ಗುರುಮಠಕಲ್‌: ನ್ಯಾಯಾಧೀಶರಿಂದ ನ್ಯಾಯಾಲಯ ಕಟ್ಟಡ, ಸ್ಥಳ ಪರಿಶೀಲನೆ

| Published : Sep 03 2025, 01:00 AM IST

ಗುರುಮಠಕಲ್‌: ನ್ಯಾಯಾಧೀಶರಿಂದ ನ್ಯಾಯಾಲಯ ಕಟ್ಟಡ, ಸ್ಥಳ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಗುರುಮಠಕಲ್‌ ಪಟ್ಟಣದಲ್ಲಿ ನ್ಯಾಯಾಲಯ ಪ್ರಾರಂಭಕ್ಕಾಗಿ ಟೌನ್‌ಹಾಲ್ ಕಟ್ಟಡದಲ್ಲಿ ಕಾಮಗಾರಿ ನಡೆಯುತ್ತಿರುವುದನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮರುಳಸಿದ್ದರಾಧ್ಯ ಎಚ್.ಜೆ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ಗುರುಮಠಕಲ್‌ ಪಟ್ಟಣದಲ್ಲಿ ನ್ಯಾಯಾಲಯ ಪ್ರಾರಂಭಕ್ಕಾಗಿ ಟೌನ್‌ಹಾಲ್ ಕಟ್ಟಡದಲ್ಲಿ ಕಾಮಗಾರಿ ನಡೆಯುತ್ತಿರುವುದನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮರುಳಸಿದ್ದರಾಧ್ಯ ಎಚ್.ಜೆ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ತಾಲೂಕು ನ್ಯಾಯಾಲಯ ಸ್ಥಾಪನೆಗೆ ಬಹುದಿನಗಳ ಬೇಡಿಕೆ ಇದ್ದುದರಿಂದ, ನ್ಯಾಯಾಲಯ ಕೆಲಸಕ್ಕೆ ಜಿಲ್ಲಾ ಕೇಂದ್ರಕ್ಕೆ ಅಲೆಯುವುದು ತಪ್ಪಲಿದೆ ಎಂದರು. ಗುರುಮಠಕಲ್‌ನಲ್ಲಿ ನ್ಯಾಯಾಲಯ ಸೆಪ್ಟೆಂಬರ್ ತಿಂಗಳಲ್ಲೇ ಉದ್ಘಾಟನೆ ಮಾಡಬೇಕು ಎಂದು ನ್ಯಾಯಾಧೀಶ ಮರುಳಸಿದ್ದರಾಧ್ಯ ಎಚ್. ಜೆ. ಸೂಚಿಸಿದರು.

ಟೌನ್‌ಹಾಲ್ ಭವ್ಯ ಕಟ್ಟಡದಲ್ಲಿ ಬಹುದಿನಗಳ ಬೇಡಿಕೆಯಾದ ನ್ಯಾಯಾಲಯ ಕಟ್ಟಡ ಸ್ಥಾಪನೆಗೆ ಅವಶ್ಯವಿರುವ ಸ್ಥಳವನ್ನು ಪರಿಶೀಲನೆ ಮಾಡಿದರು. ಇದೇ ವೇಳೆ ನ್ಯಾಯಾಧೀಶರಿಂದ ಪಟ್ಟಣದಲ್ಲಿ ನ್ಯಾಯಾಲಯ ಕಟ್ಟಡಕ್ಕಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಅವಶ್ಯಕವಿರುವ ನಿವೇಶನಕ್ಕಾಗಿ ಬಸ್ ಡಿಪೋ ಹತ್ತಿರ ಮತ್ತು ಇತರೆಡೆ ಸ್ಥಳ ಪರಿಶೀಲನೆ ಮಾಡಿದರು. ಗುರುಮಠಕಲ್ ವ್ಯಾಪ್ತಿಯ ಜನರು ಪ್ರತಿ ಕೆಲಸಕ್ಕೆ ಸುಮಾರು 40 ಕಿ.ಮೀ. ದೂರದ ಯಾದಗಿರಿಯನ್ನು ಅವಲಂಬಿಸಿದ್ದು, ಗುರುಮಠಕಲ್‌ನಲ್ಲಿ ನ್ಯಾಯಾಲಯ ಸ್ಥಾಪನೆಯಿಂದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಈ ಬಗ್ಗೆ ನ್ಯಾಯಾಧೀಶರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ, ಸಮಗ್ರ ಮಾಹಿತಿ ಪಡೆದರು.

ತಹಸೀಲ್ದಾರ್‌ ಶಾಂತಗೌಡ ಬಿರಾದರ್, ಪುರಸಭೆ ಮುಖ್ಯಾಧಿಕಾರಿ ಭಾರತಿ ಸಿ. ದಂಡೋತಿ, ಸಿಪಿಐ ವೀರಣ್ಣ ದೊಡ್ಡಮನಿ, ಎಎಸ್‌ಐ ಭೀಮಶಪ್ಪ ಕಾನಗಡ್ಡಾ, ವಕೀಲರ ಸಂಘದ ಅಧ್ಯಕ್ಷ ರವೀಂದ್ರ ಎಸ್. ಪಾಟೀಲ್, ರಾಜರಮೇಶ ಗೌಡ, ಸಾಬಣ್ಣ ಗಣಪುರ, ಆನಂದ ನಿರೇಟಿ, ಕೃಷ್ಣಾ ಮೇದಾ, ದೇವಿಂದ್ರಪ್ಪ ಎಂ, ಗುರುನಾಥರೆಡ್ಡಿ ಅನಪುರ, ಮೋಹನ ಗಜರೆ, ಪಿಡಬ್ಲ್ಯುಡಿ ಎಇಇ ಪರಶುರಾಮ, ಸುನೀಲ್, ಸಂಜು ಕುಮಾರ್, ದೊಡ್ಡ ಬಸವರಾಜ್, ಸರ್ವಯರ್ ಪವನ್, ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ, ಪುರಸಭೆ ಸಿಬ್ಬಂದಿ, ಕಂದಾಯ ಇಲಾಖೆಯ ಸಿಬ್ಬಂದಿ ಸೇರಿದಂತೆ ಇತರರಿದ್ದರು.