ಸಾರಾಂಶ
ಕನ್ನಡಪ್ರಭ ವಾರ್ತೆ ಬಾದಾಮಿ
ತಾಲೂಕಿನ ಮಣ್ಣೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಡಿ.೧೭ ಮತ್ತು ೧೮ರಂದು ಜಾಲಹಳ್ಳಿಯ ಶಿವಾಚಾರ್ಯ ತಪೋಭೂಷನ ಷ.ಬ್ರ ವಿದ್ಯಾಮಾನ್ಯ ಶಿವಾಭಿನವ ಜಗದಾರಾಧ್ಯ ಜತಶಾಂತಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ೬೮ನೇ ಹುಟ್ಟು ಹಬ್ಬದ ನಿಮಿತ್ತ ವರ್ಧಂತಿ ಮಹೋತ್ಸವ ಹಾಗೂ ಗುರು ವಂದನಾ ಮತ್ತು ತುಲಾಭಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮದ ಮುಖಂಡ, ಮಾಜಿ ಜಿ.ಪಂ.ಸದಸ್ಯ ಎಫ್.ಆರ್.ಪಾಟೀಲ ಮಣ್ಣೇರಿ ತಿಳಿಸಿದರು.ನಗರದ ಕಾನಿಪ ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.೧೭ರಂದು ಸಂಜೆ ೬ಗಂಟೆಗೆ ಧರ್ಮಸಭೆ ಡಿ.೧೮ರಂದು ಬೆಳಿಗ್ಗೆ ೧೧ ಗಂಟೆಗೆ ಶ್ರೀಗಳ ಹುಟ್ಟುಹಬ್ಬದ ವರ್ಧಂತಿ ಮಹೋತ್ಸವ ಸಮಾರಂಭ ನಡೆಯಲಿದೆ. ಅಂದು ಮಧ್ಯಾಹ್ನ ೧ ಗಂಟೆಗೆ ಶ್ರೀಗಳಿಗೆ ತುಲಾಭಾರ ಕಾರ್ಯಕ್ರಮ ನಡೆಯಲಿದೆ. ಗ್ರಾಮದ ಭಕ್ತರ ಸಹಕಾರದಿಂದ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಸುಮಾರು ೫ ಸಾವಿರ ಜನ ಭಕ್ತರು, ಸಾರ್ವಜನಿಕರು ಸೇರುವ ನಿರೀಕ್ಷೆ ಇದೆ. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದರು.
ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪ.ಪೂ. ಕಲ್ಲಯ್ಯಜ್ಜನವರು, ನವಲಗುಂದ ಗವಿಮಠದ ಬಸವಲಿಂಗ ಮಹಾಸ್ವಾಮಿಗಳು, ದೇವದುರ್ಗ ಆಸನಕಟ್ಟೆ ವೀರಗೋಟ ಅಡವಿಲಿಂಗ ಮಹಾರಾಜರು ಸೇರಿದಂತೆ ಶ್ರೀಗಳಿಗೆ ಬಾಳೆಹಣ್ಣು, ಸಕ್ಕರೆ, ಬಸವಣ್ಣ ಹೋರಿ ತುಲಾಭಾರ ಸೇವೆ ಜರುಗಲಿದೆ. ಗ್ರಾಮದ ಭಕ್ತರಿಂದ ಜತಶಾಂತಲಿಂಗೇಶ್ವರ ಶ್ರೀಗಳಿಗೆ ಒಬ್ಬರಿಗೆ ೧೯ ತುಲಾಭಾರ ಕಾರ್ಯಕ್ರಮ ನಡೆಯಲಿದೆ ಎಂದರು.