ಸಾರಾಂಶ
ರಾಜ್ಯಾದ್ಯಂತ ಸಹಕಾರ ಸಂಘಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ ₹10 ಲಕ್ಷದ ವರೆಗೆ ಸಾಲ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಕೂಕನೂರಿನಲ್ಲಿ ಮನವಿ ಸಲ್ಲಿಸಲಾಯಿತು.
ಕುಷ್ಟಗಿ: ರಾಜ್ಯಾದ್ಯಂತ ಸಹಕಾರ ಸಂಘಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ ₹10 ಲಕ್ಷದ ವರೆಗೆ ಸಾಲ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಕೂಕನೂರಿನಲ್ಲಿ ಮನವಿ ಸಲ್ಲಿಸಲಾಯಿತು.ರೈತ ಸಂಘದ ಮುಖಂಡ ಮೊಹ್ಮದ ನಜೀರಸಾಬ ಮೂಲಿಮನಿ ಮಾತನಾಡಿ, ಸಹಕಾರ ಸಂಘಗಳು ನೀಡುವಂತಹ ₹3 ಲಕ್ಷ ಸಾಲವನ್ನು ₹10 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಕೋರಿದರು.
ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಸಾಲ ಮಾಡಿ ರೈತರು ಅಸಲು ಮತ್ತು ಬಡ್ಡಿ ಕಟ್ಟಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಸಣ್ಣ ಮೊತ್ತದ ಸಾಲಕ್ಕೆ ಹೆದರಿ, ರೈತರು, ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರವಾಗಿದೆ. ಸಹಕಾರ ಸಂಘಗಳು ಹೆಚ್ಚುವರಿಯಾಗಿ ಸಾಲ ನೀಡುವ ಮೂಲಕ ಜನರ ಜೀವ ಕಾಪಾಡುವ ಕಾರ್ಯ ಮಾಡಬೇಕು ಎಂದರು.ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಕಾಳು ಪ್ರತಿ ಕ್ವಿಂಟಲ್ ದರ ₹5650 ಇದ್ದು, ಒಬ್ಬ ರೈತನಿಂದ ಗರಿಷ್ಠ 20 ಕ್ವಿಂಟಲ್ ಖರೀದಿಸಲಾಗುತ್ತಿದೆ. ಇದನ್ನು 40 ಕ್ವಿಂಟಲ್ ವರೆಗೆ ಹೆಚ್ಚಿಸಬೇಕು ಹಾಗೂ ಪ್ರತಿ ಕ್ವಿಂಟಲ್‌ಗೆ ₹2000 ರಾಜ್ಯ ಸರ್ಕಾರದ ಸಹಾಯಧನದೊಂದಿಗೆ ₹7650ಕ್ಕೆ ಖರೀದಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ರೈತರ ಆರೋಗ್ಯದ ಹಿತದೃಷ್ಟಿಯಿಂದ ಯಶಸ್ವಿನಿ ಯೋಜನೆ ಜಾರಿಗೆ ತಂದಿದ್ದು, ₹500 ಇದ್ದ ನೋಂದಣಿ ಶುಲ್ಕವನ್ನು ₹250ಕ್ಕೆ ನಿಗದಿಗೊಳಿಸಿ ಮುಂದಿನ ಪ್ರತಿಯೊಬ್ಬರಿಗೆ ₹100 ಇದ್ದುದ್ದನ್ನು ₹50ಕ್ಕೆ ನಿಗದಿಗೊಳಿಸಿ ಅನುಕೂಲ ಮಾಡಿಕೊಡಬೇಕು ಎಂದರು.ಶರಣಯ್ಯ ಮುಳ್ಳೂರಮಠ, ಬಸವರಾಜ ಕೊಡ್ಲಿ, ಗುದ್ದಯ್ಯ ಕೆಂಭಾವಿಮಠ ಇದ್ದರು.