿಕ ಶಿಕ್ಷಣದ ಅವಶ್ಯಕತೆ ಇದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ, ಶಿಕ್ಷಣ ಪ್ರೇಮಿ ನಾರಾಯಣ ನಲವಡೆ ಮಾತನಾಡಿ, ಶಾಲೆಯಲ್ಲಿ ನಡೆಯುತ್ತಿರುವ ಎಲ್ಲಾ ಒಳ್ಳೆಯ ಬೆಳವಣಿಗಗೆ ನಯಾನಗರ ಜನತೆ ಹಾಗೂ ಜ್ಞಾನ ಮಟ್ಟ ಹೆಚ್ಚಿಸಲು ನಿರಂತರವಾಗಿ ಶ್ರಮಿಸುತ್ತಿರುವ ಗುರುಬಳಗವೇ ಕಾರಣ. ಮಕ್ಕಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಮಹಾಂತೇಶ ಮರೆಕ್ಕನವರ ಮಾತನಾಡಿ, ನಾವು ಕಲಿತ ಶಾಲೆಗೆ, ನಮಗೆ ಕಲಿಸಿದ ಗುರುಗಳ ಮುಂದೆ ಸೇವೆ ಮಾಡಲು ಅವಕಾಶ ಸಿಕ್ಕಿರುವುದೇ ನಮ್ಮ ಭಾಗ್ಯ ಎಂದರು.

ನಿವೃತ್ತ ಪ್ರಾಚಾರ್ಯ ಎಂ.ಬಿ.ಇಂಗಳಗಿ, ಸುವರ್ಣಾ ಅಂಗಡಿ, ಉಪನ್ಯಾಸಕ ಪಿ.ಎಂ.ಅಯಾಚಿತ ಮುಖ್ಯೋಪಾದ್ಯಾಯರಾದ ಎಸ್.ವ್ಹಿ.ಯರಡ್ಡಿ, ಎಂ.ಐ.ಪೆಂಟೇದ, ಎಸ್.ಟಿ.ದಾಸರ, ಸುಪರಿಟೆಂಡಂಟ್ ಸುರೇಶ ಬೆಟಗೇರಿ, ಬಿ.ವ್ಹಿ.ಪತ್ತಾರ, ಬ್ರಹ್ಮಾನಂದ ಕಡ್ಲಿಬುಡ್ಡಿ, ಪಿ.ಪಿ.ಸೊಂಟಕ್ಕಿ, ಜಿ.ಬಿ.ಪಟ್ಟಣಶಟ್ಟಿ, ಎಸ್.ಜಿ.ಹಿರೇಮಠ, ಚಂದ್ರು ದೇವಲಾಪೂರ, ಪ್ರಕಾಶ ಅಡಕಿ, ಗಂಗಯ್ಯಾ ಹಿರೇಮಠ, ದೇಮನಗೌಡ ಶೀಲವಂತರ, ಕಲ್ಲಪ್ಪ ಏಣಗಿ, ಯಲ್ಲಪ್ಪ ಏಣಗಿ, ಗೀತಾ ಚಂದರಗಿ, ನಿಂಗಪ್ಪ ಅಳಗೋಡಿ, ರವಿ ಬಡಿಗೇರ, ಸೋಮನಿಂಗ ಅಡಕಿ, ಬಾಬು ಮಾಳಗಿ, ಭೀಮಪ್ಪ ಹಲ್ಕಿ, ಪಂಚಾಯಿತಿ ಸದಸ್ಯರಾದ ಉಮೇಶ ಹುಲಮನಿ, ನಾರಾಯಣ ಶಿರೋಮನಿ, ರವಿ ಹುಡೇದ, ಮೌನೇಶ ಪತ್ತಾರ, ಮಾಜಿ ಉಪಾಧ್ಯಕ್ಷರಾದ ಶ್ರೀಕಾಂತಗೌಡ ಪಾಟೀಲ, ಮಲ್ಲಪ್ಪ ಕಾಂಬಳೆ, ಮಾಜಿ ಗ್ರಾ.ಪಂ ಅಧ್ಯಕ್ಷರಾದ ಬೀಮಪ್ಪ ಕರಿದೇಮನ್ನವರ, ಈರಪ್ಪ ಉಜ್ಜಿನಕೊಪ್ಪ, ಮುಖ್ಯೋಪಾದ್ಯಾಯರಾದ ನಾಗೇಶ ಮಾಳನ್ನವರ, ಎಂ.ಎಂ.ಸಂಗೊಳ್ಳಿ, ಮುದಕಪ್ಪ ತೋಟಗಿ, ಎಸ್.ಆರ್.ಪತ್ತಾರ, ಮಂಜುನಾಥ ಬೈಲಪ್ಪನವರ, ಬಸವರಾಜ ಪತ್ತಾರ, ರವಿಂದ್ರಕುಮಾರ ಹಾದಿಮನಿ, ಸಿದ್ದಯ್ಯಾ ಹಿರೇಮಠ, ಹಳೆಯ ವಿದ್ಯಾರ್ಥಿಗಳಾದ ವೆಂಕಟೇಶ ಬಾಗಲ, ಸಂಗಮೇಶ ನೇಗಿನಹಾಳ, ಮಹಾಂತೇಶ ಮಬನೂರ ಮುಂತಾದವರಿದ್ದರು.

ಆದರ್ಶ ವಿದ್ಯಾರ್ಥಿಗಳಾಗಿ ಆದರ್ಶ ಉಜ್ಜಿನಕೊಪ್ಪ, ಅಕ್ಷತಾ ಕಲಬಾವಿ ಇವಳು ಆಯ್ಕೆಯಾದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.