ಬಸವಾಪಟ್ಟಣ: ಆತ್ಮವಿಶ್ವಾಸವು ಜೀವನದ ಗುರಿ ಸಾಧನೆಗೆ ಸ್ಫೂರ್ತಿದಾಯಕ ಎಂದು ನಿವೃತ್ತ ಶಿಕ್ಷಕರಾದ ವೀರಭದ್ರಪ್ಪ ಅಭಿಪ್ರಾಯಪಟ್ಟರು. ಕೇರಳಾಪುರ ಗ್ರಾಮದ ಶ್ರೀ ವಿದ್ಯಾಗಣಪತಿ ಪ್ರೌಢಶಾಲೆ 1984-85ನೇ ಸಾಲಿನ ಎಸ್.ಎಸ್ ಎಲ್.ಸಿ ವಿದ್ಯಾರ್ಥಿಗಳು ಕೇರಳಾಪುರ ಸಮೀಪ ಜಪದಕಟ್ಟೆ ದೇವಸ್ಥಾನದ ಆವರಣದಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. 1984-85ನೇ ಸಾಲಿನಲ್ಲಿ ಶಿಕ್ಷಕರಾಗಿದ್ದ ಮುಖ್ಯ ಗುರುಗಳಾದ ವೆಂಕಟ್ಟರಾಮಯ್ಯ, ಸಹಶಿಕ್ಷರಾದ ವೀರಭದ್ರಪ್ಪ ರಾಜಶೇಖರಯ್ಯ ಪುಟ್ಟಲಿಂಗಯ್ಯ ಇವರಿಗೆ ಮತ್ತು ಅಂದು ಕಾರ್ಯನಿಹಿಸಿ ದಿವಂಗತರಾಗಿರುವವರ ಧರ್ಮಪತ್ನಿಯರಿಗೆ ಗುರುವಂದನೆ ಸಲ್ಲಿಸಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ದುಡಿಯತ್ತಿರುವ ಪೋಷಕರು ಮಕ್ಕಳಿಗೆ ಮಾನವೀಯತೆ ಬೆಳಸಲು ಶ್ರಮಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. 40 ವರ್ಷಗಳ ಹಿಂದಿನ ಶಾಲಾ ದಿನಗಳನ್ನು ಸ್ಮರಿಸಲು ಸ್ನೇಹ ಸಮನಾವಾಗಿದೆ ಸನ್ಮಾನ ಸ್ವಿಕರಿಸಿದವರ ಪರವಾಗಿ ವೀರಭದ್ರಪ್ಪ ಹಿರಿಯ ವಿದ್ಯಾರ್ಥಿಗಳ ಈ ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.ಕಾರ್ಯಕ್ರಮದ ಯಶಸಿಗೆ 1984-85ನೇ ಸಾಲಿನ ವಿದ್ಯಾರ್ಥಿಗಳಾದ ಮತ್ತು ಇದೇ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾದ ಮಂಜೇಗೌಡ, ಗೋವಿಂದ್, ದಿನೇಶ್ ಅಲ್ಲದೆ 1984-85ನೇ ಸಾಲಿನ ಹಿರಿಯ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಹಿರಿಯ ಶಿಕ್ಷಕರು ಶುಭಕೋರಿದರು. ಮಂಜೇಗೌಡ ಸ್ವಾಗತಿಸಿ ನಿರೂಪಿಸಿದರು. ರವಿ ಅಧ್ಯಕ್ಷತೆ ವಹಿಸಿ, ಗೋವಿಂದ ವಂದನಾರ್ಪಣೆ ನೆರವೇರಿಸಿದರು.
ಶ್ರೀ ವಿದ್ಯಾಗಣಪತಿ ಪ್ರೌಢಶಾಲೆಯಲ್ಲಿ ಗುರುವಂದನೆ
1984-85ನೇ ಸಾಲಿನಲ್ಲಿ ಶಿಕ್ಷಕರಾಗಿದ್ದ ಮುಖ್ಯ ಗುರುಗಳಾದ ವೆಂಕಟ್ಟರಾಮಯ್ಯ, ಸಹಶಿಕ್ಷರಾದ ವೀರಭದ್ರಪ್ಪ ರಾಜಶೇಖರಯ್ಯ ಪುಟ್ಟಲಿಂಗಯ್ಯ ಇವರಿಗೆ ಮತ್ತು ಅಂದು ಕಾರ್ಯನಿಹಿಸಿ ದಿವಂಗತರಾಗಿರುವವರ ಧರ್ಮಪತ್ನಿಯರಿಗೆ ಗುರುವಂದನೆ ಸಲ್ಲಿಸಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ದುಡಿಯತ್ತಿರುವ ಪೋಷಕರು ಮಕ್ಕಳಿಗೆ ಮಾನವೀಯತೆ ಬೆಳಸಲು ಶ್ರಮಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. 40 ವರ್ಷಗಳ ಹಿಂದಿನ ಶಾಲಾ ದಿನಗಳನ್ನು ಸ್ಮರಿಸಲು ಸ್ನೇಹ ಸಮನಾವಾಗಿದೆ ಸನ್ಮಾನ ಸ್ವಿಕರಿಸಿದವರ ಪರವಾಗಿ ವೀರಭದ್ರಪ್ಪ ಹಿರಿಯ ವಿದ್ಯಾರ್ಥಿಗಳ ಈ ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
