ಸಾರಾಂಶ
ಈ ಕೃತಿಯು ಶ್ರೀಮಠದ ಇತಿಹಾಸದ ಮೈಲುಗಲ್ಲು. ನೂರಾರು ಶರಣರ ಚರಿತ್ರೆ ಇರುವ ಈ ಕೃತಿಗೆ ಶರಣ ಸಾಹಿತ್ಯದಲ್ಲಿ ಅನನ್ಯ ಸ್ಥಾನವಿದೆ.
ಕನ್ನಡಪ್ರಭ ವಾರ್ತೆ ಮೈಸೂರುದೇವನೂರಿನ ಗುರುಮಲ್ಲೇಶ್ವರರು ಮತ್ತು ಪರಂಪರೆ 12ನೇ ಶತಮಾನದ ಬಸವೇಶ್ವರ ತತ್ವ ಚಿಂತನೆಗಳನ್ನು ಸರಳವಾಗಿ ಪ್ರಚಾರ ಮಾಡಿ ಮಾನವ ಪ್ರೇಮವನ್ನು ಬಿತ್ತಿ ಜನರನ್ನು ಅರಿವಿಗೆ ತಂದವರು ಒಂದು ಶತಮಾನದ ಹಿಂದಷ್ಟೇ ಇದ್ದ ಗುರು ಎಂದು ಸಾಹಿತಿ ಪ್ರೊ. ಎಂ. ಚಂದ್ರಶೇಖರಯ್ಯ ಅಭಿಪ್ರಾಯಪಟ್ಟರು.
ದೇವನೂರು ಮಠದಲ್ಲಿ ನಡೆದ ಡಿ.ಎಂ. ಮಹದೇವಮೂರ್ತಿ ರಚಿಸಿದ್ದ ಡಾ.ಮಹೇಂದ್ರಮೂರ್ತಿ ದೇವನೂರು ಸಂಪಾದಿಸಿರುವ ಶ್ರೀ ಗುರು ಮಲ್ಲೇಶ್ವರ ಪ್ರಭಾವಲಯ ಕೃತಿಯನ್ನು ಕುರಿತು ಅವರು ಮಾತನಾಡಿದರು.ಈ ಕೃತಿಯು ಶ್ರೀಮಠದ ಇತಿಹಾಸದ ಮೈಲುಗಲ್ಲು. ನೂರಾರು ಶರಣರ ಚರಿತ್ರೆ ಇರುವ ಈ ಕೃತಿಗೆ ಶರಣ ಸಾಹಿತ್ಯದಲ್ಲಿ ಅನನ್ಯ ಸ್ಥಾನವಿದೆ. ಮುಂದೆ ರಚನೆಯಾಗುವ ಅನೇಕ ಕೃತಿಗಳಿಗೆ ಇದು ಪರಾಮರ್ಶನ ಗ್ರಂಥವಾಗಿದೆ. ಈ ಕೃತಿಯನ್ನು ವಿದ್ವತ್ಪೂರ್ಣವಾದ ಮುನ್ನುಡಿ, ಶಾಸ್ತ್ರೀಯ ನೆಲೆಯಲ್ಲಿ ಸಂಪಾದಿಸಿರುವುದು ಮಹತ್ವದ ಸಂಗತಿ 1980 ದಶಕದಲ್ಲಿ ರಚಿತವಾಗಿದ್ದ ಈ ಕೃತಿ ಲೋಕಾರ್ಪಣೆಯಾಗುತ್ತಿರುವುದು ಅತ್ಯಂತ ಸಂತಸದ ಸಂಗತಿಎಂದು ಅವರು ತಿಳಿಸಿದರು.ದೇವನೂರು ಮಠದ ಅಧ್ಯಕ್ಷ ಶ್ರೀ ಮಹಾಂತ ಸ್ವಾಮೀಜಿ ಕೃತಿಯನ್ನು ಬಿಡುಗಡೆಗೊಳಿಸಿ, ಮಠದ ಚರಿತ್ರೆಯಲ್ಲಿ ಈ ಕೃತಿಯ ಪ್ರಕಟಣೆ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾಗಿದೆ. ಇದೊಂದು ಅಮೂಲ್ಯ ಗ್ರಂಥವಾಗಿದೆ. ಈ ಗ್ರಂಥ ರಚನೆಗೆ ಮಹಾದೇವ ಮೂರ್ತಿಯವರು ತುಂಬಾ ಶ್ರಮಿಸಿದ್ದಾರೆ. ಅಷ್ಟೇ ಮುಖ್ಯವಾಗಿ ಸಂಪಾದಕರಾದ ಮಹೇಂದ್ರಮೂರ್ತಿ ಅವರ ಶ್ರಮವು ಸೇರಿದೆ. ಈ ಕೃತಿಯನ್ನು ಸಹೃದಯರು ಪ್ರೀತಿಯಿಂದ ಬರಮಾಡಿಕೊಳ್ಳಬೇಕು ಎಂದು ತಿಳಿಸಿದರು.ಕೃತಿಯ ಸಂಪಾದಕರಾದ ಡಾ. ಮಹೇಂದ್ರಮೂರ್ತಿ ದೇವನೂರು ಮಾತನಾಡಿ, ಈ ಕೃತಿಯನ್ನು ಪ್ರೀತಿ ಗೌರವಗಳಿಂದ ಸಂಪಾದಿಸಿದ್ದೇನೆ. ವಿದ್ವತ್ತು, ಭಕ್ತಿ, ವಿಚಾರಗಳಂತಿರುವ ಈ ಕೃತಿಯನ್ನು ಸಂಪಾದಿಸಿದ್ದು ನನ್ನ ಸೌಭಾಗ್ಯ. ಇದು ಗುರು ಕಾಣಿಕೆಯ ಕೆಲಸ ಎಂದು ಹೇಳಿದರು.ಈ ಕೃತಿಯನ್ನು ಗುರುಮಲ್ಲೇಶ್ವರ ದಾಸೋಹ ಸಮಿತಿಯವರು ಪ್ರಕಟಿಸಿದ್ದಾರೆ. ಪ್ರೊ. ಡಿ.ಎಂ. ಶಾಂತಪ್ಪ ಸ್ವಾಗತಿಸಿದರು. ಗುರುಶಾಂತಮ್ಮ, ಮಲ್ಲಿಕಾರ್ಜುನ್
ಆರಾಧ್ಯ, ಚಿನ್ನಸ್ವಾಮಿ, ಬಸವರಾಜಪ್ಪ, ಗುರುಸ್ವಾಮಿ, ಡಿ.ಎನ್. ಲೋಕಪ್ಪ, ಡಿ.ಎಸ್. ಶಿವಮಾದಪ್ಪ, ಡಿ.ಎಂ. ಗುರುಮಲ್ಲೇಶ್, ಡಿ.ಎಸ್. ಗಿರೀಶ್, ಡಿ.ಎಸ್. ಸುರೇಶ್, ರೇಚಣ್ಣ, ಮೀನಾ, ಪಂಚಾಕ್ಷರಿಸ್ವಾಮಿ, ಮಹಾದೇವಮೂರ್ತಿ ಅವರ ಅಭಿಮಾನಿಗಳು, ವಿವಿಧ ಮಠಾಧಿಪತಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.