ಕಾರ್ಯಕ್ರಮದಲ್ಲಿ ಗುಂಡಕನಾಳ ಬೃಹನ್ಮಠ ಗುರುಲಿಂಗ ಶಿವಾಚಾರ್ಯರು, ನವಗೃಹ ಹಿರೇಮಠ ಶಿವಪೂಜಾ ಶಿವಾಚಾರ್ಯ ಮಹಾಸ್ವಾಮಿಗಳು, ಬೆನಹಾಳ ಹಿರೇಮಠದ ಸದಾಶಿವ ಮಹಾಂತ ಶಿವಾಚಾರ್ಯರು, ಹಿರೂರ ಹಿರೇಮಠದ ಜಯಸಿದ್ದೇಶ್ವರ ಶಿವಾಚಾರ್ಯರು, ವೀರಗೋಟ ಅಡವಿಲಿಂಗ ಮಹಾರಾಜರು, ಜಾಲಹಳ್ಳಿ ರವಿಕಿರಣ ಮಹಾಸ್ವಾಮಿಗಳು, ಶಿವಯೋಗಮಂದಿರ ಸಂಸ್ಥೆ ಉಪಾಧ್ಯಕ್ಷರು ಸದಾಶಿವ ಮಹಾಸ್ವಾಮಿಗಳು, ವಿಜಯಪುರ ಗಾಣಿಗ ಗುರು ಪೀಠದ ಜಯಬಸವ ಕುಮಾರ ಮಹಾಸ್ವಾಮಿಗಳು, ಸಂಸದ ಪಿ.ಸಿ.ಗದ್ದಿಗೌಡರ, ಅಥಣಿ ಶಾಸಕ ಲಕ್ಷ್ಮಣ ಸವದಿ, ಮಾಜಿ ವಿಪ ನಾಯಕ ಎಸ್.ಆರ್.ಪಾಟೀಲ, ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ರೋಣ ಶಾಸಕ ಜಿ.ಎಸ್.ಪಾಟೀಲ, ಮಾಜಿ ಶಾಸಕರಾದ ಆನಂದ ನ್ಯಾಮಗೌಡ, ಎಂ.ಕೆ.ಪಟ್ಟಣಶೆಟ್ಟಿ, ಎಸ್.ಜಿ.ನಂಜಯ್ಯನಮಠ, ಮುಖಂಡರಾದ ಹೊಳೆಬಸು ಶೆಟ್ಟರ, ಕುಮಾರಗೌಡ ಜನಾಲಿ, ಮಹಾಂತೇಶ ಮಮದಾಪೂರ, ಹನಮಂತ ಮಾವಿನಮರದ, ಸಿದ್ದನಗೌಡ ಪಾಟೀಲ ಸೇರಿದಂತೆ ಗಣ್ಯ ಮಾಣ್ಯರು ಆಗಮಿಸುವರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಲ್ಲಾಗೌಡ ಅಯ್ಯನಗೌಡರ, ರಾಮನಗೌಡ ಗೌಡರ, ಭೀಮಣ್ಣ ಕುರಿ, ಮಲ್ಲಣ್ಣ ಅಯ್ಯನಗೌಡರ, ಮಲ್ಲು ಮಾಡಲಗೇರಿ, ಭೀಮನಗೌಡ ಗೌಡರ, ದೇವೇಂದ್ರಗೌಡ ಗೌಡರ, ಬಿ.ಬಿ. ಪಾಟೀಲ, ಬಿ.ಆರ್. ಪಾಟೀಲ, ಚಂದ್ರಗೌಡ ಪಾಟೀಲ, ರಾಜು ಬಾಲನ ಗೌಡರ, ಎನ್.ಎಚ್. ಪಾಟೀಲ, ಎಸ್.ಎನ್. ಅಯ್ಯನಗೌಡರ, ಎಸ್.ಎಸ್. ಬಾಳನಗೌಡರ, ಬಿ.ಎಂ. ಗಾಣಿಗೇರ, ಬಿ.ಜೆ. ಢಾಣಕಶಿರೂರ, ರೇಣುಕಾ ಅಯ್ಯನಗೌಡರ ಸೇರಿದಂತೆ ಇತರರು ಭಾಗವಸಿದ್ದರು. ---೧೪ಬಿಡಿಎಂ೧