ಎಳ್ಳೇಶಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ

| Published : Sep 23 2024, 01:15 AM IST

ಎಳ್ಳೇಶಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆನರಸೀಪುರ: ಶಿಕ್ಷಣ ಕಲಿಸಿದ ಗುರು, ತಂದೆ, ತಾಯಿ ಹಾಗೂ ಹಿರಿಯನ್ನು ಗೌರವಿಸುವ ಜತೆಗೆ ಅವರು ನೀಡಿದ ಸಲಹೆ ಹಾಗೂ ಮಾರ್ಗದರ್ಶನವನ್ನು ಪಾಲಿಸುತ್ತಾ ಸಮಾಜದಲ್ಲಿ ಇತರರಿಗೆ ಮಾದರಿಯಾದಾಗ ಮಾತ್ರ ಶಿಕ್ಷಣ ಕಲಿಸಿದ ಶಿಕ್ಷಕರ ಶ್ರಮಕ್ಕೆ ಗೌರವ ಸಲ್ಲಿಸಿದ್ದಂತೆ ಎಂದು ಎಳ್ಳೇಶಪುರದ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಚೆಲುವರಾಜು ಅಭಿಪ್ರಾಯಪಟ್ಟರು.

ಹೊಳೆನರಸೀಪುರ: ಶಿಕ್ಷಣ ಕಲಿಸಿದ ಗುರು, ತಂದೆ, ತಾಯಿ ಹಾಗೂ ಹಿರಿಯನ್ನು ಗೌರವಿಸುವ ಜತೆಗೆ ಅವರು ನೀಡಿದ ಸಲಹೆ ಹಾಗೂ ಮಾರ್ಗದರ್ಶನವನ್ನು ಪಾಲಿಸುತ್ತಾ ಸಮಾಜದಲ್ಲಿ ಇತರರಿಗೆ ಮಾದರಿಯಾದಾಗ ಮಾತ್ರ ಶಿಕ್ಷಣ ಕಲಿಸಿದ ಶಿಕ್ಷಕರ ಶ್ರಮಕ್ಕೆ ಗೌರವ ಸಲ್ಲಿಸಿದ್ದಂತೆ ಎಂದು ಎಳ್ಳೇಶಪುರದ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಚೆಲುವರಾಜು ಅಭಿಪ್ರಾಯಪಟ್ಟರು. ತಾಲೂಕಿನ ಎಳ್ಳೇಶಪುರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ೨೦೦೪-೦೫ನೇ ಸಾಲಿನ ವಿದ್ಯಾರ್ಥಿಗಳು ನಮ್ಮ ಶಾಲೆ ನಮ್ಮ ಹೆಮ್ಮೆ ಎಂಬ ಪರಿಕಲ್ಪನೆಯಲ್ಲಿ ಆಯೋಜನೆ ಮಾಡಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗೆ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಹಳೇ ವಿದ್ಯಾರ್ಥಿಗಳು ಶಾಲೆಯ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಗ್ರಾಮಸ್ಥರ ಮನ ಒಲಿಸುವ ಜತೆಗೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ, ಈ ಶಾಲೆಯೂ ಅತ್ತ್ಯುತ್ತಮವಾಗಿದೆ ಎಂದು ಹೆಗ್ಗಳಿಕೆ ಗಳಿಸಿದ್ದಲ್ಲಿ ಸರ್ಕಾರಿ ಶಾಲೆಯನ್ನು ಉಳಿಸಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದರು. ಎಳ್ಳೇಶಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ೨೦೦೪-೦೫ನೇ ಸಾಲಿನಲ್ಲಿ ಸೇವೆ ಸಲ್ಲಿಸಿದ್ದ ಕೆ.ಪಿ.ನಾರಾಯಣ್, ಬಿ.ಪಿ.ತಿಪ್ಪೇಸ್ವಾಮಿ, ಕೆ.ಸಿ.ಮಂಜುನಾಥ್, ಬಿ.ಎಸ್.ರಮೇಶ್, ಎಸ್.ಸಿ.ಪುರುಷೋತ್ತಮ್, ಬಿ.ಎಚ್.ಶಿವರಾಜು, ಟಿ.ಪುಟ್ಟಪ್ಪ, ಡಿ.ಬಿ.ಜಡ್ಡಿಮನಿ, ಬಿ.ಆರ್‌.ಮಂಗಳಗೌರಿ, ಎನ್.ಟಿ.ವಿನುತ, ಗುರುಶಾಂತಪ್ಪ ಹಾಗೂ ವಿಶೇಷ ಕಬಡ್ಡಿ ತರಬೇತುದಾರ ವಿನಾಯಕ್, ಸಣ್ಣಲಿಂಗೇಗೌಡ ಹಾಗೂ ಲಲಿತಾ ಅವರನ್ನು ಸನ್ಮಾನಿಸಲಾಯಿತು. ಬಿಎಸ್‌ಎಫ್‌ ಯೋಧ ಯೋಗೇಶ್ ವೈ.ಎ. ಕಾರ್ಯಕ್ರಮ ನಿರೂಪಿಸಿದರು.ಸುಮಾ ಎಂ.ಸಿ. ಹಾಗೂ ಭಾಗ್ಯಲಕ್ಷ್ಮಿ ವೈ.ವಿ. ಪ್ರಾರ್ಥಿಸಿದರು, ಮಂಜುನಾಥ್ ವೈ.ಎನ್. ಸ್ವಾಗತಿಸಿದರು, ವಿದ್ಯಾರ್ಥಿನಿಯರಾದ ಪವಿತ್ರ ಮತ್ತು ತಂಡದವರು ಸ್ವಾಗತ ನೃತ್ಯ ಮಾಡಿದರು, ಶಿಕ್ಷಕಿ ಪೂರ್ಣಿಮ ಹಾಗೂ ತೀರ್ಥರಾಜು ಕೆ.ಪಿ. ನಿರೂಪಿಸಿದರು.

ವೇದಿಕೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಕುಮಾರಸ್ವಾಮಿ ವೈ.ಬಿ., ನಿ.ಉಪನ್ಯಾಸಕ ನಾಗರಾಜ್, ಶಿಕ್ಷಕರಾದ ಟಿ.ಎಸ್.ಕುಮಾರಸ್ವಾಮಿ, ಹರಿಣಿ, ರಾಜೇಶ್ವರಿ, ಪದ್ಮಾವತಿ, ಶಕುಂತಲಾ, ಪುಷ್ಪಲತಾ, ಹಳೇ ವಿದ್ಯಾರ್ಥಿಗಳಾದ ಎಸ್.ಪಿ.ಚಂದ್ರಶೇಖರ್, ಸಿಆರ್‌ಪಿಎಫ್ ಯೋಧ ನವೀನ್ ಕುಮಾರ್‌, ಶಿವಾನಂದ, ವೈ.ಆರ್‌.ರವಿ, ಕುಲಕರ್ಣಿ, ಇತರರು ಇದ್ದರು.